Asharani : ಕಿರುತೆರೆ ‘ಕಸ್ತೂರಿ ನಿವಾಸ’ದ ಪಾರ್ವತಿ ಅವರ ಕೈನಲ್ಲಿ ಮೂಡಿದ ಅಪ್ಪು ಟ್ಯಾಟೂ..!!
ಖಾಸಗಿ ವಾಹಹಿನಿಯಲ್ಲಿ ಪ್ರಸಾರವಾಗ್ತಿರುವ ‘ಕಕಸ್ತೂರಿ ನಿವಾಸ’ ಧಾರಾವಾಹಿ ಸಾಕಷ್ಟು ಜನಪ್ರಿಯತೆಯನ್ನ ಗಳಿಸಿದೆ… ಈ ಧಾರಾವಾಹಿಯಲ್ಲಿ ಪಾರ್ವತಿ ಪಾತ್ರದಾರಿ ಎಲ್ಲರಿಗೂ ಇಷ್ಟವಾಗ್ತಿದ್ದಾರೆ.. ಇಂತಹ ಪಾತ್ರ ನಿರ್ವಹಿಸುತ್ತಿರುವ ಆಶಾರಾಣಿ ಅವರು ಎಷ್ಟೇ ಗಾಂಭೀರ್ಯವಾದ ಪಾತ್ರ ನಿರ್ವಸಿದರೂ ನಿಜ ಜೀವನದಲ್ಲಿ ತುಂಬಾ ಸಿಂಪಲ್..
ಆದ್ರೆ ಅವರ ಜೀವನದಲ್ಲಿ ಒಂದು ನೋವಿನ ಕಥೆಯಿದೆ.. ಅದು ಬಹುತೇಕರಿಗೆ ತಿಳಿದಿದೆ.. ಕಿರುತೆರೆಯಲ್ಲಿ ಸಕ್ರಿಯರಾಗಿರುವ ಆಶಾರಾಣಿ ಅವರು ಅವರ ಪಾತ್ರಗಳಿಗೆ ಅಚ್ಚುಕಟ್ಟಾಗಿ ಜೀವ ತುಂಬುತ್ತಾರೆ..
ಜೀವನದಲ್ಲೇ ಅಷ್ಟೇ ನೋವನ್ನ ಒಡಲಾಳದಲ್ಲಿ ಬಚ್ಚಿಟ್ಟುಕೊಂಡಿದ್ದಾರೆ.. ಪುತ್ರವಿಯೋಗದ ನೋವಿದೆ.. ಬಾಲನಟನಾಗಿ ಮಿಂಚಚಿದ್ದ ಬುಲ್ಲಿ ಯಾರಿಗೆ ತಾನೆ ಗೊತ್ತಿಲ್ಲ.. ಅವರು ಕೆಲ ವರ್ಷಗಳ ಹಿಂದೆ ಅತಿ ಕಿರಿಯ ವಯಸ್ಸಿಗೆ ಇಹಲೋಕ ತ್ಯಜಿಸಿದ್ರು.. ಗ್ಯಾಂಗ್ರೀನ್ ಗೆ ಒಳಗಾಗಿ ನಿಧನರಾದರು.. ಅವರು ಅಪ್ಪಟ ಅಪ್ಪು ಅಭಿಮಾನಿಯಾಗಿದ್ದರು.. ಇದೀಗ ಆಶಾರಾಣಿ ಅವರು ತಮ್ಮ ಕೈಯಲ್ಲಿ ಅಪ್ಪು ಟ್ಯಾಟೂ ಹಾಕಿಸಿಕೊಂಡಿದ್ದಾರೆ.