Beast : ನಿರ್ದೇಶಕರ ವಿರುದ್ಧ ನೇರವಾಗಿ ಟೀಕಿಸಿದ ವಿಜಯ್ ತಂದೆ
ಏಪ್ರಿಲ್ 13 ರಂದು ರಿಲೀಸ್ ಆದ ಬೀಸ್ಟ್ KGF 2 ಮುಂದೆ ಡಲ್ ಆಗಿದೆ.. ತಮಿಳುನಾಡಿನಲ್ಲೂ ಬೀಸ್ಟ್ ಮುಂದೆ KGF 2 ಅಬ್ಬರಿಸುತ್ತಿದೆ.. ಬೀಸ್ಟ್ ಸಿನಿಮಾಗೆ ಹೇಳಿಕೊಳ್ಳುವಂತಹ ಉತ್ತಮ ರೆಸ್ಪಾನ್ಸ್ ಸಿಗ್ತಿಲ್ಲ.. ವಿಜಯ್ ಅವರ ಅಪಿಯರೆನ್ಸ್ ಅವರ ನಟನೆಗೆ ಫುಲ್ ಮಾರ್ಕ್ಸ್ ಸಿಕ್ರೂ ,,, ಸಿನಿಮಾ ಬಗ್ಗೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿಲ್ಲ..
ಈ ರೀತಿ ಬೆಟ್ಟದಷ್ಟು ನಿರೀಕ್ಷೆ ಹುಟ್ಟುಹಾಕಿ ಟುಸಸ್ ಆದ ಬೀಸ್ಟ್ ಸಿನಿಮಾ ದಳಪತಿ ಅಭಿಮಾನಿಗಳ ಡಿಸಪಾಯಿಂಟ್ ಮೆಂಟ್ ಗೆ ಕಾರಣವಾಗಿದೆ.. ಇದೀಗ ನಟ ದಳಪತಿ ವಿಜಯ್ ಅವರ ತಂದೆ ‘ಬೀಸ್ಟ್’ ಸಿನಿಮಾದ ನಿರ್ದೇಶಕ ನೆಲ್ಸನ್ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ..
ಸಿನಿಮಾದಲ್ಲಿ ವಿಜಯ್ ಆಕ್ಷನ್ , ಅವರ ಅಪಿಯರೆನ್ಸ್ , ಅವರ ಆಕ್ಟಿಂಗ್ ಲುಕ್ , ಸ್ಟೈಲ್ ಡ್ಯಾನ್ಸ್ ಮಸ್ತ್ ಇದೆ.. ಆದ್ರೆ ಸಿನಿಮಾ ಸ್ಟೋರಿ ಡಮ್ಮಿ ಎಂದು ಆಡಿಯನ್ಸ್ ಅಸಮಾಧಾನ ಹೊರಹಾಕಿದ್ದಾರೆ..ಇದೀಗ ವಿಜಯ್ ಅವರ ತಂದೆ ಎಸ್ . ಎ ಚಂದ್ರಶೇಖರ್ ಅವರು ಈ ಬಗ್ಗೆ ಅಸಮಾಧಾನ ಹೊರಹಾಕಿದ್ದು , ಅಂತರಾಷ್ಟ್ರೀಯ ಭಯೋತ್ಪಾದನೆಯ ವಿಷಯದ ಬಗ್ಗೆ ಸಿನಿಮಾ ಮಾಡಬೇಕಾದರೆ ದೊಡ್ಡ ಮಟ್ಟದಲ್ಲಿ ಕತೆ ಹೇಳಬೇಕಾಗುತ್ತದೆ.
ಅದನ್ನು ಬಿಟ್ಟು ಒಂದು ಮಾಲ್ ನಲ್ಲಿ ಹಿರೋ ಅನ್ನಿಟ್ಟು ಅಂತರಾಷ್ಟ್ರೀಯ ಮಟ್ಟದ ವಿಷಯದ ಕತೆ ಹೇಳಲು ಅಸಾಧ್ಯ ಎಂದು ಆಕ್ರೋಶ ಹೊರಹಾಕಿದ್ದಾರೆ.. ಅಲ್ಲದೇ ವಿಜಯ್ ಸ್ಟಾರ್ ಡಮ್ ನೇ ಪ್ಲಸ್ ಪಾಯಿಂಟ್ ಮಾಡಿಕೊಂಡು ಚಿತ್ರಕತೆಯ ಮೇಲೆ ಗಮನ ಹರಿಸದಿದ್ದರೆ ಹೀಗೆಯೇ ಆಗುತ್ತದೆ.
ವಿಜಯ್ ಸ್ಟಾರ್‌ಡಮ್ ಜೊತೆಗೆ ಸಿನಿಮಾದಲ್ಲಿ ಚಿತ್ರಕತೆಯೂ ಇರಬೇಕಾಗುತ್ತದೆ. ಆದರೆ ನಿರ್ದೇಶಕರು ಅದನ್ನು ಮರೆತು ಸಿನಿಮಾ ಮಾಡಿದ್ದಾರೆ” ಎಂದು ನಿರ್ದೇಶಕರನ್ನು ಟೀಕಿಸಿದ್ದಾರೆ.
ಅಲ್ಲದೇ ನೆಲ್ಸನ್, ಈ ಸಿನಿಮಾ ಮಾಡುವ ಮುನ್ನ ಹೆಚ್ಚು ಹೋಮ್ ವರ್ಕ್ ಮಾಡಿಲ್ಲ. ಈಗಿನ ಯುವ ನಿರ್ದೇಶಕರು ಮೊದಲೆರಡು ಸಿನಿಮಾಗೆ ಬಹಳ ಕಷ್ಟಪಡುತ್ತಾರೆ. ಆದರೆ ಅವರಿಗೆ ಸ್ಟಾರ್ ನಟರ ಸಿನಿಮಾ ಸಿಕ್ಕ ನಂತರ ಎಲ್ಲವನ್ನೂ ಸ್ಟಾರ್‌ಡಮ್ ಮೇಲೆ ಹಾಕಿ ತಾವು ಆರಾಮವಾಗಿಬಿಡುತ್ತಾರೆಎಂದು ಕಿಡಿಕಾರಿದ್ದಾರೆ…