KGF 2 : RCB ಮ್ಯಾಚ್ ವೀಕ್ಷಿಸಿದ ಸಂಜು ಬಾಬಾ ಅಂಡ್ ಟೀಮ್
ಬಾಕ್ಸ್ ಆಫೀಸ್ ಶೇಕ್ ಮಾಡಿರುವ KGF 2 ಅಬ್ಬರ ಸದ್ಯಕ್ಕಂತೂ ನಿಲ್ಲಲ್ಲ… 500 ಕೋಟಿ ಮೇಲೆ ಕಲೆಕ್ಷನ್ ಮಾಡಿದೆ ಅದು ಕೂಡ 5 ದಿನದಲ್ಲಿ ಅದು ಭಾರತದಲ್ಲೇ… ಅಂದ್ರೆ RRR ಬಾಹುಬಲಿ ರೆಕಾರ್ಡ್ ಬ್ರೇಕ್ ಮಾಡೋಕೆ ಇನ್ನೊಂದು ವಾರ ಸಿಕ್ರೆ ಸಾಕು..
ಅಂದ್ಹಾಗೆ ಬಾಲಿವುಡ್ ಬಾಕ್ಸ್ ಆಫೀಸ್ ಶೇಕ್ ಮಾಡಿರೋ KGF 2 ಕೇರಳದಲ್ಲಿ ರೆಕಾರ್ಡ್ ಮಾಡಿದೆ… ತಮಿಳುನಾಡಿನಲ್ಲೂ ಅಬ್ಬರಿಸುತ್ತಿದೆ… ಬಾಲಿವುಡ್ ನಲ್ಲಿ ನಡುಕ ಹುಟ್ಟಿಸಿ , ಟಾಲಿವುಡ್ ನಲ್ಲಿ ನೂರು ಕೋಟಿ ಕ್ಲಬ್ ಸೇರಿದೆ…
ಈ ನಡುವೆ ಸಿನಿಮಾ ತಂಡ RCB ಮ್ಯಾಚ್ ನೋಡಲು KGF ತಂಡ ಸ್ಟೇಡಿಯಮ್ ಗೆ ಹೋಗಿ RCB ಮ್ಯಾಚಚ್ ವೀಕ್ಷಿಸಿ ಹುರಿದುಂಬಿಸಸಿದ್ದು , ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ..
ಮುಂಬೈನಲ್ಲಿ RCB vs ಲಕ್ನೋ ನಡುವಿನ ಪಂದ್ಯ ವೀಕ್ಷಿಸಿಸಲು ನಿರ್ಮಾಪಕ ವಿಜಯ್ ಕಿರಗಂದೂರು ಕುಟುಂಬ ಮತ್ತು ಸ್ನೇಹಿತರು ಮುಂಬೈಗೆ ತೆರಳಿದ್ದರು. ಈ ವೇಳೆ ಅವರಿಗೆ ಆಧೀರ ಪಾತ್ರದಾರಿ ಸಂಜಯ್ ದತ್ ಮತ್ತು ರವೀನಾ ಸಹ ಸಾಥ್ ಕೊಟ್ಟಿದ್ದರು.