Nabha Natesh : ಪಟ್ ಪಟ್ ಪಟಾಕಿ ಹುಡುಗಿಯ ಹಾಟ್ ಫೋಟೋ ಶೂಟ್..!!
ಶೃಂಗೇರಿ ಸುಂದರಿ.. ವಜ್ರಕಾಯದ ಪಟಾಕಿ ಪಾರ್ವತಿ ಖ್ಯಾತಿಯ ನಭಾ ಟಾಲಿವುಡ್ ನಲ್ಲಿ ಮಿಂಚು ಹರಿಸುತ್ತಿದ್ದಾರೆ. ಅಂದ್ಹಾಗೆ ಕನ್ನಡಲ್ಲಿ ಕೆರಿಯರ್ ಶುರು ಮಾಡದೇ ಹಿಂದಿ ತಮಿಳು ತೆಲುಗು, ಮಳಯಾಳಂ, ತಮಿಳಿನ ಇಂಡಸ್ಟ್ರಿಯಲ್ಲಿ ಸ್ಟಾರ್ ಗಳಾಗಿ ಮಿಂಚುತ್ತಿರುವವರು ಇದ್ದಾರೆ. ಈ ಸಾಲಿಗೆ, ಶಿಲ್ಪಾ ಶೆಟ್ಟಿ, ದೀಪಿಕಾ, ಅನುಷ್ಕಾ, ಪೂಜಾ ಹೆಗ್ಡೆ, ಐಶ್ವರ್ಯಾ ರೈ ಕೂಡ ಇದ್ದಾರೆ. ಇನ್ನೂ ಕನ್ನಡದಲ್ಲಿ ಯಶಸ್ಸು ಕಂಡ ಸ್ಯಾಂಡಲ್ ವುಡ್ ನಾಯಕಿಯರು ಬಳಿಕ ಪರಭಾಷೆಗಳಲ್ಲಿ ಖ್ಯಾತಿ ಗಳಿಸುತ್ತಿರೋದೆ ಹೆಚ್ಚು. ಅದ್ರಲ್ಲಿ ರಶ್ಮಿಕಾ ಮಂದಣ್ಣ ಇರಬಹುದು ಶ್ರದ್ಧಾ ಶ್ರೀನಾಥ್, ಆಶಾ ಭಟ್ ಹೀಗೆ ಅನೇಕ ನಟಿಯರು ಇದ್ದಾರೆ. ಈ ಲಿಸ್ಟ್ ಗೆ ನಭಾ ಸೇರಿದ್ದಾರೆ.
ಈ ಹಿಂದೆ 2018 ರಲ್ಲಿ ಬಿಡುಗಡೆಯಾದ ‘ನನ್ನು ದೋಚುಕುಂದುವಟೆ’ ಚಿತ್ರದಲ್ಲಿ ಸುಧೀರ್ ಬಾಬು ಜೊತೆ ನಟಿಸುವ ಮೂಲಕ ನಭಾ ಟಾಲಿವುಡ್ ಗೆ ಪಾದಾರ್ಪಣೆ ಮಾಡಿದ್ದರು. ಇನ್ನೂ ‘ಅಧುಗೊ’ ಹಾಗೂ 2019ರಲ್ಲಿ ‘ಇಸ್ಮಾರ್ಟ್ ಶಂಕರ್’ ನಲ್ಲಿ ಬಣ್ಣ ಹಚ್ಚಿದ್ದರು. ಹೀಗೆ ನಿಧಾನವಾಗಿ ತೆಲುಗು ಇಂಡಸ್ಟ್ರಿಯಲ್ಲಿ ನೆಲೆಯೂರುತ್ತಿರುವ ನಭಾ ರವಿತೇಜ ಜೊತೆ ‘ಡಿಸ್ಕೋ ರಾಜ’ ಚಿತ್ರದಲ್ಲಿಯೂ ನಟಿಸಿದರು.
ಅಂದ್ಹಾಗೆ ವಜ್ರಕಾಯದ ಮೂಲಕ ಶಿವರಾಜ್ ಕುಮಾರ್ ಗೆ ನಾಯಕಿಯಾಗಿ, ಬಾಯಿ ಬಡಕಿ , ಲೇಡಿ ಡಾನ್ ಆಗಿ ಡೇರಿಂಗ್ ಆಗಿ ಪಟಾಕಿಯಂತೆಯೇ ನಟಿಸಿ ಪಟಾಕಿ ಪಾರ್ವತಿಯಾಗಿಯೇ ಜನರನ್ನ ರಂಜಿಸಿದ ನಭಾ ವಜ್ರಕಾಯ ಆದ ನಂತರ ಕೆಲ ಕನ್ನಡ ಸಿನಿಮಾಗಳಲ್ಲಿ ನಟಿಸಿದರೂ. 2017 ರಲ್ಲಿ ಸುಮಂತ್ ಶೈಲೇಂದ್ರ ಜೊತೆ ‘ಲೀ’ ಚಿತ್ರದಲ್ಲಿ, ಅದೇ ವರ್ಷ ಮನುರಂಜನ್ ಅಭಿನಯದ ‘ಸಾಹೇಬ’ ಚಿತ್ರದಲ್ಲಿ ನಟಿಸಿದ್ದರು. ಇದೀಗ ಟಾಲಿವುಡ್ ನಲ್ಲೂ ಮಿಂಚುತ್ತಿದ್ದಾರೆ.
‘ಅಲ್ಲುಡು ಅದುರ್ಸ್’ ಎಂಬ ಚಿತ್ರದಲ್ಲಿಯೂ ನಟಿಸಿದ್ದಾರೆ.