KGF 2 : ವೃತ್ತಿ ಜೀವನ ಆರಂಭದಲ್ಲೇ ಶ್ರೀನಿಧಿಗೆ ಖುಲಾಯಿಸಿದ ಅದೃಷ್ಟ
ಕೆಜಿಎಫ್ ನಾಯಕಿ ಶ್ರೀನಿಧಿ ಶೆಟ್ಟಿ ಅವರು ಸಿನಿಮಾ ಮೂಲಕ ಗಮನ ಸೆಳೆದಿದ್ದಾರೆ.. ಶ್ರೀನಿಧಿ ರಮೇಶ್ ಶೆಟ್ಟಿ ಅವರು ತುಳು ಮಾತನಾಡುವ ತುಳುವ ಬಂಟ ಕುಟುಂಬದಲ್ಲಿ ಜನಿಸಿದರು.. ಈ ಕರಾವಳಿ ಸುಂದರಿ 21 ಅಕ್ಟೋಬರ್ 1992 ರಂದು ಜನಿಸಿದರು.
ಇವರ ತಂದೆ-ತಾಯಿ – ತಂದೆ ರಮೇಶ್ ಶೆಟ್ಟಿ ಮೂಲ್ಕಿ ಪೇಟೆಯವರು, ತಾಯಿ ಕುಶಾಲಾ ಕಿನ್ನಿಗೋಳಿ ತಾಳಿಪಾಡಿ ಗುತ್ತುವರು.
ಶ್ರೀನಿಧಿ ಶ್ರೀ ನಾರಾಯಣ ಗುರು ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಣ ಪಡೆದರು. ನಂತರ ಸೇಂಟ್ ಅಲೋಶಿಯಸ್ ಪ್ರಿ-ಯೂನಿವರ್ಸಿಟಿ ಕಾಲೇಜಿನಲ್ಲಿ ಪ್ರಿ-ಯೂನಿವರ್ಸಿಟಿ ಕೋರ್ಸ್ ಅನ್ನು ಪಡೆದರು.
ನಂತರ ಬೆಂಗಳೂರಿನ ಜೈನ್ ವಿಶ್ವವಿದ್ಯಾನಿಲಯದಿಂದ ಬ್ಯಾಚುಲರ್ ಆಫ್ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಪದವಿಯನ್ನು ಪಡೆದರು ಮತ್ತು ಡಿಸ್ಟಿಂಕ್ಷನ್‌ನಲ್ಲಿ ಪದವಿ ಪಡೆದರು.
ಶ್ರೀನಿಧಿ ಅವರು ಬೆಂಗಳೂರಿನ ಜೈನ್ ವಿಶ್ವವಿದ್ಯಾನಿಲಯದಿಂದ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ನಲ್ಲಿ ಪದವಿ ಪಡೆದ ನಂತರ ಮಾಡೆಲಿಂಗ್ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅವರು 2016 ರ ಮಿಸ್ ದಿವಾ ಸ್ಪರ್ಧೆಯಲ್ಲಿ ಸ್ಪರ್ಧಿಸಿದರು ಮತ್ತು ಮಿಸ್ ಸುಪ್ರಾನ್ಯಾಷನಲ್ ಇಂಡಿಯಾ ಕಿರೀಟ ಗೆದ್ದರು. ಶ್ರೀನಿಧಿ ಅವರು ಭಾರತವನ್ನು ಪ್ರತಿನಿಧಿಸುವಾಗ ಜಾಗತಿಕ ಸೌಂದರ್ಯ ಸ್ಪರ್ಧೆಯಾದ ಮಿಸ್ ಸುಪ್ರಾನ್ಯಾಷನಲ್ 2016 ಕ್ರೌನ್ ಮುಡಿಗೇರಿಸಿಕೊಂಡರು..
ಶ್ರೀನಿಧಿ ಶೆಟ್ಟಿ ಇತ್ತೀಚೆಗೆ ಸಂದರ್ಶನವೊಂದ್ರಲ್ಲಿ “ ಸಿನಿಮಾ ಮಾಡುವುದು ನನ್ನ ಆಸೆಯೇ ಆಗಿತ್ತು.. ನನ್ನ ವೃತ್ತಿಜೀವನದ ಆರಂಭದಲ್ಲಿ ನನಗೆ ದೊಡ್ಡ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ ಎಂದು ಭಾವಿಸುತ್ತೇನೆ, ಇದೆಲ್ಲವೂ ಕನಸಿನಂತೆ ಇದೆ ಎಂದಿದ್ದಾರೆ..