Mollywood : ಅಂತೆ ಸುಂದರಾನಿಕಿ ಟೀಸರ್ ರಿಲೀಸ್
ಅಂತೆ ಸುಂದರಾನಿಕಿ ಟೀಸರ್ ರಿಲೀಸ್ ಆಗಿದೆ… ನಾನಿ ಮತ್ತು ನಜ್ರಿಯಾ ಫಹಾದ್ ಅವರ ಕೆಮಿಸ್ಟ್ರಿ ಟ್ರೇಲರ್ ನೋಡಿ ಅಭಿಮಾನಿಗಳು ಮೆಚ್ಚಿಕೊಳ್ತಿದ್ದಾರೆ.. ನ್ಯಾಚುರಲ್ ಸ್ಟಾರ್ ನಾನಿ ಮತ್ತು ನಜ್ರಿಯಾ ಫಹಾದ್ ಅಭಿನಯದ ಅಂತೆ ಸುಂದರಾನಿಕಿ ಚಿತ್ರದ ಟೀಸರ್ ಅನ್ನು ಬಿಡುಗಡಡೆ ಮಾಡೋ ಜೊತೆಗೆ ಚಿತ್ರದ ಬಿಡುಗಡೆ ದಿನಾಂಕವನ್ನೂ ಪ್ರಕಟಿಸಲಾಗಿದೆ.. ಕೇವಲ ಎರಡು ನಿಮಿಷಗಳ ಟೀಸರ್‌ನಲ್ಲಿ, ಸಂಪ್ರದಾಯವಾದಿ ತೆಲುಗು ಬ್ರಾಹ್ಮಣ ಕುಟುಂಬದ ಪಾತ್ರದಲ್ಲಿ ನಾನಿ ಕಾಣಿಸಿಕೊಂಡಿದ್ದಾರೆ.. ಲೀಲಾ ಥಾಮಸ್ ಎಂಬ ಮಲಯಾಳಿ ಕ್ರಿಶ್ಚಿಯನ್ ಹುಡುಗಿಯ ಪ್ರೀತಿಯ ಕಥೆಯನ್ನು ನಾವು ಇಲ್ಲಿ ನೋಡಬಹುದು..
Anushka Shetty : ಕರಾವಳಿ ಕ್ಯೂಟಿ , ಟಾಲಿವುಡ್ ನ ಸ್ವೀಟಿ ಅನುಷ್ಕಾ ಸಿನಿ ಜರ್ನಿ ಎಷ್ಟು ರೋಚಕ..!!
ಈ ಹಿಂದೆ ಮೆಂಟಲ್ ಮದಿಲೋ ಮತ್ತು ಬ್ರೋಚೆವರೆವರುರಾ ಚಿತ್ರಗಳನ್ನು ನಿರ್ದೇಶಿಸಿದ್ದ ವಿವೇಕ್ ಆತ್ರೇಯ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಇದು ನಿರ್ದೇಶಕ ಮತ್ತು ನಾಯಕ ನಟ ನಾನಿ ನಡುವಿನ ಮೊದಲ ಸಹಯೋಗವನ್ನು ಗುರುತಿಸುತ್ತದೆ. ಮೈತ್ರಿ ಮೂವೀ ಮೇಕರ್ಸ್ ಬ್ಯಾನರ್ ಅಡಿಯಲ್ಲಿ ಸಿನಿಮಾ ಮೂಡಿಬಂದಿದೆ.. ಸುಂದರಾನಿಕಿ ಮಾಲಿವುಡ್ ನಟಿ ನಜ್ರಿಯಾ ಫಹಾದ್ ಅವರ ಟಾಲಿವುಡ್ ಚೊಚ್ಚಲ ಚಿತ್ರವಾಗಿದೆ.