KGF 2 : ‘ಸುರಸುಲ್ತಾನ’ನ ಅಬ್ಬರಕ್ಕೆ ಬಾಲಿವುಡ್ ಜೊತೆ ಬಾಕ್ಸ್ ಆಫೀಸ್ ಶೇಕ್..!!
KGF 2 : ಇಂಡಿಯಾನ್ ಬಾಕ್ಸ್ ಆಫೀಸ್ ಕಿಂಗ್ ‘ರಾಕಿಭಾಯ್ ‘..!!!
ಬಾಕ್ಸ್ ಆಫೀಸ್ ಶೇಕ್ ಮಾಡಿರುವ KGF 2 ಅಬ್ಬರ ಸದ್ಯಕ್ಕಂತೂ ನಿಲ್ಲಲ್ಲ… 500 ಕೋಟಿ ಮೇಲೆ ಕಲೆಕ್ಷನ್ ಮಾಡಿದೆ ಅದು ಕೂಡ 5 ದಿನದಲ್ಲಿ ಅದು ಭಾರತದಲ್ಲೇ… ಅಂದ್ರೆ RRR ಬಾಹುಬಲಿ ರೆಕಾರ್ಡ್ ಬ್ರೇಕ್ ಮಾಡೋಕೆ ಇನ್ನೊಂದು ವಾರ ಸಿಕ್ರೆ ಸಾಕು..
ಅಂದ್ಹಾಗೆ ಬಾಲಿವುಡ್ ಬಾಕ್ಸ್ ಆಫೀಸ್ ಶೇಕ್ ಮಾಡಿರೋ KGF 2 ಕೇರಳದಲ್ಲಿ ರೆಕಾರ್ಡ್ ಮಾಡಿದೆ… ತಮಿಳುನಾಡಿನಲ್ಲೂ ಅಬ್ಬರಿಸುತ್ತಿದೆ… ಬಾಲಿವುಡ್ ನಲ್ಲಿ ನಡುಕ ಹುಟ್ಟಿಸಿ , ಟಾಲಿವುಡ್ ನಲ್ಲಿ ನೂರು ಕೋಟಿ ಕ್ಲಬ್ ಸೇರುವ ಸನಿಹದಲ್ಲಿದೆ…
ಬಾಲಿವುಡ್ ನಲ್ಲಿ ಬಾಲಿವುಡ್ ಚಿತ್ರಗಳೇ ಮಾಡದ ಸಾಧನೆಯನ್ನ ಕನ್ನಡದ ಡಬ್ಬಿಂಗ್ ಚಿತ್ರವೊಂದು ಮಾಡಿ ಮುಗಿಸಿದೆ. ಕೆಜಿಎಫ್-2 ಚಿತ್ರಕ್ಕೆ ಭಾರತದಾದ್ಯಂತ ಭರ್ಜರಿ ಓಪನಿಂಗ್ ಸಿಕ್ಕಿದೆ. ದಿನದಿಂದ ದಿನಕ್ಕೆ ಚಿತ್ರ ಹೊಸ ದಾಖಲೆಗಳನ್ನ ಮಾಡುತ್ತಿದೆ. ಹಿಂದಿ ಬೆಲ್ಟ್ನಲ್ಲಿ ಚಿತ್ರ ಬಿಡುಗಡಯಾದ ನಾಲ್ಕನೇ ದಿನ 50.35 ಕೋಟಿ ಕಲೆಕ್ಷನ್ ಮಾಡಿದೆ. ಇಲ್ಲಿಯವರೆಗೆ ಕೇವಲ ಹಿಂದಿ ಬೆಲ್ಟ್ ಒಂದರಲ್ಲಿಯೇ ಕೆಜಿಎಫ್-2 193.99 ಕೋಟಿ ವ್ಯವಹಾರ ಮಾಡಿದೆ. ಹಿಂದಿ ಅವತರಣಿಕೆಯ ಚಿತ್ರವೊಂದು ನಾಲ್ಕು ದಿನಗಳಲ್ಲಿ ಇಷ್ಟು ಗಳಿಸಿದ ಮೊದಲ ಚಿತ್ರ ಎಂಬ ದಾಖಲೆಗೆ ಕೆಜಿಎಫ್ ಪಾತ್ರವಾಗಿದೆ. ಇದಕ್ಕೂ ಮೊದಲು ಬಾಹುಬಲಿ-2 ಸುಮಾರು 168 ಕೋಟಿ ಗಳಿಸಿತ್ತು. 5ನೇ ದಿನಕ್ಕೆ ಚಿತ್ರ 200 ಕೋಟಿ ಕ್ಲಬ್ ಸೇರಲಿದೆ ಎಂದು ಬಾಕ್ಸ್ ಆಫೀಸ್ ಪಂಡಿತರಾದ ತರಣ್ ಆದರ್ಶ್ ಹೇಳಿದ್ದಾರೆ.
ಸುಮಾರು 100 ಕೋಟಿ ಬಜೆಟ್ನಲ್ಲಿ ತಯಾರಾದ ಕೆಜಿಎಫ್- ಚಾಪ್ಟರ್ 2 ವರ್ಲ್ಡ್ ವೈಡ್ ಬಾಕ್ಸ್ ಆಫೀಸ್ ಗಳಿಕೆಯಲ್ಲಿ 551 ಕೋಟಿ ಕಮಾಯಿ ಮಾಡಿದೆ. ನಾಲ್ಕನೇ ದಿನದ ವರ್ಲ್ಡ್ ವೈಡ್ ಕಲೆಕ್ಷನ್ 132.13 ಕೋಟಿ.
ಕೆಜಿಎಫ್ -2 ಹಿಂದಿ ಬಾಕ್ಸ್ ಆಫೀಸ್ನಲ್ಲಿ ಸುನಾಮಿಯಂತೆ ಅಪ್ಪಳಿಸಿದೆ ನಾಲ್ಕನೇ ದಿನ ಅಂದರೆ ಭಾನುವಾರ 50.35 ಕೋಟಿ, ಶನಿವಾರ 42.92 ಕೋಟಿ, ಶುಕ್ರವಾರ 46.79 ಕೋಟಿ ಹಾಗೂ ಮೊದಲ ದಿನ 53.95 ಕೋಟಿ ಕಲೆಕ್ಷನ್ ಮಾಡಿದೆ ಎಂದು ಸಿನಿಮಾ ವಿಮರ್ಶಕ ತರಣ್ ಆದರ್ಶ್ ಸಾಮಾಜಿಕ ಜಾಲತಾಣದಲ್ಲಿ ಟ್ವಿಟ್ ಮಾಡಿ ಹಂಚಿಕೊಂಡಿದ್ದಾರೆ.
ಕೆಜಿಎಫ್-2 ತನ್ನ ಹೆಸರಿನಲ್ಲಿ ಅನೇಕ ದಾಖಲೆಗಳನ್ನು ಮಾಡಿದೆ. ಹಿಂದಿ, ಕೇರಳ ಮತ್ತು ಕರ್ನಾಟಕದಲ್ಲಿ ಇಲ್ಲಿಯವರೆಗಿನ ಅತಿ ಹೆಚ್ಚು ಓಪನಿಂಗ್ ಪಡೆದ ಚಿತ್ರವಾಗಿದೆ. ಕೆಜಿಎಫ್-2 ಸ್ಯಾಂಡಲ್ ವುಡ್ ನಲ್ಲಿ 500 ಕೋಟಿ ಕ್ಲಬ್ ಸೇರಿದ ಮೊದಲ ಸಿನಿಮಾ. ವಾರಾಂತ್ಯದಲ್ಲಿ ಅತ್ಯಧಿಕ ಓಪನಿಂಗ್ ಪಡೆದ ಭಾರತೀಯ ಚಿತ್ರ ಎನಿಸಿಕೊಂಡಿದೆ. ಎಂದು ಚಿತ್ರ ವಿಮರ್ಶಕ ಮನೋಬಾಲಾ ವಿಜಯಬಾಲನ್ ಈ ಪೋಸ್ಟ್ ಹಂಚಿಕೊಂಡಿದ್ದಾರೆ.