Sanjana Burli : ‘ಪಟ್ಟಕ್ಕನ ಮಗಳು’ , ಸ್ಯಾಂಡಲ್ ವುಡ್ ನಲ್ಲೂ ಮಿಂಚಿಂಗ್..!!!!
ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನಟಿ ಉಮಾಶ್ರೀ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ತಿರುವ ಪುಟ್ಟಕ್ಕನ ಮಕ್ಕಳು ಧಾರವಾಹಿ ಪ್ರತಿ ದಿನ ಪ್ರೇಕ್ಷಕರನ್ನ ಮತ್ತಷ್ಟು ಕುತೂಹಲಕ್ಕೀಡು ಮಾಡುತ್ತಾ ರಂಜಿಸುತ್ತಾ ಬರುತ್ತಿದೆ.. ಧಾರಾವಾಹಿ ಆರಂಭವಾದಾಗಿನಿಂದ ಇಲ್ಲಿಯವರೆಗೂ ಟಿಆರ್ ಪಪಿ ಅಲ್ಲಿ ಟಾಪ್ ನಲ್ಲೇ ಇದೆ..
ದಾರವಾಹಿ ಕೌಟುಂಬಿಕವಾಗಿದ್ದು ,,, ಪುಟ್ಟಕ್ಕನ ಪರಿವಾರ ಸಮಾಜದಲ್ಲಿ ಎದುರಿಸುವ ಸವಾಲುಗಳು , ಅವುಗಳನ್ನ ಮೆಟ್ಟಿ ನಿಲ್ಲುವ ಪರಿಗೆ ಜನ ಫಿದಾ ಆಗಿದ್ದಾರೆ.. ಅದ್ರಲ್ಲೂ ಈ ಧಾರವಾಹಿಯಲ್ಲಿ ಖಡಕ್ ಪಾತ್ರದಲ್ಲಿ ಸ್ನೇಹ ಪಾತ್ರಧಾರಿಯಾಗಿಯೇ ಮನೆಮಾತಾಗಿರೋ ಸಂಜಬಾ ಬುರ್ಲಿ ಎಲ್ಲರ ಅಚ್ಚುಮೆಚ್ಚಾಗಿದ್ದಾರೆ..
ಅಂದ್ಹಾಗೆ ಇಂಜಿನಿಯರಿಂಗ್ ಓದುತ್ತಿರುವ ಸಂಜನಾ ಕಿರುತೆರೆ ಅಷ್ಟೇ ಅಲ್ಲ ಬೆಳ್ಳಿ ತೆರೆಯಲ್ಲೂ ಮಿಂಚುತ್ತಿದ್ದಾರೆ.. ಮೊದಲಿಗೆ ಲಗ್ನಪತ್ರಿಕೆ ಧಾರಾವಾಹಿಯಲ್ಲಿ ನಾಯಕಿಯಾಗಿ ಮಿಂಚಿ ಎಲ್ಲರ ಗಮನ ಸೆಳೆದಿದ್ದಾರೆ ಸಂಜನಾ ಬುರ್ಲಿ.. ಸಿನಿಮಾಗಳಲ್ಲೂ ಸಂಜನಾ ಬ್ಯುಸಿಯಿದ್ದು , ಅವರ ನಟನೆಯ ‘ರಾಧಾ ಸರ್ಚಿಂಗ್ ರಮಣ ಮಿಸ್ಸಿಂಗ್’ ಸಿನಿಮಾ ಟ್ರೈಲರ್ ರಿಲೀಸ್ ಆಗಿದೆ.. ಶೀಘ್ರದಲ್ಲೇ ಸಿನಿಮಾ ಬಿಡುಗಡೆಯಾಗಲಿದೆ..
ಮೈಸೂರು ಮೂಲದವರಾದ ಅಮೇರಿಕನ್ ಪ್ರಜೆ ಯಶಸ್ವಿ ಶಂಕರ್ ನಿರ್ಮಾಣ ಮಾಡಿರುವ ರಾಧಾ ಸರ್ಚಿಂಗ್ ರಮಣ ಮಿಸ್ಸಿಂಗ್ ಸಿನಿಮಾದ ಮೂಲಕ ರಾಘವ್ ಹೀರೋ ಆಗಿ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದ್ದಾರೆ. ಎಂ ಎನ್.ಎಂ.ಶ್ರೀಕಾಂತ್ ನಿರ್ದೇಶನದ ಚೊಚ್ಚಲ ಚಿತ್ರ ಇದಾಗಿದೆ. ಈ ಚಿತ್ರದಲ್ಲಿ ಸಂಜನಾ ಬುರ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.