KGF 2 ಆರ್ಭಟದ ಎಫೆಕ್ಟ್… ಹೆಚ್ಚಾಯ್ತು ‘ಸಲಾರ್’ ಬಜೆಟ್..!!
ಉಗ್ರಂ…. ಅನ್ನೋ ಬ್ಲಾಕ್ ಬಾಸ್ಟರ್ ಸಿನಿಮಾ ಮಾಡಿ ಮೊದಲ ಸಿನಿಮಾ ಮೂಲಕವೇ ಹಿಟ್ ಆದ ಪ್ರಶಾಂತ್ ನೀಲ್ KGF ಅನ್ನೋ ಮಾಸ್ಟರ್ ಪೀಸ್ ಕೊಟ್ಟು ತಮ್ಮತ್ತ ಭಾರತದಾದ್ಯಂತ ಜನ ತಿರುಗಿ ನೋಡುವಂತೆ ಮಾಡಿದ್ರು.,.. KGF 2 ಸಿನಿಮಾ ಮೂಲಕ ಕನ್ನಡ ಸಿನಿಮಾ ಇಂಡಸ್ಟ್ರಿ ಇಡೀ ಇಂಡಿಯಾ ಬಾಕ್ಸ್ ಆಫೀಸ್ ರೂಲ್ ಮಾಡಬಹುದೆಂಬುದನ್ನ ತೋರಿಸಿಕೊಟ್ಟವರು..
ಇಂತಹ ಪ್ರಶಾಂತ್ ನೀಲ್ ಅವರ ಜೊತೆಗೆ ಕೆಲಸ ಮಾಡಲಿಕ್ಕೆ ಸ್ಟಾರ್ ನಟರೇ ತಾ ಮುಂದು ನಾ ಮುಂದು ಅಂತ ನಿಂತಿದ್ದು , ಟಾಲಿವುಡ್ ನಲ್ಲಿ ನಮ್ಮ ನೀಲ್ ಅವರಿಗೆ ಬಹು ಬೇಡಿಕೆಯಿದೆ..
ಅದ್ರಲ್ಲೂ ಬಾಹುಬಲಿ ಪ್ರಭಾಸ್ ಅವರ ಸಲಾರ್ ಸಿನಿಮಾಗೆ ಪ್ರಶಾಂತ್ ನೀಲ್ ಆಕ್ಷನ್ ಕಟ್ ಹೇಳ್ತಿದ್ಧಾರೆ.. ರಾಧೆ ಶ್ಯಾಮ್ ಸಿನಿಮಾ ಫ್ಲಾಪ್ ಆದ ಮೇಲೆ ಸಲಾರ್ ಮೇಲೆ ಡಾರ್ಲಿಂಗ್ ಅಭಿಮಾನಿಗಳ ನಿರೀಕ್ದಷೆ ಬೆಟ್ಟದಷ್ಟಿದೆ..
ಸಲಾರ್ ಸಿನಿಮಾ ಸೂಪರ್ ಹಿಟ್ ಆಗುತ್ತೆ.. ಬಾಕ್ಸ್ ಆಫೀಸ್ ಧೂಳೆಬ್ಬಿಸುತ್ತೆ ಅಂತಲೇ ಹೇಳಲ್ತಾಗಿದೆ.. ಡಾರ್ಲಿಂಗ್ ಫೇಸ್ , ಕ್ರೇಜ್ , ಮ್ಯಾನರಿಸಂ ಆಕ್ಟಿಂಗ್ ಜೊತೆಗೆ ನೀಲ್ ಸ್ಕ್ರೀನ್ ಪ್ಲೇ ಧಮಾಕಾ ಸೃಷ್ಟಿಸುತ್ತೆ.. ಅದ್ರಲ್ಲಿ ಡೌಟೇ ಇಲ್ಲ..
2023 ರಲ್ಲಿ ಈ ಸಿನಿಮಾ ಬಾಕ್ಸ್ ಆಫೀಸ್ ರೂಲ್ ಮಾಡಲಿದೆ.. ಬಾಲಿವುಡ್ ಗೆ ಮಣ್ಣು ಮುಕ್ಕಿಸಲಿದೆ.. ಇನ್ನೂ ವಿಮರ್ಶಕರ ಪ್ರಕಾರ KGF 2 ಗಿಂತಲೂ ಸಲಾರ್ ಸೌಂಡ್ ಮಾಡಬಹುದು ಎನ್ನಲಾಗ್ತಿದೆ..
ಅಷ್ಟೇ ಅಲ್ಲ KGF 2 ನ ಯಶಸ್ಸಿನ ನಂತರ ಸಲಾರ್ ನ ಬಜೆಟ್ (500 crores ) ಅನ್ನ ಮತ್ತಷ್ಟು ಹೆಚ್ಚಿಸಲಾಗಿದೆ ಎನ್ನಲಾಗ್ತಿದೆ.. ನಿರ್ಮಾಪಕ ವಿಜಯ್ ಕಿರಗಂದೂರ್ ಅವರು ಬಂಡವಾಳ ಹೂಡುತ್ತಿದ್ದು , ಹೊಂಬಾಳೆ ಫಿಲಮ್ಸ್ ಬ್ಯಾನರ್ ನ ಅಡಿ ಮೂಡಿಬರುತ್ತಿರುವ ಈ ಚಿತ್ರವನ್ನ ಮತ್ತಷ್ಟು ಅಪ್ ಡೇಟ್ ಮಾಡ ಹೊರಟಿದೆಯಂತೆ ತಂಡ..