KGF 2 : ಜೆರ್ಸಿ ಭವಿಷ್ಯ : ‘ರಾಕಿ ಭಾಯ್ ‘ ಎದುರು ಸರ್ವೈವ್ ಆಗೋದು ಕಷ್ಟ..!!
ಬಾಕ್ಸ್ ಆಫೀಸ್ ಶೇಕ್ ಮಾಡಿರುವ KGF 2 ಅಬ್ಬರ ಸದ್ಯಕ್ಕಂತೂ ನಿಲ್ಲಲ್ಲ… ಬಾಲಿವುಡ್ ಬಾಕ್ಸ್ ಆಫೀಸ್ ಶೇಕ್ ಮಾಡಿರೋ KGF 2 ಕೇರಳದಲ್ಲಿ ರೆಕಾರ್ಡ್ ಮಾಡಿದೆ… ತಮಿಳುನಾಡಿನಲ್ಲೂ ಅಬ್ಬರಿಸುತ್ತಿದೆ… ಬಾಲಿವುಡ್ ನಲ್ಲಿ ನಡುಕ ಹುಟ್ಟಿಸಿ , ಟಾಲಿವುಡ್ ನಲ್ಲಿ ನೂರು ಕೋಟಿ ಕ್ಲಬ್ ಸೇರಿದೆ…
ಬಾಲಿವುಡ್ ನಲ್ಲಿ ಬಾಲಿವುಡ್ ಚಿತ್ರಗಳೇ ಮಾಡದ ಸಾಧನೆಯನ್ನ ಕನ್ನಡದ ಡಬ್ಬಿಂಗ್ ಚಿತ್ರವೊಂದು ಮಾಡಿ ಮುಗಿಸಿದೆ. ಕೆಜಿಎಫ್-2 ಚಿತ್ರಕ್ಕೆ ಭಾರತದಾದ್ಯಂತ ಭರ್ಜರಿ ಓಪನಿಂಗ್ ಸಿಕ್ಕಿದೆ.
ಹಿಂದಿ ಬಾಕ್ಸಾಫೀಸ್‌ನಲ್ಲಿ ‘ಕೆಜಿಎಫ್ 2’ ದಾಖಲೆ ಮೇಲೆ, ದಾಖಲೆ ಬರೆಯುತ್ತಿದೆ. ಆಮಿರ್ ಖಾನ್, ಸಲ್ಮಾನ್ ಖಾನ್, ಶಾರುಖ್ ಖಾನ್ ಯಾವ ಖಾನ್‌ಗಳು, ಕಪೂರ್‌ಗಳು ಇಲ್ಲ ಈಗ ಏನಿದ್ದರೂ ರಾಕಿ ಭಾಯ್ ಹವಾ. ಬಾಲಿವುಡ್‌ನಲ್ಲಿ ಈಗ ಕೆಜಿಎಫ್ ಚಿತ್ರವೇ ನಂಬರ್ 1 ಆಗಿ ಬಿಟ್ಟಿದೆ. ‘ಕೆಜಿಎಫ್ 2’ ಗಳಿಕೆ ಮತ್ತಷ್ಟು ಹೆಚ್ಚಾಗಿದ್ದು, ಬಾಲಿವುಡ್‌ಗೆ ಶಾಕ್ ಕೊಟ್ಟಿದೆ.
KGF 2 ಗೆ ಟಕ್ಕರ್ ಕೊಡಬಲ್ಲೇ ಅನ್ನೋ ಭ್ರಮೆಯಿಂದ ಹೊರಬಂದು ಬಿಡುಗೆಡೆಗೆ 2 ದಿನ ಬಾಕಿಯಿದ್ದಾಗಲೇ ಹಿಂದೆ ಸರಿದಿದ್ದ ಬಾಲಿವುಡ್ ನ ಶಾಹೀದ್ ಕಪೂರ್ ನಟನೆಯ ಜೆರ್ಸಿ ಸಿನಿಮಾ ಏಪ್ರಿಲ್ 22 ಕ್ಕೆ ರಿಲೀಸ್ ಗೆ ರೆಡಿಯಾಗಿ ನಿಂತಿದೆ..
ಆದ್ರೆ ಈಗಲೂ ಸಮಯವಿದೆ ಜರ್ಸಿ ಹಿಂದೆ ಸರಿದ್ರೆ ಒಳ್ಳೆಯದ್ದು.. ಇಲ್ಲ ರಾಕಿ ಅಬ್ಬರದ ಮುಂದೆ ಉಸಿರುಗಟ್ಟಿ ಸಾಯುತ್ತೆ ಎಂದು ನೆಟ್ಟಿಗರು ವಾರ್ನ್ ಮಾಡ್ತಿದ್ದಾರೆ. ಯಾಕಂದ್ರೆ ಸದ್ಯಕ್ಕಂತೂ ರಾಕಿ ಭಾಯ್ ಹವಾ ತಗ್ಗೋದಿಲ್ಲ..
ತೆಲುಗಿನ ಜೆರ್ಸಿ ಸಿನಿಮಾದ ರಿಮೇಕ್ ಸಿನಿಮಾ ಈ ಜೆರ್ಸಿ.. ರಾಷ್ಟ್ರೀಯ ಪ್ರಶಸ್ತಿ ವಿಜೇತ ತೆಲುಗು ಚಲನಚಿತ್ರದ ರಿಮೇಕ್ ಆಗಿದೆ. ಇದನ್ನು ಗೌತಮ್ ತಿನ್ನನೂರಿ ನಿರ್ದೇಶಿಸಿದ್ದಾರೆ, ಅವರು 2019 ರಲ್ಲಿ ನಾನಿ ಅಭಿನಯದ ಜೆರ್ಸಿ ಚಿತ್ರವನ್ನು ನಿರ್ದೇಶಿಸಿದ್ದರು.
ಟ್ರೇಡ್ ವಿಶ್ಲೇಷಕರ ಪ್ರಕಾರ, ಯಶ್ ಅವರ ಕೆಜಿಎಫ್ ಚಾಪ್ಟರ್ 2 ನ ಬೇಡಿಕೆ , ಕ್ರೇಜ್ ನ ನೋಡಿದ್ರೆ ಜರ್ಸಿ ಉತ್ತಮ ಓಪನಿಂಗ್ ಪಡೆಯೋದರಲ್ಲಿ ಬಹುತೇಕ ಎಡವಲಿದೆ ಎನ್ನಲಾಗ್ತಿದೆ..