KGF 2 : ಕನ್ನಡ ಸಿನಿಮಾ…???? ಅಂತ ಕೇವಲವಾಗಿ ನೋಡ್ತಿದ್ದವರಿಗೆ ಮುಟ್ಟಿನೋಡಿಕೊಳ್ಳುವ ಉತ್ತರ KGF 2
ಕನ್ನಡ ಸಿನಿಮಾ…???? ಅಂತ ಕೇವಲವಾಗಿ ನೋಡ್ತಿದ್ದವರಿಗೆ ಮುಟ್ಟಿನೋಡಿಕೊಳ್ಳುವ ಉತ್ತರ,,, KGF 2
ಅಬ್ಬಾ…!!!!! ಕನ್ನಡದ ಸಿನಿಮಾನೇನಾ ಇದು… ಅಂತ ಬಾಯಿಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡಿದ್ದೂ ಕೆಜಿಎಫ್..2
RRR , Beast , Bahubali , ಎಲ್ಲಾ ರೆಕಾರ್ಡ್ ಗಳು ಪೀಸ್ ಪೀಸ್…
ಬಾಲಿವುಡ್ ಖಾನ್ ಗಳಿಗೆ ಟೆನ್ಷನ್ ಕೊಟ್ಟಿದ್ದೂ ನಮ್ಮ ಕನ್ನಡದ ಸಿನಿಮಾ..
ಬಾಲಿವುಡ್ ನಲ್ಲೇ ಅತಿ ಹೆಚ್ಚು ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿ … ಸುಲ್ತಾನ ಆಗಿದ್ದು ನಮ್ಮ ಯಶ್, ಕೆಜಿಎಫ್..
ಬಾಲಿವುಡ್ ಉಸಿರು ಜೋರಾಗಿಸಿದ್ದು ನಮ್ಮ ಕಥೆ ಮುಂದೇನು ಅಂತ ಯೋಚಿಸೋ ಹಾಗೆ ಮಾಡ್ತಿರೋದು ನಮ್ಮ ಕೆಜಿಎಫ್..
ಯಾರಾದ್ರೂ ಮತ್ತೆ ಕನ್ನಡ ಸಿನಿಮಾ ಬಗ್ಗೆ ಕೇವಲವಾಗಿ ಮಾತನಾಡ್ಬೇಕಂದ್ರೆ ಕನಸಲ್ಲೂ 100 ಸಲ ಯೋಚಿಸಬೇಕು…
ಆ ತರ ಇದೆ ಸಿನಿಮಾ…
ಯಾವ್ ಬಾಲಿವುಡ್ ಸ್ಟಾರ್ ಗಳೂ ಮುಟ್ಟಾಕೋಗದ ಲೆವೆಲ್ ನಲ್ಲಿದೆ ಪ್ರಶಾಂತ್ ನೀಲ್ ಅವರ ಸ್ಕ್ರೀನ್ ಪ್ಲೇ..
ಉರಿದ್ ಕೊಳ್ಳೋರು ಉರಿದುಕೊಳ್ಳಲಿ,,, ನಮ್ ಹವಾ ಮುಂದುವರೆಯಲಿ ಅನ್ನೋ ಯಶ್ ಮಾತು … ಇಲ್ಲಿಗೆ ಪರ್ಫೆಕ್ಟ್ ಆಗಿ ಸ್ಯೂಟ್ ಆಗುತ್ತೆ..
ಯಶ್ ಬಿಟ್ರೆ ಕೆಜಿಎಫ್ ಇಲ್ಲ… ಯಶ್ ಜಾಗದಲ್ಲೀ ಮತ್ತೊಬ್ಬರನ್ನ ರಾಕಿಯಾಗಿ ಯೋಚನೆ ಮಾಡೋಕೆ ನೋ ವೇ ಚಾನ್ಸೇ ಇಲ್ಲ..
ಅವರ ಅಪಿಯರೆನ್ಸ್ , ಅವರ ಡೈಲಾಗ್ಸ್, ಅದನ್ನ ಕನ್ವೇ ಮಾಡೋ ನಮ್ಮ ರಾಕಿ ಸ್ಟೈಲ್ ಹಂಗೆ ಸೀಟ್ ನಿಂದ ಎದ್ದು ಕಿರುಚಾಡಬೇಕು ಅನ್ಸುತ್ತೆ..
ಒಂದೊಂದು ಸೀನ್ಸ್ ಗಳು , ಊಹಿಸದ ಟ್ವಿಸ್ಟ್ ಗಳು ಬೆಂಕಿ… ಬೆಂಕಿಯಾಗಿರುತ್ತೆ..
ಎಮೋಷನ್ಸ್ ,,, ಆಕ್ಷನ್ಸ್ ,,, ಕ್ಷಣಕ್ಕೂ ಥ್ರಿಲ್ ಹೆಚ್ಚಿಸೋ ಸಸ್ಪೆನ್ಸ್ ,,, ಒಂದೊಂದು ಸೀನ್ ಅಲ್ಲ ಒಂದ್ ಸೆಕೆಂಡ್ ಕೂಡ ಆಕಡೆ ಈಕಡೆ ಕಣ್ ಹೋಗಬಾರದು ಯಾವೊಂದು ಸೀನ್ ಗಳನ್ನೂ ಮಿಸ್ ಮಾಡಿಕೊಳ್ಳಲೇ ಬಾರದು…
ಮೈ ನಡುಗಿಸುವ ಅಧೀರನನ್ನ ನೋಡೋಕು ಮೀಟರ್ ಬೇಕು ಅನ್ಸುತ್ತೆ… ಹಾರರ್ ಸಿನಿಮಾ ಅಲ್ದೇ ಹೋದ್ರೂ ,, ಭಯ ನಮ್ಮನ್ನ ಆವರಿಸಿರುತ್ತೆ…
ಸಿನಿಮಾ ಅಂದ್ರೆ ಇದು.. ಇದು… ಸಿನಿಮಾ ಅಂದ್ರೆ … ನಮ್ಮ ಕನ್ನಡದ ಸಿನಿಮಾ ಅಂತ ಬಾಲಿವುಡ್ ಗೆ ಎದೆ ತಟ್ಟಿ ಹೇಳಬಹುದು…