ಪಾನ್ ಮಸಾಲಾ ಜಾಹೀರಾತಿನಲ್ಲಿ ನಟಿಸಿ ತಪ್ಪು ಮಾಡಿದೆ : ಕ್ಷಮೆಯಾಚಿಸಿದ ಅಕ್ಷಯ್ ಕುಮಾರ್
KGF 2 ಸಸಿನಿಮಾ ಬಂದ ಮೇಲೆ ಬಾಲಿವುಡ್ ಗೆ ಭಯ ಶುರುವಾಗಿದೆ.. ಈ ನಡುವೆ ನೆಟ್ಟಿರು ಸೌತ್ ಹಾಗೂ ಬಾಲಿವುಡ್ ಸ್ಟಾರ್ ಗಳಿಗೆ ಕಂಪೇರ್ ಮಾಡಿ ಮಾತನಾಡಲಾರಂಭಿಸಿದ್ದರು..
ಅದ್ರಲ್ಲೂ ಬಾಯ್ಕಟ್ ಬಾಲಿವುಡ್ ಹೆವೀ ಟ್ರೆಂಡ್ ಆಗ್ತಿದೆ.. ಜೊತೆಗೆ ಬಾಲಿವುಡ್ ನ ಸ್ಟಾರ್ ಗಳು ಗುಟ್ಕಾ ತಂಬಾಕುನಂತಹ ಆಡ್ ಗಳ ಮೂಲಕ ಜನರ ದಿಕ್ಕು ತಪ್ಪಿಸುತ್ತಾರೆ ಎಂದೆಲ್ಲಾ ,, ಟ್ರೋಲ್ ಮಾಡುತ್ತಿರುವ ಹೊತ್ತಲ್ಲೇ ಅಕ್ಷಯ್ ಕುಮಾರ್ ಅಚ್ಚರಿಯ ನಿರ್ಧಾರ ಮಾಡಿ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.. ಇನ್ಸ್ಟಾಗ್ರಾಮ್ ನಲ್ಲಿ ದೊಡ್ಡ ಪೋಸ್ಟ್ ಒಂದನ್ನ ಹಾಕಿ ಬಾಲಿವುಡ್ ಕಾ ಕಿಲಾಡಿ ಕ್ಷಮೆಯಾಚಿಸಿದ್ದಾರೆ… ಅಕ್ಷಯ್ ಕುಮಾರ್ ಇತ್ತೀಚೆಗೆ ಪಾನ್ ಮಸಾಲಾ ಜಾಹೀರಾತಿನಲ್ಲಿ ಕಾಣಿಸಿಕೊಂಡರು, ನಂತರ ಅವರನ್ನು ಸಾಮಾಜಿಕ ಮಾಧ್ಯಮದಲ್ಲಿ ತೀವ್ರವಾಗಿ ಟ್ರೋಲ್ ಮಾಡಲಾಯಿತು.
ಆದದ್ರೀಗ ಈ ಬಗ್ಗೆ ಸಾಮಾಜಿಕ ಜಾಲತಾಣದ ಮೂಲಕ ಬಹಿರಂಗ ಕ್ಷಮೆ ಕೇಳಿರುವ ನಟ ಅಕ್ಷಯ್ ಕುಮಾರ್ ”ನಾನು ನನ್ನ ಅಭಿಮಾನಿಗಳು ಹಾಗೂ ನನ್ನ ಹಿತೈಷಿಗಳಿಗೆ ಕ್ಷಮೆ ಕೇಳಲು ಬಯಸುತ್ತೇನೆ. ಕಳೆದ ಕೆಲ ದಿನಗಳಿಂದ ನೀವುಗಳು ನೀಡಿರುವ ಪ್ರತಿಕ್ರಿಯೆ ನನ್ನ ಮೇಲೆ ಪರಿಣಾಮ ಬೀರಿದೆ. ನಾನು ತಂಬಾಕು ಉತ್ಪನ್ನದ ಪ್ರಚಾರ ಮಾಡಿಲ್ಲ, ಮಾಡುವುದೂ ಇಲ್ಲ. ವಿಮಲ್ ಇಲಾಯ್ಚಿ ಜೊತೆಗಿನ ನನ್ನ ಒಪ್ಪಂದದ ಬಗ್ಗೆ ಅಭಿಮಾನಿಗಳ ಅಸಮಾಧಾನಕ್ಕೆ ನಾನು ಮನ್ನಣೆ ನೀಡುತ್ತೇನೆ. ಹಾಗಾಗಿ ಒಪ್ಪಂದದಿಂದ ನಾನು ಹಿಂದೆ ಸರಿಯುತ್ತಿದ್ದೇನೆ” ಎಂದಿದ್ದಾರೆ.
”ಆ ಜಾಹೀರಾತಿನಲ್ಲಿ ನಟಿಸಿದ್ದಕ್ಕೆ ನನಗೆ ಬಂದ ಸಂಭಾವನೆಯ ಪೂರ್ಣ ಹಣವನ್ನು ಯಾವುದಾದರೂ ಸಮಾಜ ಮುಖಿ ಕೆಎಲಸಗಳಿಗೆ ವಿನಿಯೋಗಿಸಲಿದ್ದೇನೆ. ನಾನು ನಟಿಸಿರುವ ಜಾಹೀರಾತು ಮುಂದೆಯೂ ಪ್ರಸಾರವಾಗಬಹುದು, ಕಾರಣ ಅದು ಒಪ್ಪಂದಕ್ಕೆ ಒಳಪಟ್ಟಿದೆ. ಆದರೆ ನಾನು ಭರವಸೆ ನೀಡುತ್ತೇನೆ, ಮುಂದಿನ ದಿನಗಳಲ್ಲಿ ಯಾವುದೇ ಪ್ರಾಜೆಕ್ಟ್ ಕೈಗೆತ್ತಿಕೊಳ್ಳುವ ಮುಂಚೆ ಹೆಚ್ಚು ಜಾಗೃತೆಯಾಗಿರಲಿದ್ದೇನೆ. ನಿಮ್ಮ ಪ್ರೀತಿ ಹಾಗೂ ಆಶೀರ್ವಾದವನ್ನು ಮುಂದೆಯೂ ಬಯಸುತ್ತೇನೆ” ಎಂದು ಅಕ್ಷಯ್ ಕುಮಾರ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
KGF 2 : ಮಾಸ್ಟರ್ ಪೀಸ್ ಎಂದು ಕೊಂಡಾಡಿದ ರಿಯಲ್ ಸ್ಟಾರ್
KGF 2 ಸಕ್ಸಸ್ ನಂತರ , ‘ಸೂರರೈ ಪೊಟ್ರೆ’ ನಿರ್ದೇಶಕಿ ಜೊತೆ ಕೈ ಜೋಡಿಸಿದ ‘ಹೊಂಬಾಳೆ’