Puneeth Rajkumar ಧ್ವನಿ ರೀ ಕ್ರಿಯೇಟ್ – ಅಪ್ಪು ಧ್ವನಿಯಲ್ಲಿ ಜೇಮ್ಸ್ ರಿ ರಿಲೀಸ್
ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅಭಿಮಾನಿಗಳಿ ಸಿಹಿ ಸುದ್ದಿ. ಅಪ್ಪು ಕೊನೆಯ ಚಿತ್ರ ಜೇಮ್ಸ್ ನಲ್ಲಿ ಅವರದ್ದೇ ಧ್ವನಿಯನ್ನ ಕೇಳಬೇಕು ಎಂದುಕೊಂಡಿದ್ದ ಅಭಿಮಾನಿಗಳಿಕೆ ಅವರ ಆಸೆಯನ್ನ ಈಡೇರಿಸುವ ಸಮಯ ಬಂದಿದೆ. ‘ಜೇಮ್ಸ್’ ಚಿತ್ರದ ಪಾತ್ರಕ್ಕೆ ಅಪ್ಪು ಅವರ ಧ್ವನಿಯನ್ನ ವಿಶೇಷ ತಂತ್ರಜ್ಞಾನದ ಮೂಲಕ ಸೇರಿಸಲಾಗುತ್ತಿದೆ.
ಏ.22 ರಂದು ‘ಜೇಮ್ಸ್’ ಅಪ್ಡೇಟ್ ಆಗಿ ರೀ ರಿಲೀಸ್ ಆಗಲಿದೆ ಎಂದು ಚಿತ್ರತಂಡ ತಿಳಿಸಿದೆ. ಭಾನುವಾರ ಖಾಸಗಿ ಹೋಟೆಲ್ನಲ್ಲಿ ನಡೆದ ಮಾಧ್ಯಮಗೋಷ್ಟಿಯಲ್ಲಿ ನಿರ್ದೇಶಕ ಚೇತನ್ ಕುಮಾರ್ ಈ ವಿಚಾರವನ್ನು ತಿಳಿಸಿದ್ದಾರೆ.
ಹೈದ್ರಾಬಾದ್ ಮೂಲದ ಟೆಕ್ಕಿಗಳು ಹೊಸ ತಂತ್ರಜ್ಞಾನವನ್ನ ಬಳಸಿಕೊಂಡು ಮೂಲ ಧ್ವನಿಯನ್ನ ಕ್ರಿಯೇಟ್ ಮಾಡುವಲ್ಲಿ ಯಶಸ್ಸು ಸಾಧಿಸಿದ್ದಾರೆ. ಹಲವು ತಿಂಗಳ ಕಾಲ ಸತತವಾಗಿ ಹಗಲು, ರಾತ್ರಿ ಪ್ರಯತ್ನಪಟ್ಟ ನಂತರ ಅಪ್ಪು ಅವರ ವಾಯ್ಸ್ ರೀ ಕ್ರಿಯೇಟ್ ಮಾಡಿದ್ದಾರೆ. ಈ ವಿಚಾರವನ್ನ ಸಿನಿಮಾದ ನಿರ್ದೇಶಕ ಚೇತನ್ ಕುಮಾರ್ ಹಂಚಿಕೊಂಡಿದ್ದಾರೆ.
ನಟರ ಧ್ವನಿಯನ್ನು ಮರು ಸೃಷ್ಟಿಸುವ ನಿಟ್ಟಿನಲ್ಲಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿರುವ ಸೌಂಡ್ ಇಂಜಿನಿಯರ್ ಶ್ರೀನಿವಾಸ್ರಾವ್ ಅವರು, ಕೊನೆಗೂ ‘ಜೇಮ್ಸ್’ ಚಿತ್ರದಲ್ಲಿ ಪುನೀತ್ ಅವರ ಧ್ವನಿಯನ್ನು ರಿ ಕ್ರಿಯೇಟ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಪುನೀತ್ ರಾಜ್ಕುಮಾರ್ ನಾಯಕ ನಟನಾಗಿ ನಟಿಸಿದ ಕೊನೆಯ ಸಿನಿಮಾ ‘ಜೇಮ್ಸ್’ ಮಾ.17ರಂದು ತೆರೆಕಂಡಿತ್ತು. ಅಪ್ಪು ಜನ್ಮ ದಿನದಂದು ರಿಲೀಸ್ ಆಗಿದ್ದ ಚಿತ್ರ ತೆರೆ ಕಂಡು ಒಂದು ತಿಂಗಳನ್ನು ಪೂರೈಸಿದೆ.