KGF 2 – ಬಾಕ್ಸ್ ಆಫೀಸ್ ಆಳುತ್ತಿರುವ KGF 2 IMBD ರೇಟಿಂಗ್ ನಲ್ಲೂ RRR , ಜೈ ಭೀಮ್ ಹಿಂದಿಟ್ಟಿದೆ..!!!
ಬಾಕ್ಸ್ ಆಫೀಸ್ ನಲ್ಲಿ ತೂಫಾನ್ ಎಬ್ಬಿಸಿರು KGF 2 ಬಾಲಿವುಡ್ ನಲ್ಲಿ ಅತಿ ಹೆಚ್ಚು ಗಳಿಕೆ ಕಂಡ ಸಿನಿಮಾ ಎಂಬ ಇತಿಹಾಸ ಸೃಷ್ಟಿಸುವ ಮೂಲಕ ಬಾಲಿವುಡ್ ಕಿಂಗ್ ಗಳನ್ನ ಸಿನಿಮಾವನ್ನ ಸೈಡ್ ಲೈನ್ ಮಾಡಿದೆ..
RRR ನಂತರ, ಈಗ ಯಶ್ ಅವರ KGF 2 ಬಾಕ್ಸ್ ಆಫೀಸ್ ನ ಶೇಕ್ ಮಾಡ್ತಿದೆ… ಬಾಲಿವುಡ್ ಸ್ಟಾರ್ ಗಳನ್ನ ನಡುಗಿಸುತ್ತಿದೆ.. ಸಿನಿಮಾಗೆ ಉತ್ತಮ ವಿಮರ್ಶೆಗಳು ಸಿಗುತ್ತಿವೆ..
KGF 2 ಬಾಕ್ಸ್ ಆಫೀಸ್ ನಲ್ಲಿ ಮೊದಲ ದಿನವೇ KGF 2 ಕರ್ನಾಟಕದಲ್ಲಿ 38 ಕೋಟಿ , ಹಿಂದಿ ಅವತರಣಿಕೆಯಲ್ಲಿ 40 ಕೋಟಿಗೂ ಅದಿಕ ಕಲೆಕ್ಷನ್ ಮಾಡಿದೆ.. ಓವರ್ ಆಲ್ ಆಗಿ ಕೇವಲ ಭಾರತದಲ್ಲೇ 134 ಕೋಟಿ ರೂಪಾಯಿ ಗಳಿಸಿದೆ.. ಅದು ಫಸ್ಟ್ ಡೇ… ಗ್ಲೋಬಲ್ ಆಗಿ ತೆಗೆದುಕೊಂಡ್ರೆ ಬಾಕ್ಸ್ ಆಫೀಸ್ ಕಲಲೆಕ್ಷನ್ ಫಸ್ಟ್ ಡೇ , ಬಾಹುಬಲಿ , ಬಾಹುಬಲಿ 2 , RRR , ಬೀಸ್ಟ್ ಎಲ್ಲದರ ರೆಕಾರ್ಡ್ ಚಿಂದಿ ಚಿತ್ರಾನ್ನ ಮಾಡಿದೆ..
ಇದೀಗ IMBD ರೇಟಿಂಗ್ ನಲ್ಲೂ KGF 2 ನದ್ದೇ ಹವಾ..!!!
ಕೆಜಿಎಫ್ ಚಾಪ್ಟರ್ 2 ಚಿತ್ರ IMDbಯಲ್ಲಿ ಅಗ್ರ ಭಾರತೀಯ ಚಲನಚಿತ್ರಗಳ ಪಟ್ಟಿಯಲ್ಲಿ 2ನೇ ಅತಿ ಹೆಚ್ಚು ರೇಟಿಂಗ್ ಪಡೆದ ಚಲನಚಿತ್ರವಾಗಿದೆ.
ಕೆಜಿಎಫ್: ಚಾಪ್ಟರ್ 2 ಚಿತ್ರ, ‘RRR’, ‘ಜೈ ಭೀಮ್’ ಮತ್ತು ‘ಅನ್ಬೆ ಶಿವಂ’ ಚಿತ್ರಗಳನ್ನ ಹಿಂದಿಕ್ಕಿ IMDbನಲ್ಲಿ ನಂ. 1 ಭಾರತೀಯ ಚಲನಚಿತ್ರವಾಗಿ ಹೊರಹೊಮ್ಮಿದೆ. ಕೆಜಿಎಫ್ 2 ಚಿತ್ರ ಐಎಂಡಿಬಿನಲ್ಲಿ 10ಕ್ಕೆ 9.8 ರೇಟಿಂಗ್ ಪಡೆದಿದೆ.
5 ಭಾಷೆಗಳಲ್ಲಿ ಬಿಡುಗಡೆಯಾದ ಚಿತ್ರ ಎಲ್ಲಾ ಭಾಷೆಗಳಿಂದಲೂ ಭರ್ಜರಿ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ. ಬಾಕ್ಸ್ ಆಫೀಸ್ ಗಳಿಕೆಯಲ್ಲೂ ಚಿತ್ರ ಹಿಂದೆಬಿದ್ದಿಲ್ಲ. ಕೆಜಿಎಫ್-2 ಚಿತ್ರದ ಮೊದಲ ದಿನದ ವರ್ಲ್ಡ್ ವೈಡ್ ಕಲೆಕ್ಷನ್ 165 ಕೋಟಿ. ಎರಡನೇ ದಿನ 139.25 ಕೋಟಿ ರೂ. ಎರಡು ದಿನದ ಒಟ್ಟು ವ್ಯವಹಾರ 304 ಕೋಟಿ ರೂ. ಸುಮಾರು 100 ಕೋಟಿ ಬಜೆಟ್‌ನಲ್ಲಿ ತಯಾರಾದ ಕೆಜಿಎಫ್ ಭಾರತೀಯ ಚಲನಚಿತ್ರರಂಗದಲ್ಲಿ ದಾಖಲೆಯನ್ನೇ ಬರೆದಿದೆ.