KGF 2 ಇಂಪ್ಯಾಕ್ಟ್ : ಈ ವಾರ ಎಲ್ಲಾ ಸಿನಿಮಾಗಳ ರಿಲೀಸ್ ಪೋಸ್ಟ್ ಪೋನ್…!!!
KGF 2 ಸಿನಿಮಾಗೆ ಹೆದರಿ ಅಅಮಿರ್ ಖಾನ್ ಸಿನಿಮಾ ಲಾಲ್ ಸಿಂಗ್ ಚಡ್ಡಾ ಹಿಂದೆ ಸಸರಿದ ವಿಚಾರ ಗೊತ್ತೇ ಇದೆ.. ರಿಲೀಸ್ ಆಗೋಕೆ ಇನ್ನೇನು 2 ದಿನಗಳಷ್ಟೇ ಬಾಕಿ ಇರೋವಾಗಲೇ KGF 2 ಗೆ ಹೆದರಿ ಬಾಲಿವುಡ್ ನ ಜೆರ್ಸಿ ಸಿನಿಮಾ ಫಲಾಯನ ಮಾಡಿತ್ತು ಅಂದ್ರೆ ರಿಲೀಸ್ ದಿನಾಂಕ ಏಪ್ರಿಲ್ 22 ಕ್ಕೆ ಮುಂದೂಡಿದೆ.. ಜೊತೆಗೆ ಈ ಏಪ್ರಿಲ್ 22 ಕ್ಕೆ ರಿಲೀಸ್ ಆದ್ರೂ ಜೆರ್ಸಿ ಫ್ಲಾಪ್ ಆಗಲಿದೆ ಅನ್ನೋ ಮಾತುಗಳಿದ್ದು ಮತ್ತೆ ಸಿನಿಮಾ ರಿಲೀಸ್ ಪೋಸ್ಟ್ ಪೋನ್ ಆದ್ರೂ ಆಶ್ಚರ್ಯವಿಲ್ಲ..
ಅದ್ರಲ್ಲೂ ಕಾಲಿವುಡ್ ನ ಸೂಪರ್ ಸ್ಟಾರ್ ದಳಪತಿ ವಿಜಯ್ ಅವರ ಸಿನಿಮಾ KGF 2 ಮುಂದೆ ಮಂಕಾಗಿದೆ.. ಬೀಸ್ಟ್ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಸಿನಿಮಾ ಅಬ್ಬರಿಸುವಲ್ಲಿ ವಿಫಲವಾಗಿದೆ… ತಮಿಳುನಾಡಿನಲ್ಲೇ ಬೀಸ್ಟ್ ಮುಂದೆ KGF 2 ಅಬ್ಬರಿಸಿದೆ..
ಇದೆಲ್ಲಾ ನೋಡಿಕೊಂಡಿರುವ ರಿಲೀಸ್ ಗೆ ರೆಡಿಯಾಗಿದ್ದ ಸಿನಿಮಾಗಳು KGF 2 ಅಬ್ಬರ ತಗ್ಗೋವರೆಗೂ ತಮ್ಮ ಸಿನಿಮಾ ಸಿನಿಮಾಗಳನ್ನ ರಿಲೀಸ್ ಮಾಡದೇ ಇರೋದೇ ಉತ್ತಮ ಎಂಬ ನಿರ್ಧಾರಕ್ಕೆ ಬಂದಿವೆ… ಸಿನಿಮಾದ ಅಬ್ಬರ , ಕ್ರೇಜ್ ನೋಡಿ ಹೆದರಿ ಸೈಲೆಂಟಾಗಿದ್ದಾರೆ..
ಭಾರತದಲ್ಲೇ 600 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿರುವ KGF 2 ಸಿನಿಮಾ ಶೀಘ್ರದಲ್ಲೇ 1000 ಕೋಟಿ ಕ್ಲಬ್ ಸೇರಲಿದೆ.. ಜೊತೆಗೆ ಬಾಕ್ಸ್ ಆಫೀಸ್ ನಲ್ಲಿ ಸರ್ವಕಾಲೀನ ರೆಕಾರ್ಡ್ KGF 2 ಹೆಸರಿಗೆ ದಾಖಲಾಗಲಿದೆ.. ಈ ನಡುವೆ ಈವೊಂದೂ ಸಿನಿಮಾ ಕೂಡ KGF 2 ಸಿನಿಮಾ ಮುಂದೆ ರಿಲೀಸ್ ಆಗುತ್ತಿಲ್ಲ ೀ ವಾರ.. ಿದು ಸಹ ರಾಕಿ ಅಬ್ಬರಕ್ಕೆ ಮತ್ತಷ್ಟು ವೇಗ ಕೊಡುತ್ತೆ..
ಮೂರು ಟಾಲಿವುಡ್ ಸಿನಿಮಾಗಳಾದ ಅಶೋಕ ವನಮ್ಲೋ ಅರ್ಜುನ ಕಲ್ಯಾಣಂ, ಜಯಮ್ಮ ಪಂಚಾಯತಿ ಮತ್ತು ಕೃಷ್ಣ ವೃಂದ ವಿಹಾರಿ ಈ ಶುಕ್ರವಾರ ಬಿಡುಗಡೆಯಾಗಲಿದೆ ಎಂದು ಘೋಷಿಸಿದ್ದವು. ಆದರೆ ಎಲ್ಲಾ ಚಿತ್ರಗಳು ಈಗ ರಿಲೀಸ್ ದಿನಾಂಕ ಮುಂದೂಡಿಕೆ ಮಾಡಿಕೊಳ್ಳುವ ಮೂಲಕ ರಾಕಿ ಭಾಯ್ ಜೊತೆಗೆ ಟಕ್ಕರ್ ಬೇಡ ಎಂಬ ಬುದ್ದಿವಂತಿಕೆಯ ನಿರ್ಧಾರ ಮಾಡಿವೆ.,.
ಅದು ಅಲ್ದೇ ಮೆಗಾಸ್ಟಾರ್ ಚಿರಂಜೀವಿ ಮತ್ತು ರಾಮ್ ಚರಣ್ ಅಭಿನಯದ ಆಚಾರ್ಯ ಏಪ್ರಿಲ್ 29 ರಂದು ಬಿಡುಗಡೆಯಾಗಲಿದೆ. KGF 2 ಮತ್ತೆ ಆಚಾರ್ಯ ನಡುವೆ ಸಣ್ಣ ಚಿತ್ರಗಳು ಕಾಂಪಿಟೇಷನ್ ಗೆ ಇಳಿದರೆ ಸರ್ವೈವ್ ಆಗುವುದು ಕಷ್ಟ ಎಂಬುದನ್ನ ಅರಿತಂತೆ ಕಾಣ್ತಿದೆ..
KGF 2 : ಬಾಕ್ಸ್ ಆಫೀಸ್ ನಲ್ಲಿ ರಾಕಿ ಭಾಯ್ ಅಬ್ಬರಕ್ಕೆ ಬಾಲಿವುಡ್ ಶೇಕ್..!! ದಂಗಲ್ ರೆಕಾರ್ಡ್ ಉಡೀಸ್..!!!