KGF 2 : ಥಿಯೇಟರ್ ನಲ್ಲೇ ಯುವಕನ ಮೇಲೆ ಗುಂಡು ಹಾರಿಸಿದ ಪುಡಾರಿಗಳು
ಹಾವೇರಿ : KGF 2 ಸಿನಿಮಾ ಪ್ರದರ್ಶನದ ವೇಳೆ ಸಿನಿಮಾ ಮಂದಿರದಲ್ಲೇ ಸಿನಿಮೀಯ ರೀತಿಯಲ್ಲೇ ಸುಮಾರು 27 ವರ್ಷದ ಯುವಕನ ಮೇಲೆ ಗುಂಡು ಹಾರಿಸಿರುವಂತಹ ಘಟನೆ ನಡೆದಿದೆ.. ಹಾವೇರಿಯ ಶಿಗ್ಗಾಂವಿ ತಾಲೂಕಿನಲ್ಲಿ ಮಂಗಳವಾರ ತಡರಾತ್ರಿ ಚಿತ್ರಮಂದಿರದಲ್ಲಿ ಸಿನಿಮಾ ನೋಡುತ್ತಿದ್ದ ವೇಳೆ ಕ್ಷುಲ್ಲಕ ಕಾರಣಕ್ಕೆ ನಡಡೆದ ಜಗಳದಲ್ಲಿ ಯುವಕನೊಬ್ಬನಿಗೆ ಮತ್ತೊಬ್ಬ ಹೊಟ್ಟೆಗೆ ಎರಡು ಗುಂಡು ಹಾರಿಸಿರುವ ಘಟನೆ ನಡೆದಿದೆ.
ಸಂತ್ರಸ್ತನನ್ನ ವಸಂತಕುಮಾರ್ ಮುಗಳಿ ಎಂದು ಗುರುತಿಸಲಾಗಿದ್ದು ಹುಬ್ಬಳ್ಳಿಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗ್ತಿದೆ.. ಆರೋಪಿಯ ಗುರುತು ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಥಿಯೇಟರ್‌ನಲ್ಲಿ ರಾತ್ರಿ ಪ್ರದರ್ಶನದ ವೇಳೆ ಈ ಘಟನೆ ನಡೆದಿದೆ.
ತಾಲೂಕಿನ ಮುಗಳಿ ಗ್ರಾಮದ ತನ್ನ ಸ್ನೇಹಿತರೊಂದಿಗೆ ಇತ್ತೀಚಿನ ಕನ್ನಡ ಸಿನಿಮಾ ಕೆಜಿಎಫ್ 2 ವೀಕ್ಷಿಸಲು ವಸಂತ್ ಥಿಯೇಟರ್‌ಗೆ ಆಗಮಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.