KGF 2 : ಯಶ್ ಆಂಗ್ರಿ ಯಂಗ್ ಮ್ಯಾನ್ : ಅಮಿತಾಬ್ ಜೊತೆ ಹೋಲಿಸಿದ ಕಂಗನಾ
ಕಂಗನಾ ರಣಾವತ್ ಯಾವಾಗಲೂ ದಕ್ಷಿಣದ ತಾರೆಯರ ಬಗ್ಗೆ ತಮ್ಮ ಆದ್ಯತೆಯ ಬಗ್ಗೆ ಮಾತನಾಡ್ತಾ ಬಾಲಿವುಡ್ ಮಮದಿಯ ವಿರುದ್ಧ , ಬಾಲಿವುಡ್ ಮಾಫಿಯಾ ಬಗ್ಗೆ ಮಾನಾಡುತ್ತಾರೆ..
ಇದೀಗ ಯಶ್ ಅವರನ್ನ ಆಂಗ್ರಿ ಯಂಗ್ ಮ್ಯಾನ್ ಎಂದಿದ್ಧಾರೆ.. KGF 2 ರಲ್ಲಿ ಯಶ್ ಅವರನ್ನು ‘ಆಂಗ್ರಿ ಯಂಗ್ ಮ್ಯಾನ್’ ಎಂದು ಶ್ಲಾಘಿಸಿದರು.. ಅಲ್ಲದೇ ಅಮಿತಾಬ್ ಬಚ್ಚನ್ ಜೊತೆಗೆ ಹೋಲಿಸಿದ್ದಾರೆ.. ಭಾರತದಲ್ಲಿ ಹಲವು ದಶಕಗಳಿಂದ ಇದು ಕಾಣೆಯಾಗಿತ್ತು ಎಂದಿದ್ದಾರೆ…
ರಾಮ್ ಚರಣ್, ಅಲ್ಲು ಅರ್ಜುನ್ ಮತ್ತು ಎನ್‌ಟಿಆರ್ ಜೂನಿಯರ್ ಫೋಟೋಗಳನ್ನು ಹಂಚಿಕೊಂಡ ಕಂಗನಾ “ದಕ್ಷಿಣ ಸೂಪರ್ ಸ್ಟಾರ್‌ಗಳು ತಮ್ಮ ಸಂಸ್ಕೃತಿಯಲ್ಲಿ ನೆಲೆಗೊಂಡಿದ್ದಾರೆ ಮತ್ತು ಆಳವಾಗಿ ಬೇರೂರಿದ್ದಾರೆ. ಅವರ ಪ್ರತಿಭೆ ಮತ್ತು ಕಠಿಣ ಪರಿಶ್ರಮದ ಹೊರತಾಗಿ, ಅವರ ಸತ್ಯಾಸತ್ಯತೆಯೇ ಪ್ರೇಕ್ಷಕರೊಂದಿಗೆ ಬೆರೆಯುತ್ತೆ “ ಎಂದಿದ್ದಾರೆ..
ಕೆಜಿಎಫ್ 2 ನ ಯಶ್ ಅವರ ಪೋಸ್ಟರ್ ಅನ್ನು ಹಂಚಿಕೊಂಡಿರುವ ಕಂಗನಾ ” ಯಶ್ ಅವರು ಅನೇಕ ದಶಕಗಳಿಂದ ಭಾರತದಿಂದ ಕಾಣೆಯಾಗಿರುವ ಆಂಗ್ರಿ ಯಂಗ್ ಮ್ಯಾನ್ . 70 ರ ದಶಕದಿಂದ ಅಮಿತಾಬ್ ಬಚ್ಚನ್ ಬಿಟ್ಟುಹೋದ ನಂತರ ಖಾಲಿಯಾಗಿದ್ದ ಆ ಜಾಗ ತುಂಬಿದ್ದಾರೆ.. ಅದ್ಭುತ”ಎಂದಿದ್ದಾರೆ..