KGF 2 : ಯಶ್ – ಕಿಚ್ಚನ ಫ್ಯಾನ್ ವಾರ್ ಗೆ ಕಾರಣವಾದ ವಿಡಿಯೋದ ಅಸಲಿಯತ್ತೇ ಬೇರೆ..!!
ರಾಕಿಂಗ್ ಸ್ಟಾರ್ ಯಶ್ ಅಭಿನಯದ KGF 2 ಹಿಂದಿ ಆವೃತ್ತಿಯು ಒಟ್ಟಾರೆ 6 ದಿನಗಳಲ್ಲಿ 275 ಕೋಟಿ ರೂ ಕಲೆಕ್ಷನ್ ಮಾಡಿದೆ.. ಈ ಮೂಲಕ ಅಮಿರ್ ಖಾನ್ ರ ದಂಗಲ್ ಸಿನಿಮಾದ ಸರ್ವಾಕಾಲೀನ ದಾಖಲೆ ಮುರಿಯಲು ಸಿದ್ಧವಾಗಿದೆ ಸಿನಿಮಾ…
6 ದಿನಗಳಲ್ಲಿ ಕೇವಲ ಭಾರತವೊಂದ್ರಲ್ಲೇ 600 ಕೋಟಿಗೂ ಅಧಿಕ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡುತ್ತಿವ KGF 2 ಕನ್ನಡ ಸಿನಿಮಾರಂಗದ ಗತಿ ಬದಲಾಯಿಸಿದೆ… ಎಲ್ಲರೂ ಕನ್ನಡ ಸಿನಿಮಾರಂಗದತ್ತ ತಿರುಗಿ ನೋಡುವಂತೆ ಮಾಡಿದೆ..
ಆದ್ರೆ ಯಾಕೆ ನಮ್ಮ ಕನ್ನಡದ ಸ್ಟಾರ್ ಗಳು ಮಾತ್ರ ಸಿನಿಮಾ ಬಗ್ಗೆ ಮಾತನಾಡ್ತಿಲ್ಲ.. ಮೌನವಾಗಿದ್ದಾರೆ… ಪ್ರಶಂಸೆ ವ್ಯಕ್ತಪಡಿಸುತ್ತಿಲ್ಲ ಎಂಬುದು ಸದ್ಯ ಅಭಿಮಾನಿಗಳ ಪ್ರಶ್ನೆ ಸೋಷಿಯಲ್ ಮೀಡಿಯಲ್ಲಾಗ್ತಿರೋ ಚರ್ಚೆ..
ಇದೆಲ್ಲದರ ನಡುವೆ ಇತ್ತೀಚೆಗೆ ಜನರಲ್ಲಿ ಗೊಂದಲ ಸೃಷ್ಟಿಸಿ , ಯಶ್ – ಕಿಚ್ಚ ಸುದೀಪ್ ಅವರ ನಡುವೆಯೇ ತಂಡಿಡುವ ಕೆಲಸ ಮಾಡಿ , ಫ್ಯಾನ್ ವಾರ್ ಗೆ ಕಾರಣವಾಗಿದ್ದು ಅದೊಂದು ಫೇಕ್ ವಿಡಿಯೋ..
ಹೌದು… ಕಿಚ್ಚ ಸುದೀಪ್ ಯಶ್ ಇಬ್ಬರೂ ಸೂಪರ್ ಸ್ಟಾರ್ ಗಳು… ಆಲ್ ಓವರ್ ಇಂಡಿಯಾ ಅಭಿಮಾನಿಗಳನ್ನ ಹೊಂದಿರುವ ನಟರು.. ಇಬ್ಬರದ್ದೂ ಡಿಫರೆಂಟ್ ಮ್ಯಾನರಿಸಮ್.. –ಇಬ್ಬರದ್ದೂ ಬೇರೆ ಲೆವೆಲ್ ಕ್ರೇಜ್.. ಇಬ್ಬರೂ ಅವರ ಅವರ ರೀತಿಯಲ್ಲಿ ಮತ್ತೊಬ್ಬರಿಗೆ ಸಾಟಿಯಿಲ್ಲದ ಮೇರು ಕಲಾವಿದರು..
ಆದ್ರೆ ಕಿಚ್ಚ ಸುದೀಪ್ ಅವರು KGF 2 ಬಗ್ಗೆ ಮಾತನಾಡಿದ್ದ ವಿಡಿಯೋ ತುಣುಕೊಂದು ಸೋಷಿಯಲ್ ಮೀಡಿಯದಲ್ಲಿ ಇತ್ತೀಚೆಗೆ ಸಿಕ್ಕಾಪಟ್ಟೆ ವೈರಲ್ ಆಗಿತ್ತು.. ಸಾಕಷ್ಟು ಗೊಂದಲಕ್ಕೂ ಕಾರಣವಾಗಿತ್ತು..
ಈ ವಿಡಿಯೋ ತುಣಕಲ್ಲಿ ಪತ್ರಕರ್ತರು KGF 2 ಬಗ್ಗೆ ಕೇಳುವ ಪ್ರಶ್ನೆಗೆ ಕಿಚ್ಚ ಸುದೀಪ್ ಅವರು ಉತ್ತರಿಸಿದ್ದು “ ನಾನು ಆ ಸಿನಿಮಾದ ಪಾತ್ರವಲ್ಲ “ ಎಂದು..ಆದ್ರೆ ಈ ವಿಡಿಯೋ ಒಂದು ವರ್ಷ ಹಳೆಯದ್ದು.. ಅಂದ್ರೆ ಸಿನಿಮಾ ತಯಾರಾಗುವ ಹಂತದಲ್ಲೇ ಇತ್ತು..
ಆದ್ರೆ ಅದನ್ನ ಇತ್ತೀಚೆಗೆ ಯಾರೋ ಎಡಿಟ್ ಮಾಡಿ ಹರಿಬಿಟ್ಟು ಫ್ಯಾನ್ ವಾರ್ ಗೆ ನಾಂದಿ ಹಾಡಿ ಇಬ್ಬರು ಸ್ಟಾರ್ ಗಳ ನಡುವೆಯೇ ತಂದಿಡೋ ಕೆಲಸ ಮಾಡಿದ್ದಾರೆ…
ಸದ್ಯ ಈ ವಿಡಿಯೋ ಅಸಲಿಯತ್ತು ಎಲ್ರಿಗೂ ಗೊತ್ತಾಗುತ್ತಿದ್ದು,,,, ಗೊಂದಲ ದೂರಾಗಿದೆ..