KGF 2 : ಸಿನಿಮಾ ನೋಡಿ ತೂಫಾನಿ ಟ್ವೀಟ್ ಮಾಡಿದ RGV
ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಬಗ್ಗೆ ಪ್ರತ್ಯೇಕವಾಗಿ ಹೇಳುವ ಅವಶ್ಯಕತೆ ಇಲ್ಲ. ಯಾರು ಏನು ಅಂದ್ರೂ ತಲೆ ಕಡೆಸಿಕೊಳ್ಳದ ರಾಮ್ ಗೋಪಾಲ್ ವರ್ಮಾ ಒಂದು ರೀತಿಯಾಗಿ ಸೋಲೋ ಮ್ಯಾನ್ ಇದ್ದಂತೆ.
ತಮಗೆ ಇಷ್ಟವಾಗಿದ್ದನ್ನೇ ಮಾಡುತ್ತಾ ಸುದ್ದಿಯಾಗುತ್ತಲೇ ಇರುತ್ತಾರೆ. ಆತ ಮಾಡುವ ಟ್ವೀಟ್ ಎಷ್ಟೋ ಜನರ ನಿದ್ರೆ ಕದಿಯುತ್ತೆ… ಮಾಡೆಲ್ಗಳ ಜತೆ ಬಾರ್ ನಲ್ಲಿ ಪಾರ್ಟಿ ಮಾಡುವುದು ಮತ್ತು ತಮ್ಮದೇ ಸಿನಿಮಾಗಳಲ್ಲಿ ನಟಿಸಿರುವ ನಟಿಯರ ಜತೆ ಪಬ್ ಗಳಲ್ಲಿ ತಮ್ಮಿಷ್ಟ ಬಂದಂತೆ ಇರೋದು.. ಟ್ರೋಲ್ ಆಗೋದು ಇದೆಲ್ಲಾ ಅವರಿಗೆ ಅಭ್ಯಾಸ ಹಾಗೂ ಹವ್ಯಾಸವೂ ಆಗಿಬಿಟ್ಟಿದೆ..
ಇದೀಗ ರಾಮ್ ಗೋಪಾಲ್ ವರ್ಮಾ ಅವರು ದೇಶಾದ್ಯಂತ ಸಂಚಲನ ಸೃಷ್ಟಿ ಮಾಡಿರುವ ಬಾಕ್ಸ್ ಆಫೀಸ್ ನಲ್ಲಿ ತೂಫಾನ್ ಎಬ್ಬಿಸಿರುವ , KGF 2 ಬಗ್ಗೆ ಶಾಕಿಗ್ ಪ್ರತಿಕ್ರಿಯೆ ನೀಡಿ ಎಲ್ಲರೂ ಉಬ್ಬೇರಿರುವಂತೆ ಮಾಡಿದ್ದಾರೆ..
ಆರ್ ಜಿವಿ ಸರಣಿ ಟ್ವೀಟ್‌ಗಳ ಮೂಲಕ KGF 2 ಸಿನಿಮಾವನ್ನ ಬಾಯ್ತುಂಬ ಹೊಗಳಿದ್ದಾರೆ. ವಿಶೇಷವಾಗಿ ಪ್ರಶಾಂತ್ ನೀಲ್ ಅವರನ್ನು ಹೊಗಳಿದ್ದಾರೆ. ಆದ್ರೆ ಟ್ವೀಟ್ ನಲ್ಲಿ ಸ್ಟಾರ್ ನಟರ ಸಂಭಾವನೆ ಬಗ್ಗೆ ಮಾತನಾಡಿ ತೂಫಾನ್ ಎಬ್ಬಿಸಿದ್ದಾರೆ..
ಸಿನಿಮಾ ನಿರ್ಮಾಣಕ್ಕೆ ಎಷ್ಟು ಹಣ ಹಾಕಿದ್ರೆ ಅಷ್ಟು ಹಣ ವಾಪಸ್ ಬರುತ್ತೆ ಎಂಬುದಕ್ಕೆ ಕೆಜಿಎಫ್-2 ಸಿನಿಮಾ ಉದಾಹರಣೆ. ತಯಾರಿಕೆಯ ಗುಣಮಟ್ಟ ಹೆಚ್ಚಾದಷ್ಟೂ ಯಶಸ್ಸು ಹೆಚ್ಚುತ್ತದೆ. ಸ್ಟಾರ್ ಹೀರೋಗಳಿಗೆ ಭಾರೀ ಸಂಭಾವನೆ ನೀಡುವುದು ವ್ಯರ್ಥ ಎಂದು ಆರ್ಜಿವಿ ಟ್ವೀಟ್ ಮಾಡಿದ್ದಾರೆ.
ಬಾಲಿವುಡ್ ಮತ್ತು ಟಾಲಿವುಡ್ ನಲ್ಲಿ ಸ್ಟಾರ್ ಹೀರೋಗಳ ಸಂಭಾವನೆ ಭಾರೀ ಪ್ರಮಾಣದಲ್ಲಿದೆ. ಕಾಲಿವುಡ್‌ನಲ್ಲೂ ಇದೇ ಪರಿಸ್ಥಿತಿ. ಆದರೆ, ಇವುಗಳಿಗೆ ಹೋಲಿಸಿದರೆ ಕನ್ನಡ ಚಿತ್ರರಂಗದಲ್ಲಿ ಹೀರೋಗಳ ಸಂಭಾವನೆ ತೀರಾ ಕಡಿಮೆ. ಕೆಜೆಎಫ್‌ನಂತಹ ಚಿತ್ರಗಳನ್ನು ಹೊರತುಪಡಿಸಿದರೆ.. ಬಹುತೇಕ ಚಿತ್ರಗಳು ಕಡಿಮೆ ಬಜೆಟ್‌ನಲ್ಲಿವೆ ಎಂದು ಆರ್ಜಿವಿ ಟ್ವೀಟ್ ಮಾಡಿದ್ದಾರೆ.