Ilayaraja : ಮೋದಿ ಅವರನ್ನ ಅಅಂಬೇಡ್ಕರ್ ಜೊತೆಗೆ ಹೋಲಿಸಿದ ಇಳಯರಾಜ
ಸಂಗೀತ ಲೋಕದ ದಿಗ್ಗಜ ಇಳಯರಾಜಾ ಅವರ ವಿರುದ್ಧ ಇದೀಗ ಅನೇಕರು ಅಸಮಾಧಾನ ಹೊರಹಾಕಿದ್ದಾರೆ.. ಇದಕ್ಕೆ ಕಾರಣ ಇಳಯರಾಜಾ ಅವರು ಮೋದಿ ಅವರ ಬಗ್ಗೆ ಬರೆದಿರುವ ಪುಸ್ತಕ… ಪ್ರಧಾನಿ ಮೋದಿ ಬಗ್ಗೆ ಪುಸ್ತಕದ ಬಗ್ಗೆ , ಇಳಯರಾಜ ಅವರ ಅಭಿಪ್ರಾಯಕ್ಕೆ ಹಲವರು ಅಸಮಾಧಾನ ಹೊರಹಾಕಿದ್ದಾರೆ…
ಪುಸ್ತಕದಲ್ಲಿ ಮೋದಿಯನ್ನು ಡಾ.ಅಂಬೇಡ್ಕರ್ ಗೆ ಹೋಲಿಸಲಾಗಿದೆ. ಇಳಯರಾಜ ಅವರು ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ, ಸಂಸದ ಸ್ಥಾನಕ್ಕೆ ಮೋದಿ ಭಜನೆ ಮಾಡುತ್ತಿದ್ದಾರೆ ಎಂದು ಕೆಲವರು ಆರೋಪ ಮಾಡುತ್ತಿದ್ದಾರೆ.
ಇಳಯರಾಜ ಅವರ ಸಹೋದರ, ಬಿಜೆಪಿ ಸದಸ್ಯ ಗಂಗೈ ಅಮರನ್ ಅವರು ಈ ವಿಚಾರವಾಗಿ ಪ್ರತಿಕ್ರಿಯಿಸಿ, ಎಲ್ಲರಂತೆ ಇಳಯರಾಜ ಕೂಡ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ. ಅವರ ಮಾತಿನಲ್ಲಿ ಯಾವುದೇ ತಪ್ಪಿಲ್ಲ ಎಂದಿದ್ದಾರೆ.
ಇಳಯರಾಜ ಅವರು ಬಿಜೆಪಿಗೆ ಸೇರ್ಪಡೆಗೊಂಡಿಲ್ಲ ಮತ್ತು ತನಗೆ ಯಾವುದೇ ಸ್ಥಾನಮಾನದ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.