ಬಾಲಿವುಡ್ ನ ಖ್ಯಾತ ಹಾಸ್ಯ ನಟಿ , ನಿರೂಪಕಿಯಾಗಿರುವ ಭಾರತಿ ಸಿಂಗ್ ಅವರು ಇತ್ತೀಚೆಗೆ ಗಮಡು ಮಗುವಿಗೆ ಜನ್ಮ ನೀಡಿದ್ದಾರೆ.. ಅಂದ್ಹಾಗೆ ಮಗುವಿಗೆ ಜನ್ಮ ನೀಡುವ ಹಿಂದಿನ ದಿನದ ವರೆಗೂ ಭಾರ್ತಿ ಸಿಂಗ್ ಶೂಟಿಂಗ್ ಸೆಟ್ ಗೆ ಬಂದು ಕೆಲಸ ಮಾಡಿದ್ದರು.. ಇದೀಗ ಮಗುವಿಗೆ ಜನ್ಮ ನೀಡಿದ ಕೇವಲ 12 ದಿನಗಳಲ್ಲೇ ಮತ್ತೆ ಕೆಲಸಕ್ಕೆ ಮರಳಿದ್ದಾರೆ..
ಮಗುವಾದ 12 ದಿನಕ್ಕೇ ಭಾರತಿ ಸಿಂಗ್ ಕೆಲಸಕ್ಕೆ ಮರಳಿದ್ದು, ತಮ್ಮ ಮಗುವನ್ನು ನೆನಪಿಸಿಕೊಂಡು ತುಂಬಾ ಭಾವುಕರಾಗಿದ್ದಾರೆ.
ಖಾಸಗಿ ವಾಹಿನಿಯೊಂದರಲ್ಲಿ ಪ್ರಸಾರವಾಗುವ ರಿಯಾಲಿಟಿ ಶೋ ನಿರೂಪಕಿಯಾಗಿ ಭಾರತಿ ಸಿಂಗ್ ಕಾರ್ಯನಿರ್ವಹಿಸುತ್ತಿದ್ದು, ಸದ್ಯ ಅವರು ಈ ಕಾರ್ಯಕ್ರಮದ ಶೂಟಿಂಗ್ನಲ್ಲಿ ಭಾಗಿಯಾಗಿದ್ದಾರೆ.
ಇವರು ಜನಪ್ರಿಯ ಶೋಗಳಲ್ಲಿ ನಿರೂಪಣೆ ಮಾಡಿದ್ದಾರೆ.. ಜನರು ಭಾರತಿ ಸಿಂಗ್ ರನ್ನ ಕಾಮಿಡಿ ಕ್ವೀನ್ ಅಂತಲೇ ಕರೆಯುತ್ತಾರೆ..
ಇನ್ನೂ ಭಾರತಿ ಸಿಂಗ್ ಗೆ ಕಿರುತೆರೆ ಮತ್ತು ಹಿರಿತೆರೆಯ ಕಲಾವಿದರೂ ಸಹ ವಿಷ್ ಮಾಡ್ತಾ ಇದ್ದಾರೆ.. ಭಾರತಿ ಸಿಂಗ್ ರಿಯಾಲಿಟಿ ಶೋಗಳಲ್ಲೂ ಸಹ ಭಾಗವಹಿಸಿದ್ದರು.. ಅದ್ರಲ್ಲೂ ಖತ್ರೋಂಕೆ ಕಿಲಾಡಿ ಶೋನಲ್ಲಿ ಪತಿ ಜೊತೆಗೆ ಸಹ ಸ್ಪರ್ಧಿಯಾಗಿದ್ದುಉ ವಿಶೇಷ..