KGF 2 : ಬಾಕ್ಸ್ ಆಫೀಸ್ ನಲ್ಲಿ ರಾಕಿ ತೂಫಾನ್ : 7 ದಿನ – 719.30 ಕೋಟಿ ರೂ. ಕಲೆಕ್ಷನ್
ಬಾಕ್ಸ್ ಆಫೀಸ್ ಶೇಕ್ ಮಾಡ್ತಿರುವ ನಮ್ಮ KGF 2 ಸಿನಿಮಾ ಕೇವಲ 7 ದಿನಗಳಲ್ಲೇ 700 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ದಾಖಲೆ ಬರೆದಿದೆ..
ಬಾಕ್ಸ್ ಆಫೀಸ್ನಲ್ಲಿ 7 ದಿನಗಳ ಕಲೆಕ್ಷನ್ ಒಟ್ಟು 719.30 ಕೋಟಿ ರೂ.
KGF 2 ಮೊದಲ ದಿನವೇ ಭಾರತದಲ್ಲಿ 135 ಕೋಟಿ ಕಲೆಕ್ಷನ್ ಮಾಡಿದ್ರೆ , ಭಾರತ ಬಿಟ್ಟು ಸಾಗರದಾಚೆ 164.20 ಕೋಟಿ ರೂ ಸಂಪಾದನೆ ಮಾಡಿತ್ತು.. ಒಟ್ಟು 7 ದಿನಗಳಲ್ಲಿ ಸಿನಿಮಾ 719.30 ಕೋಟಿ ಕಲೆಕ್ಷನ್ ಮಾಡಿದೆ..
7 ದಿನಗಳ ಬಾಕ್ಸ್ ಆಫೀಸ್ ಕಲೆಕ್ಷನ್ಸ್
ಕರ್ನಾಟಕ – 115.30 ಕೋಟಿ
ತೆಲುಗು ರಾಜ್ಯಗಳು – 102.60 ಕೋಟಿ
ತಮಿಳುನಾಡು – 45.60 ಕೋಟಿ
ಕೇರಳ – 41.15 ಕೋಟಿ
ಹಿಂದಿ + ROI – 300.60 ಕೋಟಿ
ಸಾಗರೋತ್ತರ – 114.05 ಕೋಟಿ
ಕೇವಲ 5 ದಿನಗಳಲ್ಲಿ ಹಿಂದಿ ಬೆಲ್ಟ್ನಲ್ಲಿ ರೂ 200 ಕೋಟಿ ಸಂಪಾದಿಸಿದ್ದ ಸಿನಿಮಾ ಬಾಹುಬಲಿ 2 ರ ದಾಖಲೆಯನ್ನು ಮುರಿಯುವ ಸನಿಹ ತಲುಪಿದೆ.. ಆಂಧ್ರ ಪ್ರದೇಶ, ತೆಲಂಗಾಣ, ಕರ್ನಾಟಕ ಮತ್ತು ಉತ್ತರ ಭಾರತದ ಬೆಲ್ಟ್ನಂತಹ ಪ್ರಮುಖ ಬಾಕ್ಸ್ ಆಫೀಸ್ ಮಾರುಕಟ್ಟೆಯಲ್ಲಿ ಚಿತ್ರವು ಅಸಾಧಾರಣ ಸಾಧನೆ ಮಾಡಿದೆ..
ಈ ಚಿತ್ರವು ಹೆಚ್ಚಿನ ಸಂಖ್ಯೆಯಲ್ಲಿ ಥಿಯೇಟರ್ಗಳಿಗೆ ಜನರನ್ನು ಸೆಳೆಯುತ್ತಿದೆ ಎಂದು ಹೇಳಲಾಗುತ್ತದೆ.
ಚಿತ್ರ ಈಗ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಪ್ರದರ್ಶನ ಕಾಣ್ತಿದೆ.. ಎರಡನೇ ವಾರಾಂತ್ಯದಲ್ಲಿ 1000 ಕೋಟಿ ಬಾಕ್ಸ್ ಆಫೀಸ್ ಕಲೆಕ್ಷನ್ ದಾಟಲಿದ್ದು ಬಾಹುಬಲಿ 2 , RRR , ದಂಗಲ್ ರೆಕಾರ್ಡ್ ನೂ ಸಹ ಇಂಡಿಯಾದಲ್ಲಿ ಬ್ರೇಕ್ ಮಾಡಲಿದೆ ಎನ್ನುತ್ತಿದ್ದಾರೆ ಸಿನಿಮಾ ಪಂಡಿತರು..