Prabhas : ಮದುವೆ ಬಗ್ಗೆ ಹೀಗ್ಯಾಕ್ ಹೇಳಿದ್ರು ಪ್ರಭಾಸ್..!!!
ಬಾಹುಬಲಿ ಖ್ಯಾತಿಯ ಭಾರತದ ಬಿಗ್ ಸ್ಟಾರ್ ಪ್ರಭಾಸ್ ಗೆ ಈಗ ಸುಮಾರು 42 ವರ್ಷ ಆದ್ರೂ ಇನ್ನೂವರೆಗೂ ಮದುವೆಯಾಗದೇ ಬ್ಯಾಚುಲರ್ ಆಗಿ ಉಳಿದಿದ್ದಾರೆ. ಪ್ರಭಾಸ್ ಸದ್ಯ ಭಾರತದ ಮೋಸ್ಟ್ ಡಿಸೈರೆಬಲ್ ಬ್ಯೂಚ್ಯುಲರ್…
ಪ್ರಸ್ತುತ ಪ್ರಭಾಸ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.. ಮಾರ್ಚ್ 11 ರಂದು ಅವರ ರಾಧೆ ಶ್ಯಾಮ್ ಸಿನಿಮಾ ವಿಶ್ವಾದ್ಯಂತ 5 ಭಾಷೆಗಳಲ್ಲಿ ರಿಲೀಸ್ ಆಗಿ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದೆ..
ಈ ನಡುವೆ ಪ್ರಭಾಸ್ ಮದುವೆ ಯಾವಾಗ ಎಂದು ಅಭಿಮಾನಿಗಳು ಪ್ರಶ್ನೆಗಳನ್ನ ಮಾಡುತ್ತಿದ್ದಾರೆ.. ಮೋಸ್ಟ್ ಹ್ಯಾಂಡ್ಸಮ್ ಡಿಸೈರೆಬಲ್ ಮೆಸನ್ ಪ್ರಭಾಸ್ ಮದುವೆಯಾಕಾಗಿಲ್ಲ ಅನ್ನೋ ಪ್ರಶ್ನೆ ಎಲ್ಲರನ್ನೂ ಕಾಡೋದು ಸಹಜ..
ಅದಕ್ಕೆ ಇತ್ತೀಚೆಗೆ ಪ್ರಭಾಸ್ ಉತ್ತರಿಸಿದ್ದಾರೆ. ಅಂದ್ಹಾಗೆ ಪ್ರಭಾಸ್ ಹಾಗೂ ಅನುಷ್ಕಾ ಜೋಡಿ ವಿವಾಹವಾಗಬಹುದೆಂಬ ವದಂತಿಗಳು ಹಲವಾರು ವರ್ಷಗಳಿಂದ ಇವೆ.. ಆದ್ರೆ ಇಬ್ಬರೂ ವದಂತಿಗಳನ್ನ ತಳ್ಳಿ ಹಾಕುತ್ತಲೇ ಬಂದಿದ್ದಾರೆ..
ರಾಷ್ಟ್ರೀಯ ಮಾಧ್ಯಮದ ಜೊತೆಗೆ ಸಂದರ್ಶವೊಂದ್ರಲ್ಲಿ ಈ ಬಗ್ಗೆ ಮಾತನಾಡಿರೋ ಪ್ರಭಾಸ್ ಅವರು “ ನಾನು ಹೋದಲ್ಲೆಲ್ಲಾ ನನ್ನ ಮದುವೆಯ ಬಗ್ಗೆ ಪ್ರಶ್ನೆಗಳು ಬರುತ್ತವೆ.. ಆದ್ರೆ ಇದರಿಂದ ನನಗೆ ಬೇಸರವಾಗೋದಿಲ್ಲ.. ಯಾಕಂದ್ರೆ ಜನರು ನನ್ನ ಮದುವೆಯ ಬಗ್ಗೆ ಕೇಳಿದಾಗ ನಾನು ಕಿರಿಕಿರಿಗೊಳ್ಳುವುದಿಲ್ಲ. ಇದು ಅವರ ಕಾಳಜಿಯನ್ನ ತೋರುತ್ತೆ.. ಅದನ್ನ ನಾನು ಅರ್ಥಮಾಡಿಕೊಂಡಿದ್ದೇನೆ. ಇದು ಸಾಕಷ್ಟು ಸಹಜ ಮತ್ತು ಸಾಮಾನ್ಯ ಪ್ರಶ್ನೆಯಾಗಿದೆ. ನಾನು ಅವರ ಸ್ಥಾನದಲ್ಲಿದ್ದರೆ, ನಾನು ಸಹ ಕಾಳಜಿ ವಹಿಸುತ್ತೇನೆ” ಎಂದಿದ್ದಾರೆ..
ಅಲ್ಲದೇ ಮದುವೆ ಯಾವಾಗ ಎಂಬ ಪ್ರಶ್ನೆಗೆ ಉತ್ತರಿಸಿದ ‘ಡಾರ್ಲಿಂಗ್’ , ಈ ಪ್ರಶ್ನೆಗೆ ನನ್ನ ಬಳಿ ಉತ್ತರ ಸಿಕ್ಕಾಗ ಖಂಡಿತಾ ಘೋಷಣೆ ಮಾಡುತ್ತೇನೆ ಎಂದು ನಗುತ್ತಾ ನಾಜೂಕಾಗಿ ಪ್ರಶ್ನೆಯಿಂದ ಜಾರಿಕೊಂಡಿದ್ದಾರೆ..
ಸದ್ಯ ಪ್ರಭಾಸ್ ಅವರು ಸಲಾರ್ , ಆದಿಪುರುಷ್ ನಂತಹ ಬಿಗ್ ಬೆಜೆಟ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ..