KGF 2 : ಮಾಸ್ಟರ್ ಪೀಸ್ ಎಂದು ಕೊಂಡಾಡಿದ ರಿಯಲ್ ಸ್ಟಾರ್
ರಾಕಿಂಗ್ ಸ್ಟಾರ್ ಯಶ್ ಅಭಿನಯದ KGF 2 ಹಿಂದಿ ಆವೃತ್ತಿಯು ಒಟ್ಟಾರೆ 7 ದಿನಗಳಲ್ಲಿ 300 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ.. ಈ ಮೂಲಕ ಅಮಿರ್ ಖಾನ್ ರ ದಂಗಲ್ ಸಿನಿಮಾದ ಸರ್ವಾಕಾಲೀನ ದಾಖಲೆ ಮುರಿಯಲು ಸಿದ್ಧವಾಗಿದೆ ಸಿನಿಮಾ…
7 ದಿನಗಳಲ್ಲಿ 700 ಕೋಟಿ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿದೆ..
KGF 2 ಕನ್ನಡ ಸಿನಿಮಾರಂಗದ ಗತಿ ಬದಲಾಯಿಸಿದೆ… ಎಲ್ಲರೂ ಕನ್ನಡ ಸಿನಿಮಾರಂಗದತ್ತ ತಿರುಗಿ ನೋಡುವಂತೆ ಮಾಡಿದೆ..
ಆದ್ರೆ ಯಾಕೆ ನಮ್ಮ ಕನ್ನಡದ ಸ್ಟಾರ್ ಗಳು ಮಾತ್ರ ಸಿನಿಮಾ ಬಗ್ಗೆ ಮಾತನಾಡ್ತಿಲ್ಲ.. ಮೌನವಾಗಿದ್ದಾರೆ… ಪ್ರಶಂಸೆ ವ್ಯಕ್ತಪಡಿಸುತ್ತಿಲ್ಲ ಎಂಬ ಮಾತುಗಳು
ಕೇಳಿಬರುತ್ತಿರುವ ಹೊತ್ತಲ್ಲೇ ರಿಯಲ್ ಸ್ಟಾರ್ ಉಪೇಂದ್ರ ಈ ಸಿನಿಮಾವನ್ನ ಹಾಡಿ ಹೊಗಳಿದ್ದಾರೆ.. ೀ ಸಿನಿಮಾವನ್ನ ಮಾಸ್ಟರ್ ಪೀಸ್ ಎಂದು ಕರೆದಿದ್ದಾರೆ..
ಉಪೇಂದ್ರ `ಕೆಜಿಎಫ್ 2′ ನೋಡಿ ಚಿತ್ರತಂಡವನ್ನ ಶ್ಲಾಘಿಸಿದ್ದಾರೆ.. ಕಬ್ಜ ಸಿನಿಮಾ ನಂತರ , ತಮ್ಮದೇ ಡೈರೆಕ್ಷನ್ ಸಿನಿಮಾ –ಹೀಗೆ ಬ್ಯುಸಿಯಿರುವ ಉಪ್ಪಿ ಬಿಡುವು ಮಾಡಿಕೊಂಡು KGF 2 ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು KGF 2 ಒಂದು ಮಾಸ್ಟರ್ ಪೀಸ್ ಎಂದಿದ್ದಾರೆ..
KGF 2 – Upendra