KGF 2 : ಮತ್ತೊಂದು ದಾಖಲೆ….!! ಈ ದಾಖಲೆ ಮಾಡಿದ ವಿಶ್ವದ 2ನೇ ಸಿನಿಮಾ
ಬಾಕ್ಸ್ ಆಫೀಸ್ ಶೇಕ್ ಮಾಡಿರುವ KGF 2 ಅಬ್ಬರ ಸದ್ಯಕ್ಕಂತೂ ನಿಲ್ಲಲ್ಲ… 500 ಕೋಟಿ ಮೇಲೆ ಕಲೆಕ್ಷನ್ ಮಾಡಿದೆ ಅದು ಕೂಡ 5 ದಿನದಲ್ಲಿ ಅದು ಭಾರತದಲ್ಲೇ… ಅಂದ್ರೆ RRR ಬಾಹುಬಲಿ ರೆಕಾರ್ಡ್ ಬ್ರೇಕ್ ಮಾಡೋಕೆ ಇನ್ನೊಂದು ವಾರ ಸಿಕ್ರೆ ಸಾಕು..
ಅಂದ್ಹಾಗೆ ಬಾಲಿವುಡ್ ಬಾಕ್ಸ್ ಆಫೀಸ್ ಶೇಕ್ ಮಾಡಿರೋ KGF 2 ಕೇರಳದಲ್ಲಿ ರೆಕಾರ್ಡ್ ಮಾಡಿದೆ… ತಮಿಳುನಾಡಿನಲ್ಲೂ ಅಬ್ಬರಿಸುತ್ತಿದೆ… ಬಾಲಿವುಡ್ ನಲ್ಲಿ ನಡುಕ ಹುಟ್ಟಿಸಿ , ಟಾಲಿವುಡ್ ನಲ್ಲಿ ನೂರು ಕೋಟಿ ಕ್ಲಬ್ ಸೇರುವ ಸನಿಹದಲ್ಲಿದೆ…
ಕೆಜಿಎಫ್‌ನ ಚಾಪ್ಟರ್ 2 ವಾರಾಂತ್ಯದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರ ಎಂದ ದಾಖಲೆ ಬರೆದಿದೆ.
ಏಪ್ರಿಲ್ 15 ರಿಂದ 17 ರ ನಡುವೆ ಅತ್ಯಧಿಕ ಕಲೆಕ್ಷನ್ ಮಾಡಿದ ಸಿನಿಮಾಗಳಲ್ಲಿ ವಿಶ್ವದಲ್ಲಿಯೇ 2ನೇ ಸ್ಥಾನದಲ್ಲಿದೆ.
ಮೂರೇ ದಿನದಲ್ಲಿ ಮುನ್ನೂರು ಕೋಟಿ ಗಳಿಸಿದ್ದ ಕೆಜಿಎಫ್ ಸಿನಿಮಾ ಇದೀಗ 500 ಕೋಟಿ ಕ್ಲಬ್ ಸೇರಿದೆ.
ಇದುವರೆಗೆ ಚಿತ್ರ 552 ಕೋಟಿ ರೂ.ಗೂ ಅಧಿಕ ಗಳಿಕೆ ಮಾಡಿದೆ.