KGF 2 : ಬಾಕ್ಸ್ ಆಫೀಸ್ ‘ಸುಲ್ತಾನ’ ರಾಕಿ ಭಾಯ್ : 6 ನೇ ದಿನದ ಕಲೆಕ್ಷನ್..!!
ಬಾಕ್ಸ್ ಆಫೀಸ್ ಶೇಕ್ ಮಾಡಿರುವ KGF 2 ಅಬ್ಬರ ಸದ್ಯಕ್ಕಂತೂ ನಿಲ್ಲಲ್ಲ… 500 ಕೋಟಿ ಮೇಲೆ ಕಲೆಕ್ಷನ್ ಮಾಡಿದೆ ಅದು ಕೂಡ 5 ದಿನದಲ್ಲಿ ಅದು ಭಾರತದಲ್ಲೇ… ಅಂದ್ರೆ RRR ಬಾಹುಬಲಿ ರೆಕಾರ್ಡ್ ಬ್ರೇಕ್ ಮಾಡೋಕೆ ಇನ್ನೊಂದು ವಾರ ಸಿಕ್ರೆ ಸಾಕು..
ಅಂದ್ಹಾಗೆ ಬಾಲಿವುಡ್ ಬಾಕ್ಸ್ ಆಫೀಸ್ ಶೇಕ್ ಮಾಡಿರೋ KGF 2 ಕೇರಳದಲ್ಲಿ ರೆಕಾರ್ಡ್ ಮಾಡಿದೆ… ತಮಿಳುನಾಡಿನಲ್ಲೂ ಅಬ್ಬರಿಸುತ್ತಿದೆ… ಬಾಲಿವುಡ್ ನಲ್ಲಿ ನಡುಕ ಹುಟ್ಟಿಸಿ , ಟಾಲಿವುಡ್ ನಲ್ಲಿ ನೂರು ಕೋಟಿ ಕ್ಲಬ್ ಸೇರಿದೆ…

ಬಾಲಿವುಡ್ ನಲ್ಲಿ ಬಾಲಿವುಡ್ ಚಿತ್ರಗಳೇ ಮಾಡದ ಸಾಧನೆಯನ್ನ ಕನ್ನಡದ ಡಬ್ಬಿಂಗ್ ಚಿತ್ರವೊಂದು ಮಾಡಿ ಮುಗಿಸಿದೆ. ಕೆಜಿಎಫ್-2 ಚಿತ್ರಕ್ಕೆ ಭಾರತದಾದ್ಯಂತ ಭರ್ಜರಿ ಓಪನಿಂಗ್ ಸಿಕ್ಕಿದೆ.
ಹಿಂದಿ ಬಾಕ್ಸಾಫೀಸ್‌ನಲ್ಲಿ ‘ಕೆಜಿಎಫ್ 2’ ದಾಖಲೆ ಮೇಲೆ, ದಾಖಲೆ ಬರೆಯುತ್ತಿದೆ. ಆಮಿರ್ ಖಾನ್, ಸಲ್ಮಾನ್ ಖಾನ್, ಶಾರುಖ್ ಖಾನ್ ಯಾವ ಖಾನ್‌ಗಳು, ಕಪೂರ್‌ಗಳು ಇಲ್ಲ ಈಗ ಏನಿದ್ದರೂ ರಾಕಿ ಭಾಯ್ ಹವಾ. ಬಾಲಿವುಡ್‌ನಲ್ಲಿ ಈಗ ಕೆಜಿಎಫ್ ಚಿತ್ರವೇ ನಂಬರ್ 1 ಆಗಿ ಬಿಟ್ಟಿದೆ. ‘ಕೆಜಿಎಫ್ 2’ ಗಳಿಕೆ ಮತ್ತಷ್ಟು ಹೆಚ್ಚಾಗಿದ್ದು, ಬಾಲಿವುಡ್‌ಗೆ ಶಾಕ್ ಕೊಟ್ಟಿದೆ.
ಸಾರ್ವಕಾಲಿಕ ಏಳನೇ ಅತಿ ಹೆಚ್ಚು ಗಳಿಕೆ ಮಾಡಿದ ಭಾರತೀಯ ಚಲನಚಿತ್ರವಾಗಿ KGF 2 ಹೊರಹೊಮ್ಮೊದೆ..
ಹಿಂದಿ ಬೆಲ್ಟ್‌ನಲ್ಲಿ ಚಿತ್ರವು ಮಂಗಳವಾರ ( 6ನೇ ದಿನ) 20 ಕೋಟಿ ರೂ. ಕಲೆಕ್ಷನ್ ಮಾಡಿದ್ದು ಒಟ್ಟಾರೆ ಹಿಂದಿ ಬಾಕ್ಸ್ ಆಫೀಸ್ ನಲ್ಲಿ ಈವರೆಗೂ 275 ಕೋಟಿ ರೂ ಕಲೆಕ್ಷನ್ ಮಾಡಿದ್ದು , ಗ್ರಾಸ್ ಕಲೆಕ್ಷನ್ ನಲ್ಲಿ ಶೀಘ್ರವೇ RRR ಬಾಹುಬಲಿ 2 ರೆಕಾರ್ಡ್ ಬ್ರೇಕ್ ಮಾಡಲಿದೆ.. ಜೊತೆಗೆ ದಂಗಲ್ ಆಲ್ ಟೈಮ್ ಇಂಡಿಯಾ ರೆಕಾರ್ಡ್ ಬ್ರೇಕ್ ಮಾಡಲು ಇನ್ನೂ KGF 2 ಗೆ ಬೇಕಿರೋದು 100 ಕೋಟಿ ರೂ ಮಾತ್ರ… ದಂಗಲ್ ಭಾರತದಲ್ಲಿ ಹಿಂದಿ ಬೆಲ್ಟ್ ನಲ್ಲಿ ಸುಮಾರು 375 ಕೋಟಿ ರೂ ಸಂಗ್ರಹಿಸಿತ್ತು..
ಈ ವಾರಂತ್ಯದಲ್ಲಿ ಸಿನಿಮಾ ಹಿಂದಿಯಲ್ಲಿ 400 ಕೋಟಿ ಒಟ್ಟಾರೆ ಕಲೆಕ್ಷನ್ ಮಾಡುವ ಸಾಧ್ಯತೆ ಇದೆ.. ಸದ್ಯ ಭಾರತವೊಂದ್ರಲ್ಲೇ ಸಿನಿಮಾದ ಬಾಕ್ಸ್ ಆಫೀಸ್ ಕೆಲಕ್ಷನ್ 600 ಕೋಟಿ ರೂ. ದಾಟಿದೆ.. ಹಿಂದಿ ಬಾಕ್ಸ್ ಆಫೀಸ್ ಗೆ ಸದ್ಯಕ್ಕೆ ರಾಕಿ ಭಾಯ್ ಸುಲ್ತಾನನಾಗಿದ್ದಾರೆ..
ಪ್ರಶಾಂತ್ ನೀಲ್ ನಿರ್ದೇಶನದ ಈ ಚಿತ್ರವು ವಿಶ್ವಾದ್ಯಂತ 600 ಕೋಟಿ ರೂಪಾಯಿಗಳ ಗಡಿ ದಾಟಿದೆ ಮತ್ತು ಬಾಕ್ಸ್ ಆಫೀಸ್‌ನಲ್ಲಿ ಇನ್ನೂ ಅಬ್ಬರಿಸುತ್ತಿದೆ.. ಇದೇ ಟ್ರೆಂಡ್ ಮುಂದುವರಿದರೆ ಕೆಜಿಎಫ್ ಚಾಪ್ಟರ್ 2 ಶೀಘ್ರದಲ್ಲೇ 1000 ಕೋಟಿ ಕ್ಲಬ್ ಸೇರಲಿದೆ.
ಪ್ರಶಾಂತ್ ನೀಲ್ ನಿರ್ದೇಶನದ, ಕೆಜಿಎಫ್ 2 ಏಪ್ರಿಲ್ 14 ರಂದು ವಿಶ್ವಾದ್ಯಂತ ಅದ್ಧೂರಿಯಾಗಿ ರಿಲೀಸ್ ಆಯ್ತು.. ಸುಮಾರು 10 ಸಾವಿರಕ್ಕೂ ಅಧಿಕ ಸ್ಕ್ರೀನ್ ಗಳಲ್ಲಿ ಸಿನಿಮಾ ರಿಲೀಸ್ ಆಯ್ತು..
ಕೆಜಿಎಫ್ 2 ಏಪ್ರಿಲ್ 18 ರಂದು ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ 5.09 ಕೋಟಿ ರೂ.ಗಳ ಪಾಲನ್ನು ಸಂಗ್ರಹಿಸಿದೆ.
ಕೆಜಿಎಫ್ 2 ಐದು ದಿನಗಳ ಅವಧಿಯಲ್ಲಿ USA ನಲ್ಲಿ $5 ಮಿಲಿಯನ್ (ಅಂದಾಜು ರೂ 39 ಕೋಟಿ) ತಲುಪಿದ ಮೊದಲ ಕನ್ನಡ ಚಲನಚಿತ್ರವಾಗಿದೆ.
ನಿರ್ದೇಶಕ ಪ್ರಶಾಂತ್ ನೀಲ್ ಅವರ ಕೆಜಿಎಫ್ 2 ಅನ್ನು ಹೊಂಬಾಳೆ ಫಿಲಂಸ್‌ನ ವಿಜಯ್ ಕಿರಗಂದೂರು ನಿರ್ಮಿಸಿದ್ದಾರೆ. ಆಕ್ಷನ್ ಥ್ರಿಲ್ಲರ್ ಚಿತ್ರದಲ್ಲಿ ಯಶ್, ಸಂಜಯ್ ದತ್, ರವೀನಾ ಟಂಡನ್ ಮತ್ತು ಶ್ರೀನಿಧಿ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿದ್ದಾರೆ. ಚಿತ್ರಕ್ಕೆ ಭುವನ್ ಗೌಡ ಅವರ ಛಾಯಾಗ್ರಹಣ, ರವಿ ಬಸ್ರೂರ್ ಅವರ ಸಂಗೀತ ಮತ್ತು ಉಜ್ವಲ್ ಕುಲಕರ್ಣಿ ಅವರ ಸಂಕಲನವಿದೆ.