Dileep : ಕೊಲೆ ಸಂಚು ಆರೋಪದಲ್ಲಿ ಕೇರಳ ಹೈಕೋರ್ಟ್ ನಿಂದ ತೀರ್ಪು
ನಟಿ ಲೈಂಗಿಕ ಕಿರುಕುಳದ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ನಟ ದಿಲೀಪ್ ಕೊಲೆ ಸಂಚು ಆರೋಪ ಎದುರಿಸುತ್ತಿದ್ದಾರೆ.. ಈ ಪ್ರಕರಣದ ವಿಚಾರಣೆ ಇಂದು ಮಧ್ಯಾಹ್ನ ಕೇರಳ ಹೈಕೋರ್ಟ್ ನಲ್ಲಿ ನಡೆಯಲಿದ್ದು , ಇಂದೇ ತೀರ್ಪು ಬರುವ ಸಾಧ್ಯತೆಯಿದೆ.. ಏಕ ಸದಸ್ಯ ಪೀಠದ ನ್ಯಾಯ ಮೂರ್ತಿಗಳಾದ ಜಿಯಾದ್ ರೆಹಮಾನ್ ಮಧ್ಯಾಹ್ನ 1.45 ತೀರ್ಪು ಪ್ರಕಟಿಸಲಿದ್ದಾರೆ.
ನಟಿ ಅತ್ಯಾಚಾರ ಪ್ರಕರಣದ ತನಿಖೆ ನಡೆಸಿದ ತನಿಖಾಧಿಕಾರಿ ಮತ್ತು ಇತರ ಹಿರಿಯ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪಿತೂರಿ ಮತ್ತು ಬೆದರಿಕೆಯೊಡ್ಡಿದ ಆರೋಪದ ಮೇಲೆ, ಜನವರಿಯಲ್ಲಿ ದಿಲೀಪ್ ಮತ್ತು ಇತರ ಐವರ ವಿರುದ್ಧ ಹೊಸದಾಗಿ ಎಫ್‌ಐಆರ್ ದಾಖಲಿಸಲಾಗಿತ್ತು. ಆ ಬಳಿಕ ಮತ್ತೆ ನಟ ದಿಲೀಪ್ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರು.
ಈ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದ್ದ ಅಧಿಕಾರಿಗಳನ್ನು ಕೊಲ್ಲಲು ಐವರೊಂದಿಗೆ ಸೇರಿಕೊಂಡು ದಿಲೀಪ್ ಸಂಚು ರೂಪಿಸಿದ್ದರು ಎಂದು ಕೇರಳ ಪೊಲೀಸರು ಆರೋಪಿಸಿದ್ದಾರೆ. ಅಲ್ಲದೇ ಜಾಮೀನು ರದ್ದುಗೊಳಿಸುವಂತೆ ಪೊಲೀಸರು ವಿಚಾರಣಾ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು.. ನಟನಿಗೆ ಜಾಮೀನು ನೀಡುವುದರಿಂದ ನಡೆಯುತ್ತಿರುವ ತನಿಖೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ತನಿಖಾ ತಂಡವು ವಿಚಾರಣಾ ನ್ಯಾಯಾಲಯದ ಮೊರೆ ಹೋಗಿತ್ತು.. 2017 ರಲ್ಲಿ ನಟಿ ಗೆ ಲೈಂಗಿಕ ಕಿರುಕುಳ ನೀಡಿದ್ದ ಪ್ರಕರಣದ ಪ್ರಮುಖ ಆರೋಪಿ ಮಲಯಾಳಂ ಸ್ಟಾರ್ ನಟ ದಿಲೀಪ್..