Kollywood : ಮುಂಬರುವ ಬಹುನಿರೀಕ್ಷೆಯ ತಮಿಳಿನ ಪ್ಯಾನ್ ಇಂಡಿಯಾ ಸಿನಿಮಾಗಳ ಪಟ್ಟಿ ಇಲ್ಲಿದೆ..!!!
ಕನ್ನಡ , ತೆಲುಗಿನ ಜೊತೆಗೆ ಈಗ ತಮಿಳಿನ ಸಿನಿಮಾಗಳತ್ತ ಹಿಂದಿ ಪ್ರೇಕ್ಷಕರು ಒಲವು ತೋರುತ್ತಿದ್ದಾರೆ.. ಸದ್ಯಕ್ಕೆ ಬೀಸ್ಟ್ ಹೇಳಿಕೊಳ್ಳುವಂತಹ ಯಶಸ್ಸು ಕಂಡಿಲ್ಲ.. ಆದ್ರೆ ಮುಂದೆ ತಮಿಳಿನ ಬಹುನಿರೀಕ್ಷಿತ ಬಿಗ್ ಬಜೆಟ್ ಸಿನಿಮಾಗಳು ಪಕ್ಕಾ ಕ್ಲಿಕ್ ಆಗಲಿವೆ..
ಈ 5 ಪ್ರಮುಖ ಮುಂಬರುವ ತಮಿಳು ಚಲನಚಿತ್ರಗಳು ಬಾಕ್ಸ್ ಆಫೀಸ್ ನಲ್ಲೂ ಕಮಾಲ್ ಮಾಡಲಿದ್ದು , ಹಿಂದಿ ಅಭಿಮಾನಿಗಳನ್ನ ರಂಜಿಸಲಿವೆ..
K.G.F, Pushpa, ಮತ್ತು RRR , KGF 2 ಗಲ್ಲಾಪೆಟ್ಟಿಗೆಯಲ್ಲಿ ಮೋಡಿ ಮಾಡಿದ ನಂತರ ದಕ್ಷಿಣ ಭಾರತದ ಚಿತ್ರರಂಗದ ಸಾಮರ್ಥ್ಯವನ್ನು ತೋರಿಸಿವೆ, ಈ ಪ್ಯಾನ್-ಇಂಡಿಯನ್ ಚಲನಚಿತ್ರಗಳು ನಟರನ್ನು ದೇಶಾದ್ಯಂತ ಜನಪ್ರಿಯಗೊಳಿಸಿದ್ದು ಮಾತ್ರವಲ್ಲದೆ ರಾಜಮೌಳಿ, ಸುಕುಮಾರ್ ಮತ್ತು ಪ್ರಶಾಂತ್ ನೀಲ್ ಅವರಂತಹ ಪ್ರತಿಭಾವಂತ ನಿರ್ದೇಶಕರಿಗೂ ದೊಡ್ಡ ಹೆಸರು ತಂದುಕೊಟ್ಟಿವೆ..
ಮುಂದೆ ಪ್ರಮುಖ ತಮಿಳು ಸಿನಿಮಾಗಳು ದೇಶಾದ್ಯಂತ ಸಂಚಲನ ಸೃಷ್ಟಿ ಮಾಡಲು ರೆಡಿಯಾಗ್ತಿವೆ.. ಅಂತಹ ಸಿನಿಮಾಗಳ ಪಟ್ಟಿ ಇಲ್ಲಿದೆ..
1. ಕೋಬ್ರಾ
ಚಿಯಾನ್ ವಿಕ್ರಮ್, ಶ್ರೀನಿಧಿ ಶೆಟ್ಟಿ, ಇರ್ಫಾನ್ ಪಠಾಣ್, ರೋಷನ್ ಮ್ಯಾಥ್ಯೂ ಪ್ರಮುಖ ಪಾತ್ರಗಳಲ್ಲಿರುವ ಈ ಸಿನಿಮಾ ಡಿಫರೆಂಟ್ ಕಾನ್ಸೆಪ್ಟ್ ಹೊಂದಿದ್ದು ಸಿನಿಮಾದ ಟೀಸರ್ ಕಾತರತೆ ಹೆಚ್ಚಸಿದೆಇ.. ಹಾಗೆ ನೋಡಿದ್ರೆ ಕಂದಸಾಮಿ , ಅನ್ನಿಯನ್ , ಐ ನಂತಹ ವಿಭಿನ್ನ ಸಿನಿಮಾಗಳಲ್ಲೇ ವಿಕ್ರಮ್ ನಟಿಸಿ ಸೈ ಎನಿಸಿಕೊಂಡಿದ್ದು ಅವರ ಅ ಸಿನಿಮಾಗಳಿಂದ ಜನ ಸದಾ ಹೊಸತನ್ನ ನಿರೀಕ್ಷೆ ಮಾಡುತ್ತಾರೆ..
ಈ ಸಿನಿಮಾ ಮೇ 25ಕ್ಕೆ ರಿಲೀಸ್ ಆಗಲಿದೆ. ಈ ಸಿನಿಮಾಗೆ ಅಜಯ್ ಜ್ಞಾನಮುತ್ತು ಆಕ್ಷನ್ ಕಟ್ ಹೇಳಿದ್ದಾರೆ.
2. ವಿಕ್ರಮ್
ಕಮಲ್ ಹಾಸನ್, ವಿಜಯ್ ಸೇತುಪತಿ, ಫಹಾದ್ ಫಾಸಿಲ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ತಿರುವ ಬಹುನಿರೀಕ್ಷೆಯ ಸಿನಿಮಾ ವಿಕ್ರಮ್ ಸಹ ಈಗಾಗಲೇ ಟೀಸರ್ ಮೂಲಕವೇ ಎದೆ ಬಡಿತ ಹೆಚ್ಚಿಸಿದೆ.. ಈ ಸಿನಿಮಾ ಜೂನ್ 3 ರಂದು ರಿಲೀಸ್ ಆಗಲಿದೆ.. ಲೋಕೇಶ್ ಕನಕರಾಜ್ ಅವರು ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದು ಇದು ಕಮಲ್ ಹಾಸನ್ ಅವರ 232 ನೇ ಚಿತ್ರವಾಗಿದೆ.
3. PS-I
ವಿಕ್ರಮ್, ಐಶ್ವರ್ಯ ರೈ ಬಚ್ಚನ್, ತ್ರಿಶಾ ಕೃಷ್ಣನ್, ಜಯಂ ರವಿ, ಕಾರ್ತಿ ಹೀಗೆ ಮಲ್ಟಿಸ್ಟಾರ್ ಗಳನ್ನೊಳಗೊಂಡ ಈ ಸಿನಿಮಾ ಮತ್ತೊಂದು ವಿಚಾರಕ್ಕೆ ಹೈಪ್ಪಡೆದಿದೆ.. ಅದೇ ಈ ಸಿನಿಮಾಗೆ ಮಣಿರತ್ನಂ ನಿರ್ದೇಶನ ಮಾಡ್ತಿರೋದು.. ಇದೇ ಈ ಸಿನಿಮಾದ ಬಿಗ್ ಪ್ಲಸ್ ಪಾಯಿಂಟ್.. ಸುಮಾರು 500 ಕೋಟಿ ರೂ ಬಜೆಟ್ ನಲ್ಲಿ ತಯಾರಾಗ್ತಿದೆ ಸಿನಿಮಾ..