KGF 2 : 200 ಕೋಟಿ ಹಿಂದಿಯಲ್ಲೇ KGF 2 ಕಲೆಕ್ಷನ್..!!! ಬಾಲಿವುಡ್ ಸ್ಟಾರ್ ಗಳಿಗೆ ಟೆನ್ಷನ್ ,..!!
ಬಾಕ್ಸ್ ಆಫೀಸ್ ಶೇಕ್ ಮಾಡಿರುವ KGF 2 ಅಬ್ಬರ ಸದ್ಯಕ್ಕಂತೂ ನಿಲ್ಲಲ್ಲ… 500 ಕೋಟಿ ಮೇಲೆ ಕಲೆಕ್ಷನ್ ಮಾಡಿದೆ ಅದು ಕೂಡ 5 ದಿನದಲ್ಲಿ ಅದು ಭಾರತದಲ್ಲೇ… ಅಂದ್ರೆ RRR ಬಾಹುಬಲಿ ರೆಕಾರ್ಡ್ ಬ್ರೇಕ್ ಮಾಡೋಕೆ ಇನ್ನೊಂದು ವಾರ ಸಿಕ್ರೆ ಸಾಕು..
ಅಂದ್ಹಾಗೆ ಬಾಲಿವುಡ್ ಬಾಕ್ಸ್ ಆಫೀಸ್ ಶೇಕ್ ಮಾಡಿರೋ KGF 2 ಕೇರಳದಲ್ಲಿ ರೆಕಾರ್ಡ್ ಮಾಡಿದೆ… ತಮಿಳುನಾಡಿನಲ್ಲೂ ಅಬ್ಬರಿಸುತ್ತಿದೆ… ಬಾಲಿವುಡ್ ನಲ್ಲಿ ನಡುಕ ಹುಟ್ಟಿಸಿ , ಟಾಲಿವುಡ್ ನಲ್ಲಿ ನೂರು ಕೋಟಿ ಕ್ಲಬ್ ಸೇರುವ ಸನಿಹದಲ್ಲಿದೆ…

ಬಾಲಿವುಡ್ ನಲ್ಲಿ ಬಾಲಿವುಡ್ ಚಿತ್ರಗಳೇ ಮಾಡದ ಸಾಧನೆಯನ್ನ ಕನ್ನಡದ ಡಬ್ಬಿಂಗ್ ಚಿತ್ರವೊಂದು ಮಾಡಿ ಮುಗಿಸಿದೆ. ಕೆಜಿಎಫ್-2 ಚಿತ್ರಕ್ಕೆ ಭಾರತದಾದ್ಯಂತ ಭರ್ಜರಿ ಓಪನಿಂಗ್ ಸಿಕ್ಕಿದೆ.
ಹಿಂದಿ ಬಾಕ್ಸಾಫೀಸ್‌ನಲ್ಲಿ ‘ಕೆಜಿಎಫ್ 2’ ದಾಖಲೆ ಮೇಲೆ, ದಾಖಲೆ ಬರೆಯುತ್ತಿದೆ. ಆಮಿರ್ ಖಾನ್, ಸಲ್ಮಾನ್ ಖಾನ್, ಶಾರುಖ್ ಖಾನ್ ಯಾವ ಖಾನ್‌ಗಳು, ಕಪೂರ್‌ಗಳು ಇಲ್ಲ ಈಗ ಏನಿದ್ದರೂ ರಾಕಿ ಭಾಯ್ ಹವಾ. ಬಾಲಿವುಡ್‌ನಲ್ಲಿ ಈಗ ಕೆಜಿಎಫ್ ಚಿತ್ರವೇ ನಂಬರ್ 1 ಆಗಿ ಬಿಟ್ಟಿದೆ. ‘ಕೆಜಿಎಫ್ 2’ ಗಳಿಕೆ ಮತ್ತಷ್ಟು ಹೆಚ್ಚಾಗಿದ್ದು, ಬಾಲಿವುಡ್‌ಗೆ ಶಾಕ್ ಕೊಟ್ಟಿದೆ.
ಹಿಂದಿಯಲ್ಲಿ ‘ಕೆಜಿಎಫ್ 2’ 200 ಕೋಟಿ ಗಳಿಕೆ! ‘ಕೆಜಿಎಫ್ 2’ ಚಿತ್ರ ರಿಲೀಸ್‌ಗೂ ಮುನ್ನ ನಾರ್ತ್‌ನಲ್ಲಿ ಸಿಕ್ಕಾಪಟ್ಟೆ ಕ್ರೇಜ್ ಹುಟ್ಟು ಹಾಕಿತ್ತು. ಕೆಜಿಎಫ್ ಭಾಗ ಒಂದು ಬಾಲಿವುಡ್‌ನಲ್ಲಿ ಕಮಾಲ್ ಮಾಡಿತ್ತು. ಹಾಗಾಗಿ ಈ ಚಿತ್ರದ ಮೇಲೆ ಎಲ್ಲಿಲ್ಲದ ನಿರೀಕ್ಷೆ ಇತ್ತು. ಅಂತೆಯೇ ಇರುವ ನಿರೀಕ್ಷೆಗಳನ್ನು ಉಳಿಸಿಕೊಂಡು ದಾಖಲೆ ಮಾಡಿದೆ ‘ಕೆಜಿಎಫ್ 2’. ಬಾಲಿವುಡ್ ಬೆರಗಾಗುವಂತಹ ದಾಖಲೆ ಮಾಡಿದ ಕೆಜಿಎಫ್ 2 ಈಗ ಕೇವಲ ಹಿಂದ ಭಾಷಿಕ ಪ್ರದೇಶದಲ್ಲಿ ಮಾತ್ರವೇ 200 ಕೋಟಿ ಗಳಿಕೆ ಮಾಡಿದೆ.
5 ದಿನಕ್ಕೆ ಹಿಂದಿಯಲ್ಲಿ ‘ಕೆಜಿಎಫ್ 2’ 200 ಕೋಟಿ! ಕೆಜಿಎಫ್ 2 ನೋಡ, ನೋಡುತ್ತಿದ್ದಂತೆಯೇ ದಾಖಲೆಯ ಸುರಿ ಮಳೆ ಸುರಿಸುತ್ತಾ ಇದೆ. ಅದರಲ್ಲೂ ಹಿಂದಿ ಮಂದಿಗೆ ಕೆಜಿಎಫ್ 2 ದೊಡ್ಡ ಶಾಕ್ ಕೊಟ್ಟಿದೆ. ಚಿತ್ರ ರಿಲೀಸ್ ಆದ 5 ದಿನಕ್ಕೆ 200 ಕೋಟಿ ಗಳಿಕೆ ಮಾಡಿ ದಾಖಲೆ ಬರೆದಿದೆ. ಇದು ಹಿಂದಿಯಲ್ಲಿ ಅತಿ ವೇಗವಾಗಿ ಹೆಚ್ಚು ಗಳಿಕೆ ಮಾಡಿದ ಚಿತ್ರ ಎನಿಸಿಕೊಂಡಿದೆ. ಈ ಬಗ್ಗೆ ಟ್ರೇಡ್ ವಿಶ್ಲೇಶಕ ಟ್ವಿಟ್ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ.