KGF 2 ಸಕ್ಸಸ್ ನಂತರ , ‘ಸೂರರೈ ಪೊಟ್ರೆ’ ನಿರ್ದೇಶಕಿ ಜೊತೆ ಕೈ ಜೋಡಿಸಿದ ‘ಹೊಂಬಾಳೆ’
ಬಾಕ್ಸ್ ಆಫೀಸ್ ಶೇಕ್ ಮಾಡಿರುವ KGF 2 ಅಬ್ಬರ ಸದ್ಯಕ್ಕಂತೂ ನಿಲ್ಲಲ್ಲ… 500 ಕೋಟಿ ಮೇಲೆ ಕಲೆಕ್ಷನ್ ಮಾಡಿದೆ ಅದು ಕೂಡ 5 ದಿನದಲ್ಲಿ ಅದು ಭಾರತದಲ್ಲೇ… ಅಂದ್ರೆ RRR ಬಾಹುಬಲಿ ರೆಕಾರ್ಡ್ ಬ್ರೇಕ್ ಮಾಡೋಕೆ ಇನ್ನೊಂದು ವಾರ ಸಿಕ್ರೆ ಸಾಕು..
ಅಂದ್ಹಾಗೆ ಬಾಲಿವುಡ್ ಬಾಕ್ಸ್ ಆಫೀಸ್ ಶೇಕ್ ಮಾಡಿರೋ KGF 2 ಕೇರಳದಲ್ಲಿ ರೆಕಾರ್ಡ್ ಮಾಡಿದೆ… ತಮಿಳುನಾಡಿನಲ್ಲೂ ಅಬ್ಬರಿಸುತ್ತಿದೆ… ಬಾಲಿವುಡ್ ನಲ್ಲಿ ನಡುಕ ಹುಟ್ಟಿಸಿ , ಟಾಲಿವುಡ್ ನಲ್ಲಿ ನೂರು ಕೋಟಿ ಕ್ಲಬ್ ಸೇರಿದೆ…
ಒಟ್ಟಾರೆಯಾಗಿ ಸಿನಿಮಾ 700 ಕೋಟಿಗೂ ಅಧಿಕ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿದೆ ಅದು ಸಹ ಕೇವಲ 7 ದಿನಗಳಲ್ಲಿ… ದಾಖಲೆಗಳ ಮೇಲೆ ದಾಖಲೆ ಬರೆಯುತ್ತಿರುವ ಇಂತಹ ಮಾಸ್ಟರ್ ಪೀಸ್ ಸಿನಿಮಾ ನಿರ್ಮಾಣ ಮಾಡ್ತಿರುವ ಹೊಂಬಾಳೆ ಫೀಲಮ್ಸ್ ಸಂಸ್ಥೆ ಸದ್ಯದಲ್ಲೇ ಇಂಡಿಯಾದ ಟಾಪ್ ಪ್ರೊಡಕ್ಷನ್ ಲಿಸ್ಟ್ ಗೆ ಸೇರೋದ್ರಲ್ಲಿ ಡೌಟೇ ಇಲ್ಲ..
ಈಗಾಗಲೇ ತೆಲುಗು ಇಂಡಸ್ಟ್ರಿಯಲ್ಲೂ ಸಿನಿಮಾ ನಿರ್ಮಾಣ ಮಾಡ್ತಿರೋ ಹೊಂಬಾಳೆ ಇದೀಗ ತಮಿಳಿನ ಸ್ಟಾರ್ ಲೇಡಿ ಡೈರೆಕ್ಟರ್ ನಿರ್ಮಾಣದ ಸಿನಿಮಾಗೆ ಬಂಡವಳ ಹೂಡಲು ಸಿದ್ದವಾಗಿದೆ..
ಹೌದು..! ಹೊಂಬಾಳೆ ಬ್ಯಾನರ್ ನಡಿ ಹೊಸ ಸಿನಿಮಾಗೆ ತಮಿಳಿನ ಸ್ಟಾರ್ ನಿರ್ದೇಶಕಿ ಸುಧಾ ಕೊಂಗರ ಆಕ್ಷನ್ ಕಟ್ ಹೇಳಲಿದ್ದಾರೆ..
ನಿರ್ದೇಶಕಿ ಸುಧಾ ಕೊಂಗರ ಅವರು ತಮಿಳು ಸಿನಿಮಾರಂಗದಲ್ಲಿ ಕಂಟೆಂಟ್ ಬೇಸ್ಡ್ , ಹಾಗೂ ವಿಭಿನ್ನ ಸಿನಿಮಾಗಳನ್ನ ಮಾಡುವ ನಿರ್ದೇಶಕರ ಪೈಕಿ ಒಬ್ಬರು.. ಈ ಹಿಂದೆ ಸೂರ್ಯ ನಟನೆಯ `ಸೂರರೈ ಪೋಟ್ರು’ ನಿರ್ದೇಶನ ಮಾಡಿ ಗಮನ ಸೆಳೆದಿದ್ದರು. ಈ ಸಿನಿಮಾ ಆಸ್ಕರ್ ರೇಸ್ ನಲ್ಲಿಯೂ ಇತ್ತು.. ಅಂದ್ಹಾಗೆ ಇದೀಗ ಸುದಾ ಅವರು ಹೊಂಬಾಳೆ ಫಿಲಮ್ಸ್ ಜೊತೆಗೆ ಕೆಲಸ ಮಾಡುವ ಅವಕಾಶ ಗಿಟ್ಟಿಸಿಕೊಂಡಿದ್ದು ಈ ಸುದ್ದಿ ಸಂಚಲನ ಸೃಷ್ಟಿ ಮಾಡಿದೆ.. ಅಲ್ಲದೇ ಈ ಸಿನಿಮಾಗೆ ನಾಯಕ ಯಾರೆಂಬ ಕುತೂಹಲ ಎಲ್ಲರನ್ನೂ ಕಾಡುತ್ತಿದೆ..
KGF 2 : ಬಾಕ್ಸ್ ಆಫೀಸ್ ನಲ್ಲಿ ರಾಕಿ ತೂಫಾನ್ : 7 ದಿನ – 719.30 ಕೋಟಿ ರೂ. ಕಲೆಕ್ಷನ್
Nabha Natesh : ಪಟ್ ಪಟ್ ಪಟಾಕಿ ಹುಡುಗಿಯ ಹಾಟ್ ಫೋಟೋ ಶೂಟ್..!!