Tulu Films : ಇತಿಹಾಸದಲ್ಲೇ ಮೊದಲ ಬಾರಿಗೆ 11 ದೇಶಗಳಲ್ಲಿ ತುಳು ಸಿನಿಮಾದ ಪ್ರೀಮಿಯರ್ ಶೋ..!!
ಇದೇ ಮೊದಲ ಬಾರಿಗೆ ತುಳು ಸಿನಿಮಾವೊಂದರ ಪ್ರೀಮಿಯರ್ ಶೋ ವಿಶ್ವಾದ್ಯಂತ 11 ದೇಶಗಳಲ್ಲಿ ಏಕಕಾಲದಲ್ಲಿ ನಡೆಯಲಿದೆ.. ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ತುಳು ಸಿನಿಮಾ ವಿಶ್ವದ ಹನ್ನೊಂದು ರಾಷ್ಟ್ರದಲ್ಲಿ ಪ್ರೀಮಿಯರ್ ಷೋ ನಡೆಯಲಿದೆ. ವೈಭವ್ ಪ್ಲಿಕ್ಸ್ ನ ಮ್ಯಾಂಗೋ ಪಿಕಲ್ ಬ್ಯಾನರ್ ಅಡಿಯಲ್ಲಿ ತಯಾರಾದ ರಾಜ್ ‘ರಾಜ್ ಸೌಂಡ್ಸ್ & ಲೈಟ್ಸ್’ ತುಳು ಸಿನಿಮಾ ಮೇ 13,14,15 ರಂದು ಹಲವು ದೇಶಗಳಲ್ಲಿ ಪ್ರೀಮಿಯರ್ ಪ್ರದರ್ಶನ ಕಾಣಲಿದೆ.
ಎಪ್ರಿಲ್ 24 ರಂದು ದುಬೈನಲ್ಲಿರುವ ಮಾರ್ಕೋ ಪೋಲೊ ಹೊಟೇಲ್ ನಲ್ಲಿ ಈ ಪ್ರೀಮಿಯರ್ ಶೋನ ಉಧ್ಘಾಟನೆ ನೆರವೇರಲಿದೆ.. ಯುಎಸ್ ಎ, ಲಂಡನ್, ಬಹ್ರೇನ್, ಕುವೈತ್, ನೈಜೀರಿಯಾ, ಜಾಂಬಿಯಾ, ಸೌದಿ ಅರೇಬಿಯಾ, ಇಸ್ರೇಲ್, ಕತಾರ್, ಯುಎಇ ಮತ್ತು ಒಮಾನ್ ರಾಷ್ಟ್ರಗಳಲ್ಲಿ ಪ್ರೀಮಿಯರ್ ಶೋ ಪ್ರದರ್ಶನಗೊಳ್ಳಲಿದೆ.
ಅಲ್ಲದೇ ದೇಶದ ಆರು ಮಹಾನಗರದಲ್ಲೂ ಚಿತ್ರ ತೆರೆಕಾಣಲಿದೆ. ಮಂಗಳೂರು, ಬೆಂಗಳೂರು, ಮೈಸೂರು, ಬರೋಡಾ, ಪುಣೆ ಮತ್ತು ಮುಂಬೈ ನಗರದಲ್ಲಿ ಚಿತ್ರ ಪ್ರದರ್ಶನ ಆಗಲಿದೆ. ಈ ಚಿತ್ರ ತುಳು ಚಿತ್ರರಂಗದ ಅತೀ ದೊಡ್ಡ ಚಿತ್ರವಾಗಿದ್ದು ಸುಮಾರು ಒಂದೂವರೆ ಕೋಟಿ ರೂಪಾಯಿ ಬಜೆಟ್ ಹಾಕಿ ಸಿನಿಮಾವನ್ನು ನಿರ್ಮಾಣ ಮಾಡಲಾಗಿದೆ.
ಒಂದು ಮೊಟ್ಟೆಯ ಕಥೆ ಚಿತ್ರ ತಂಡದ ಸದಸ್ಯರ ನೇತೃತ್ವದಲ್ಲಿ ವೈಭವ್ ಪ್ರಿಕ್ಸ್ ಅಡಿಯಲ್ಲಿ, ಮ್ಯಾಂಗೋ ಪಿಕಲ್ ಬ್ಯಾನರ್ ಸಹಭಾಗಿತ್ವದಲ್ಲಿ ‘ರಾಜ್ ಸೌಂಡ್ಸ್ ಆಂಡ್ ಲೈಟ್ಸ್’ ಚಿತ್ರ ನಿರ್ಮಾಣ ಗೊಂಡಿದೆ. ಮೇ 20 ರಂದು ಕರಾವಳಿ ಜಿಲ್ಲೆಯಾದ್ಯಂತ ಪ್ರದರ್ಶನ ಕಾಣಲಿದೆ.
ಯುವನಟ ರಾಹುಲ್ ಅಮೀನ್ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದು , ಆನಂದ್ ಎನ್ ಕುಂಪಲ ನಿರ್ಮಾಪಕರಾಗಿದ್ದಾರೆ.. ಸಿನಿಮಾದಲ್ಲಿ ನಟ ವಿನೀತ್ ಕುಮಾರ್ ನಾಯಕನಾಗಿದ್ರೆ , ನಾಯಕಿಯಾಗಿ ಯಶ ಶಿವಕುಮಾರ್ ಹಾಗೂ ನಾಯಕಿ ಕರಿಷ್ಮಾ ಅಮೀನ್ ಅಭಿನಯಿಸಿದ್ದಾರೆ. ವಿಷ್ಣುಪ್ರಸಾದ್ ಅವರ ಛಾಯಾಗ್ರಹಣವಿದೆ.. ನವೀನ್ ಡಿ ಪಡೀಲ್, ಅರವಿಂದ್ ಬೋಳಾರ್,ಭೋಜರಾಜ್ ವಾಮಂಜೂರು ಹಾಗೂ ಸತೀಶ್ ಬಂದಲೆ, ಪ್ರಸನ್ನ ಶೆಟ್ಟಿ ಬೈಲೂರು, ಸಂದೀಪ್ ಶೆಟ್ಟಿ, ಸೇರಿದಂತೆ ದೊಡ್ಡ ತಾರಾಬಳಗವೇ ಸಿನಿಮಾದಲ್ಲಿದೆ..
Dileep : ಕೊಲೆ ಸಂಚು ಆರೋಪದಲ್ಲಿ ಕೇರಳ ಹೈಕೋರ್ಟ್ ನಿಂದ ತೀರ್ಪು