KGF 2 ತೂಫಾನ್ ಎಂದ RGV : ಬಾಲಿವುಡ್ ನಲ್ಲಿ ಸುನಾಮಿ ಎಬ್ಬಿಸಿದ್ಯಾಕೆ…??
ಬಾಕ್ಸ್ ಆಫೀಸ್ ನಲ್ಲಿ ತೂಫಾನ್ ಎಬ್ಬಿಸಿರು KGF 2 ಬಾಲಿವುಡ್ ನಲ್ಲಿ ಅತಿ ಹೆಚ್ಚು ಗಳಿಕೆ ಕಂಡ ಸಿನಿಮಾ ಎಂಬ ಇತಿಹಾಸ ಸೃಷ್ಟಿಸುವ ಮೂಲಕ ಬಾಲಿವುಡ್ ಕಿಂಗ್ ಗಳನ್ನ ಸಿನಿಮಾವನ್ನ ಸೈಡ್ ಲೈನ್ ಮಾಡಿದೆ..
RRR ನಂತರ, ಈಗ ಯಶ್ ಅವರ KGF 2 ಬಾಕ್ಸ್ ಆಫೀಸ್ ನ ಶೇಕ್ ಮಾಡ್ತಿದೆ… ಬಾಲಿವುಡ್ ಸ್ಟಾರ್ ಗಳನ್ನ ನಡುಗಿಸುತ್ತಿದೆ.. ಸಿನಿಮಾಗೆ ಉತ್ತಮ ವಿಮರ್ಶೆಗಳು ಸಿಗುತ್ತಿವೆ..
ಈ ಸಿನಿಮಾ ಮೊದಲ ದಿನವೇ ವರ್ಲ್ಡ್ ವೈಡ್ ಬಾಕ್ಸ್ ಆಫೀಸ್ ನಲ್ಲಿ 165 ಕೋಟಿ ಗಳಿಸಿದೆ. ಥಿಯೇಟರ್‌ಗಳು ಹೌಸ್‌ಫುಲ್ ಆಗುತ್ತಿವೆ.. ವೀಕೆಂಡ್ ಆಗಿರುವ ಕಾರಣ ಇಂದು ನಾಳೆ ಇನ್ನಷ್ಟು ಧೂಮ್ ಧಮಾಕಾ ಆಗೋದ್ರಲ್ಲಿ ಡೌಟೇ ಇಲ್ಲ..
ರಾಮ್ ಗೋಪಾಲ್ ವರ್ಮಾ ಅವರು ದೇಶಾದ್ಯಂತ ಸಂಚಲನ ಸೃಷ್ಟಿ ಮಾಡಿರುವ ಬಾಕ್ಸ್ ಆಫೀಸ್ ನಲ್ಲಿ ತೂಫಾನ್ ಎಬ್ಬಿಸಿರುವ , KGF 2 ಬಗ್ಗೆ ಶಾಕಿಗ್ ಪ್ರತಿಕ್ರಿಯೆ ನೀಡಿ ಎಲ್ಲರೂ ಉಬ್ಬೇರಿರುವಂತೆ ಮಾಡಿದ್ದಾರೆ..
ಅದ್ರಲ್ಲೂ ಬಾಲಿವುಡ್ ಮಂದಿಗೆ ಸರಿ ಟಾಂಟ್ ಮಾಡಿದ್ದಾರೆ.. ಹೌದು ಸಿನಿಮಾವನ್ನ ಮೆಚ್ಚಿ , ಪ್ರಶಾಂತ್ ನೀಲ್ ಅವರಿಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಆರ್ ಜಿ ವಿ ಇದೀಗ ಕೆಜಿಎಫ್ ಸಿನಿಮಾ ಮೂಲಕ ಬಾಲಿವುಡ್ ಮೇಲೆ ಸ್ಯಾಂಡಲ್ ವುಡ್ ಅಣುಬಾಂಬ್ ದಾಳಿ ಮಾಡಿದೆ ಎಂದು ಹೇಳಿಬಿಟ್ಟಿದ್ದಾರೆ…
ಇದೀಗ ಈ ಸಿನಿಮಾ ಬಗ್ಗೆ ಆರ್ ಜಿ ವಿ ರಿವ್ಯೂವ್ ನಿಂದ ಬಾಲಿವುಡ್ ನಲ್ಲಿ ಸುನಾಮಿ ಅಪ್ಪಳಿಸಿದೆ..
ಈ ಬಗ್ಗೆ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ..
ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್2 ಸಿನಿಮಾ ಗ್ಯಾಂಗ್‌ಸ್ಟರ್ ಸಿನಿಮಾ ಅಲ್ಲ. ಬಾಲಿವುಡ್ ಇಂಡಸ್ಟ್ರಿಗೆ ಇದೊಂದು ಹಾರರ್ ಸಿನಿಮಾ.
ಕೆಜಿಎಫ್ ಯಶಸ್ಸಿನಿಂದ ಬಾಲಿವುಡ್ ಚೇತರಿಸಿಕೊಳ್ಳಲು ಕೆಲವು ವರ್ಷಗಳೇ ಬೇಕು. ಬಾಲಿವುಡ್ ಸ್ಟಾರ್ಸ್ ಓಪನಿಂಗ್ ಕಲೆಕ್ಷನ್ಸ್ ಮೇಲೆ ಯಶ್ ಮಷಿನ್ ಗನ್ ನಿಂದ ದಾಳಿ ನಡೆಸುತ್ತಿದ್ದಂತೆ ರಾಖಿ ಭಾಯ್ ಮುಂಬೈಗೆ ಬಂದು ದರೋಡೆಕೋರರ ಮೇಲೆ ಮಷಿನ್ ಗನ್ ಮೂಲಕ ದಾಳಿ ನಡೆಸಿದ್ದಾರೆ.
ಫಸ್ಟ್ ಡೇ ಕಲೆಕ್ಷನ್ ನೊಂದಿಗೆ ಸ್ಯಾಂಡಲ್ ವುಡ್ ಕೆಜಿಎಫ್ ಮೂಲಕ ಬಾಲಿವುಡ್ ಮೇಲೆ ದಾಳಿ ಮಾಡಿದೆ ಎಂದು ಟ್ವೀಟ್ ಮಾಡಿದ್ದಾರೆ.
ಕೆಜಿಎಫ್ ರಿಲೀಸ್ ಆಗುವವರೆಗೂ ಬಿಟೌನ್ ಮಾತ್ರವಲ್ಲ ತೆಲುಗು, ತಮಿಳು ಚಿತ್ರರಂಗವೂ ಕನ್ನಡ ಚಿತ್ರರಂಗವನ್ನು ಅಷ್ಟೊಂದು ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದ್ರೆ ಪ್ರಶಾಂತ್ ನೀಲ್ ಅವರು ಕನ್ನಡ ಚಿತ್ರರಂಗವನ್ನು ಪ್ರಪಂಚದ ಮ್ಯಾಪ್ ನಲ್ಲಿರಿಸಿದ್ದಾರೆ ಎಂದಿದ್ಧಾರೆ.