KGF 2 : ಭಾರತದಲ್ಲಿ ಸೌತ್ ಸಿನಿಮಾಗಳ ದರ್ಬಾರ್ : ಬಾಲಿವುಡ್ ಗೆ ಎಚ್ಚರಿಕೆಯ ಗಂಟೆ..!!!
ಪ್ರಸ್ತುತ ಭಾರತೀಯ ಸಿನಿಮಾರಂಗವನ್ನ ಆಳುತ್ತಿದೆ ಸೌತ್ ಇಂಡಸ್ಟ್ರಿ… ಬಾಲಿವುಡ್ ಹೇಳ ಹೆಸರಿಲ್ಲದಂತೆ ಮರೆಯಾಗ್ತಿದೆ.. RRR , KGF2 , ಪುಷ್ಪ ಅಬ್ಬರಕ್ಕೆ 83 , ಅಟ್ಯಾಕ್ ಒದ್ದಾಡುತ್ತಿದೆ… ಜೆರ್ಸಿ ಯುದ್ಧಕ್ಕೂ ಮುನ್ನವೇ ಫಲಾಯನ ಮಾಡಿದೆ..
ಬಾಕ್ಸ್ ಆಫೀಸ್ ನಲ್ಲಿ ರಾಕಿ ತೂಫಾನ್ ಎಬ್ಬಿಸಿರುವ ಹೊತ್ತಲ್ಲೇ ,, ಬಾಲಿವುಡ್ ಎಚ್ಚೆತ್ತುಕೊಳ್ಳುವ ಸಮಯವಿದು ಎಂದು ವ್ಯಾಪಾರ ತಜ್ಞರು ವಾರ್ನ್ ಮಾಡಿದ್ದಾರೆ..
ಸಾಂಕ್ರಾಮಿಕದ ನಂತರ, ಅಲ್ಲು ಅರ್ಜುನ್ ಅವರ ಪುಷ್ಪ: ದಿ ರೈಸ್ ಭಾರತದಾದ್ಯಂತ 108.26 ಕೋಟಿ ರೂ. ಬಾಚಿಕೊಂಡಿದೆ.. ನಂತರ, SS ರಾಜಮೌಳಿ ಅವರ RRR ಗಲ್ಲಾಪೆಟ್ಟಿಗೆಯನ್ನು ಬಿರುಗಾಳಿ ಎಬ್ಬಿಸಿತ್ತು.. ಭಾರತದಲ್ಲಿ 240.79 ಕೋಟಿ ಗಳಿಸಿತು. ಇದೀಗ, ಕೆಜಿಎಫ್ 2 ಬಾಕ್ಸ್ ಆಫೀಸ್‌ನಲ್ಲಿ ತನ್ನ ಪಯಣವನ್ನು ಉನ್ನತ ಮಟ್ಟದಲ್ಲಿ ಪ್ರಾರಂಭಿಸಿದೆ.
ದಕ್ಷಿಣ ಭಾರತದ ಚಲನಚಿತ್ರಗಳು ಕೇವಲ ಬಾರ್ಡರ್ ನಲ್ಲಿ ಸಿನಿಮಾ ರಿಲೀಸ್ ಮಾಡ್ತಿಲ್ಲ ಬದಲಾಗಿ ದೇಶಾದ್ಯಂತ ಥಿಯೇಟರ್‌ಗಳಲ್ಲಿ ಯಶಸ್ವಿ ಪ್ರದರ್ಶನವನ್ನು ಕಾಣುತ್ತಿವೆ ಈ ಸಿನಿಮಾಗಳು. ತಮಿಳು, ತೆಲುಗು, ಕನ್ನಡ ಅಥವಾ ಮಲಯಾಳಂ ಚಿತ್ರಗಳೆಲ್ಲವೂ ಹಿಂದಿ ವಲಯದಲ್ಲಿ ಪ್ರೇಕ್ಷಕರನ್ನು ಸಂಪಾದಿಸಿವೆ.. ಅಭಿಮಾನಿಗಳನ್ನ ಸಂಪಾದಿಸಿವೆ.. ಕರೋನವೈರಸ್ ಕಾರಣದಿಂದಾಗಿ ರಾಷ್ಟ್ರವ್ಯಾಪಿ ಲಾಕ್‌ಡೌನ್ ನಂತರ ಅಕ್ಟೋಬರ್‌ನಲ್ಲಿ ಥಿಯೇಟರ್‌ಗಳು ಪುನಃ ತೆರೆದ ನಂತರ ಪ್ಯಾನ್ ಇಂಡಿಯಾ ಸಿನಿಮಾಗಳೇ ಮೇಲುಗೈ ಸಾಧಿಸಿವೆ..
ಹಲವಾರು ಸೂಪರ್ ಹಿಟ್‌ಗಳನ್ನು ನೀಡಿರುವ ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಅವರೇ ದಕ್ಷಿಣದ ಚಲನಚಿತ್ರಗಳು ಉತ್ತರದಲ್ಲಿ ಮಾಡುವಷ್ಟು ಹಿಂದಿ ಚಲನಚಿತ್ರಗಳು ದಕ್ಷಿಣದಲ್ಲಿ ಏಕೆ ಹೆಚ್ಚು ಪ್ರೇಕ್ಷಕರನ್ನು ಆಕರ್ಷಿಸುವುದಿಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ.
ಸಿನಿಮಾ ಟ್ರೇಡ್ ವಿಶ್ಲೇಷಕ ತರಣ್ ಆದರ್ಶ್ ಇದಕ್ಕೆ ಉತ್ತರ ನೀಡಿದ್ದಾರೆ. ಪ್ರಾದೇಶಿಕ ಸಿನಿಮಾದ ಯಶಸ್ಸಿನ ಶ್ರೇಯಸ್ಸು ಅವರು ಒದಗಿಸುವ ‘ಸಂಪೂರ್ಣ ಮನರಂಜನೆ’ಗೆ ಸಲ್ಲುತ್ತದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ದಕ್ಷಿಣ ಚಲನಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಪ್ರಾಬಲ್ಯ ಸಾಧಿಸುವ ಪ್ರವೃತ್ತಿಯ ಬಗ್ಗೆ ಪ್ರತಿಕ್ರಿಯಿಸಿದ ಅವರು, “ಈ ಚಲನಚಿತ್ರಗಳು ಆರೋಗ್ಯಕರ ಮನರಂಜನೆಯನ್ನು ನೀಡುತ್ತವೆ ಎಂದು ಪ್ರತಿಪಾದಿಸಿದರು.
ಉತ್ತರದ ಪ್ರೇಕ್ಷಕರು ದಕ್ಷಿಣ ಚಲನಚಿತ್ರ ನಿರ್ಮಾಪಕರ ಕಥೆ ಹೇಳುವ ಶೈಲಿಗೆ ಫಿದಾ ಆಗಿದ್ದಾರೆ.. ಅವರ ಸ್ಕ್ರೀನ್ ಪ್ಲೇಗೆ ಆಕರ್ಶಿತರಾಗಿದ್ದಾರೆ ಎಂದಿದ್ದಾರೆ..
ಅಲ್ಲದೇ ಚಲನಚಿತ್ರ ನಿರ್ಮಾಪಕ ಮತ್ತು ವ್ಯಾಪಾರ ತಜ್ಞ ಗಿರೀಶ್ ಜೋಹರ್ ಅವರು ಈ ಬಗ್ಗೆ ಮಾತನಾಡಿದ್ದು “ಈ ಚಲನಚಿತ್ರಗಳು ಕೇವಲ ಕೆಲಸ ಮಾಡುತ್ತಿಲ್ಲ, ಯಾವುದೇ ದೊಡ್ಡ ಪ್ರಚಾರ ತಂತ್ರವಿಲ್ಲದೆ ಕಾರ್ಯನಿರ್ವಹಿಸುತ್ತಿವೆ ಎಂಬುದನ್ನು ನಾವು ನಿಜವಾಗಿಯೂ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ. ಇದು ವಿಭಿನ್ನ ಮಟ್ಟದಲ್ಲಿ ಕೇಂದ್ರೀಕೃತ ಪ್ರಯತ್ನವಾಗಿದೆ. ಬಾಲಿವುಡ್ ಗೆ ಿದು ಎಚ್ಚರಿಕೆಯ ಗಂಟೆ” ಎಂದಿದ್ದಾರೆ..