KGF 2 : ಭಾರತದಲ್ಲಿ ಇತಿಹಾಸ ಬರೆದ ರಾಕಿ : 3 ದಿನಕ್ಕೆ ಬಾರತದಲ್ಲಿ 400 ಕೋಟಿ ಗಳಿಕೆ
ಬಾಕ್ಸ್ ಆಫೀಸ್ ನಲ್ಲಿ ರಾಕಿ ಭಾಯ್ ತೂಫಾನ್ ಸೃಷ್ಟಿಸಿದೆ… ಲೂಟಿ ಮುಂದುವರೆಸಿರುವ KGF 2 ವಾರ್ , RRR , ಬಾಹುಬಲಿ 2 , ಪುಷ್ಪ ಎಲ್ಲಾ ಸಿನಿಮಾಗಳ ರೆಕಾರ್ಡ್ ಚಿಂದಿ ಚಿತ್ರಾನ್ನ ಮಾಡಿದೆ..
ಕೆಜಿಎಫ್ ಚಾಪ್ಟರ್ 2 3 ನೇ ದಿನದ ಬಾಕ್ಸ್ ಆಫೀಸ್ ಕಲೆಕ್ಷನ್ ಬಾಲಿವುಡ್ ಸ್ಟಾರ್ ಗಳಲ್ಲಿ ನಡುಕ ಹುಟ್ಟಿಸಿದೆ.. ಯಶ್ ಅವರ ಚಿತ್ರ 400 ಕೋಟಿ ಕ್ಲಬ್ ಸೇರಿದೆ.. ಹಿಂದಿ ಆವೃತ್ತಿಯಲ್ಲೇ ಬಾಕ್ಸ್ ಆಫೀಸ್ ನಲ್ಲಿ ಹೆಚ್ಚು ಕಮಾಲ್ ಮಾಡಿದೆ.. ಪ್ರತಿ ದಿನ 100 ಕೋಟಿಗೂ ಅಧಿಕ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡ್ತಿದೆ ಸಿನಿಮಾ..
ವಿಶ್ವಾದ್ಯಂತ ಮತ್ತು ದೇಶೀಯ ಬಾಕ್ಸ್ ಆಫೀಸ್ ನಲ್ಲಿ ರಾಕಿ ಮ್ಯಾಜಿಕ್ ಆಗಿದೆ..
ಕನ್ನಡ ಚಿತ್ರ ಕೆಜಿಎಫ್ ಚಾಪ್ಟರ್ 2 ರ ಹಿಂದಿ ಆವೃತ್ತಿಯು ಕೇವಲ ಮೂರು ದಿನಗಳಲ್ಲಿ ವೇಗವಾಗಿ 143 ಕೋಟಿ ಕಲೆಕ್ಷನ್ ಮಾಡಿದೆ. ಇದು ಬೇರೆ ಭಾಷೆಯ ಚಲನಚಿತ್ರ ಹಿಂದಿಗೆ ಡಬ್ಬಿಂಗ್ ಆವೃತ್ತಿಗೆ ಮಾತ್ರವಲ್ಲದೇ ಭಾರತದಲ್ಲಿ ಹಿಂದಿಯಲ್ಲಿ ಬಿಡುಗಡೆಯಾದ ಎಲ್ಲಾ ಚಲನಚಿತ್ರಗಳ ದಾಖಲೆಗಳನ್ನ ಉಡೀಸ್ ಮಾಡಿದೆ..
ವಿದೇಶಗಳಲ್ಲೂ ರಾಕಿ ಹವಾ ಸೃಷ್ಟಿಯಾಗಿದೆ. ವ್ಯಾಪಾರ ವಿಶ್ಲೇಷಕ ಮನೋಬಾಲಾ ವಿಜಯಬಾಲನ್ ಪ್ರಕಾರ, ಚಿತ್ರವು ಕೇವಲ ಮೂರು ದಿನಗಳಲ್ಲಿ ವಿಶ್ವಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ 400 ಕೋಟಿ ಗಳಿಸಿದೆ. “#KGFCಚಾಪ್ಟರ್ 2 ಕೇವಲ 3 ದಿನಗಳಲ್ಲಿ 400 ಕೋಟಿ ದಾಟಿದೆ. ಇಂದು 500 ಕೋಟಿ ದಾಟುವುದು ಪಕ್ಕಾ ಎಂದು ಬರೆದುಕೊಂಡಿದ್ಧಾರೆ.
ಆಲ್ ಇಂಡಿಯಾ ಹಿಂದಿ ಬಾಕ್ಸ್ ಆಫೀಸ್. ದಿನ 1 53.95 ಕೋಟಿ ರೂ
ದಿನ 2 – 46.79 ಕೋಟಿ ರೂ.
ದಿನ 3 – 42.90 ಕೋಟಿ ರೂ.
ಒಟ್ಟು 143.64 ಕೋಟಿ.
ಹಿಂದಿಯಲ್ಲಿ ಮೊದಲ 3 ದಿನಗಳಲ್ಲಿ ಈ ಮಟ್ಟಿಗೆ ಬಾಕ್ಸ್ ಆಪೀಸ್ ಶೇಕ್ ಮಾಡಿದ ಮೊದಲ ಸಿನಿಮಾವಿದು..