KGF 2 : ಮಲಯಾಳಂ ಬಾಕ್ಸ್ ಆಫೀಸ್ ಗೆ ‘ಸುಲ್ತಾನ’ನಾದ ರಾಕಿ : ಅತಿ ಹೆಚ್ಚು ಆರಂಭಿಕ ದಿನದ ಗಳಿಕೆ
KGF 2 ಸಿನಿಮಾ ಕೇವಲ ಬಾಲಿವುಡ್ ಅಷ್ಟೇ ಅಲ್ಲ ತಮಿಳುನಾಡು ಮಲಯಾಳಂನಲ್ಲೂ ಡಾಮಿನೇಟ್ ಮಾಡ್ತಿದೆ… ಬಾಲಿವುಡ್ ನಲ್ಲಿ ಬಾಕ್ಸ್ ಆಫೀಸ್ ನಲ್ಲಿ ಫಸ್ಟ್ ಡೇ ಅತಿ ಹೆಚ್ಚು ಕಲೆಕ್ಷನ್ ಮಾಡಿರುವ ಸಿನಿಮಾ KGF 2 . ಈ ಮೂಲಕ ಬಾಲಿವುಡ್ ಮಂದಿಯನ್ನ ಬೆಚ್ಚಿ ಬೀಳಿಸಿದೆ.. ಬಾಕ್ಸ್ ಆಫೀಸ್ ಸುಲ್ತಾನ ಸಲ್ಮಾನ್ ಖಾನ್ , ಬಾದ್ ಷಾ ಶಾರುಕ್ ಖಾನ್ , ಮಿಸ್ಟರ್ ಪರ್ಫೆಕ್ಟ್ ಅಮಿರ್ ಖಾನ್ ರಂತಹ ಸಿನಿಮಾಗಳನ್ನ ಹಿಂದಿಕ್ಕಿದೆ..
ತಮಿಳುನಾಡಿನಲ್ಲಿ ಬೀಸ್ಟ್ ಗಿಂತ ಅತಿ ಹೆಚ್ಚು ಉತ್ತಮವಾಗಿ ಪ್ರದರ್ಶನ ಕಾಣ್ತಿದೆ.. ಇತ್ತ ಮಾಲಿವುಡ್ ನಲ್ಲಿ ಸರ್ವಕಾಲೀನ ಆರಂಭಿಕ ಗಳಿಕೆ ವಿಚಾರದಲ್ಲಿ ‘ಭೀಷ್ಮ ಪರ್ವಂ’ , ಮರಕ್ಕರ್ ನಂತಹ ಸಿನಿಮಾಗಳನ್ನೇ ಹಿಂದಿಕ್ಕಿದ್ದು , ಸದ್ಯಕ್ಕೆ ನಂಬರ್ ಸ್ಥಾನದಲ್ಲಿದೆ..
ಹಾಗಾದ್ರೆ ಕೇರಳದಲ್ಲಿ ಇಲ್ಲಿಯವರೆಗೂ ಫಸ್ಟ್ ಡೇ ಅತಿ ಹೆಚ್ಚು ಕಲೆಕ್ಷನ್ ಮಾಡಿರುವ 4 ಸಿನಿಮಾಗಳು ಯಾವುವು..??
- KGF 2 – 48 ಕೋಟಿ
ಪ್ರಶಾಂತ್ ನೀಲ್ ನಿರ್ದೇಶನ ಯಶ್ ನಟನೆಯ ‘ಕೆಜಿಎಫ್’ ಚಾಪ್ಟರ್ 2 ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸುತ್ತಿದೆ.. ಕೇರಳದ ಗಲ್ಲಾಪೆಟ್ಟಿಗೆಯಲ್ಲಿ ತನ್ನ ಅಸ್ತಿತ್ವವನ್ನು ಸ್ಥಾಪಿಸಿದೆ, ಮೋಹನ್‌ಲಾಲ್ ಅಭಿನಯದ ‘ಒಡಿಯನ್’ ಗಿಂತ ಅಧಿಕ ಕಲೆಕ್ಷನ್ ಮಾಡುವ ಮೂಲಕ 7.30 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿ ಹೊಸ ದಾಖಲೆ ಬರೆದಿದೆ.. ಕೇರಳದ ಬಾಕ್ಸ್ ಆಫೀಸ್‌ನಲ್ಲಿ ಮೊದಲ ದಿನ ಸಿನಿಮಾ 7.48 ಕೋಟಿ ಗಳಿಸಿದೆ ಎಂದು ವರದಿಯಾಗಿದೆ. ಚಿತ್ರವು ಮೊದಲ ದಿನವೇ ಭಾರತದಾದ್ಯಂತ 134.5 ಕೋಟಿ ಗಳಿಸಿದೆ..
- ಒಡಿಯನ್ – 7.2 ಕೋಟಿ
ಮೋಹನ್‌ಲಾಲ್ ಅಭಿನಯದ ‘ಒಡಿಯನ್ ಮೊದಲ ಸಿನ ಅದು ಕೇರಳದ ಬಾಕ್ಸ್ ಆಫೀಸ್‌ನಲ್ಲಿ 7.2 ಕೋಟಿಗೂ ಹೆಚ್ಚು ಗಳಿಸಿತ್ತು.
- ‘ ಮರಕ್ಕರ್ – 6.27 ಕೋಟಿ
ಮೋಹನ್ ಲಾಲ್ ಅಭಿನಯದ ‘ಮರಕ್ಕರ್: ಲಯನ್ ಆಫ್ ದಿ ಅರೇಬಿಯನ್ ಸೀ’ ಚಿತ್ರಕ್ಕಾಗಿ ಜನ ಕಾತರದಿಂದ ಎದುರು ನೋಡುತ್ತಿದ್ದರು. ಮಹಾಕಾವ್ಯದ ನಾಟಕದ ಪೋಸ್ಟರ್‌ಗಳು ಮತ್ತು ಟ್ರೇಲರ್‌ಗಳು ಭರವಸೆಯಂತೆ ಕಾಣುತ್ತಿತ್ತು.. ಸಿನಿಮಾ ಬಿಡುಗಡೆಯಾದ ಆರಂಭಿಕ ದಿನದಲ್ಲಿ ಮಲಯಾಳಂನಲ್ಲಿ 6.27 ಕೋಟಿಗೂ ಹೆಚ್ಚು ಹಣವನ್ನು ಗಳಿಸುವ ಮೂಲಕ ಕೇರಳ ಬಾಕ್ಸ್ ಆಫೀಸ್‌ನಲ್ಲಿ ಕಮಾಲ್ ಮಾಡಿತ್ತು..
- ಭೀಷ್ಮ ಪರ್ವಂ’ – 25 ಕೋಟಿ
ಬಹುನಿರೀಕ್ಷಿತ ಮಮ್ಮುಟ್ಟಿ-ಅಮಲ್ ನೀರದ್ ಗ್ಯಾಂಗ್‌ಸ್ಟರ್ ಡ್ರಾಮಾ ಚಿತ್ರ ‘ಭೀಷ್ಮ ಪರ್ವಂ’ ಪ್ರೇಕ್ಷಕರ ನಿರೀಕ್ಷೆಯ ಮಟ್ಟವನ್ನು ಮೀರಿದೆ. ಮಾತ್ರವಲ್ಲದೆ ಕೇರಳ ಬಾಕ್ಸ್ ಆಫೀಸ್‌ನಲ್ಲಿ ಮೊದಲ ದಿನವೇ 6 ರಿಂದ 6.25 ಕೋಟಿ ಗಳಿಸಿದೆ ಎಂದು ವರದಿಯಾಗಿದೆ.