#Boycotttjersey ಟ್ರೆಂಡಿಂಗ್ : ಸುಶಾಂತ್ ಅಭಿಮಾನಿಗಳ ಆಕ್ರೋಶ
KGF 2 ಗೆ ಟಕ್ಕರ್ ಕೊಡಬಲ್ಲೇ ಅನ್ನೋ ಭ್ರಮೆಯಿಂದ ಹೊರಬಂದು ಬಿಡುಗೆಡೆಗೆ 2 ದಿನ ಬಾಕಿಯಿದ್ದಾಗಲೇ ಹಿಂದೆ ಸರಿದಿದ್ದ ಬಾಲಿವುಡ್ ನ ಶಾಹೀದ್ ಕಪೂರ್ ನಟನೆಯ ಜೆರ್ಸಿ ಸಿನಿಮಾ ಕಡೆಗೂ ರಿಲೀಸ್ ಆಗಿದೆ…
ಇಂದು ( ಏಪ್ರಿಲ್ 22 ) ರಿಲೀಸ್ ಆಗಿರುವ ಜೆರ್ಸಿ ಸಿನಿಮಾದ ಭವಿಷ್ಯ ಕಷ್ಟ ಅಂತ ಈಗಾಗಲೇ ಸಿನಿಮಾ ಪಂಡಿತರು ಭವಿಷ್ಯ ನುಡಿದಾಗಿದೆ.. ಯಾಕಂದ್ರೆ ರಿಲೀಸ್ ಆಗಿ ವಾರವೇ ಕಳೆದ್ರೂ KGF 2 ಅಬ್ಬರ ಕಡಿಮೆಯಾಗಿಲ್ಲ.. ರಾಕಿ ಭಾಯ್ ಎದುರು ಜೆರ್ಸಿ ಸರ್ವೈವ್ ಆಗೋದು ಕಷ್ಟ ಎಂದೇ ಸಿನಿ ಪಂಡಿತರು ಹೇಳಿದ್ದಾರೆ.. KGF 2 ಇನ್ನೂ ಒಂದೆರೆಡು ವಾರಗಳ ಕಾಲ ಭಾರತದಾದ್ಯಂತ ಇಷ್ಟೇ ಅಬ್ಬರದಲ್ಲೇ ಪ್ರದರ್ಶನ ಕಾಣಲಿದ್ದು , ಈ ಸಿನಿಮಾದ ಮುಂದೆ ಜೆರ್ಸಿ ನೆಲೆ ನಿಲ್ಲೋದಕ್ಕೆ ಸಾಧ್ಯವೆ ಇಲ್ಲ ಎನ್ನುತ್ತಿದ್ದಾರೆ.. ಆದ್ರೂ ಜೆರ್ಸಿ ಟೀಮ್ ಧೈರ್ಯ ಮಾಡಿ ಸಿನಿಮಾ ರಿಲೀಸ್ ಮಾಡಿದೆ..
ಆದ್ರೆ ಇದೆಲ್ಲದರ ನಡುವೆ ಜೆರ್ಸಿ ಸಿನಿಮಾಗೆ ನೆಟಟ್ಟಿಗರ ಹೊಸ ತಲೆ ನೋವು ಶುರುವಾಗಿದೆ.. #Boycotttjersey ಸೋಷಿಯಲ್ ಮೀಡಿಯಾದಲ್ಲಿ ಟ್ರೆಮಡ್ ಆಗ್ತಿದೆ.. ಆದ್ರೆ ಯಾಕೆ..??
ಬರಿ ಬಾಯ್ಕಾಟ್ ಜೆರ್ಸಿ ಅಷ್ಟೇ ಅಲ್ಲ #BoycottBollywood ಟ್ರೆಂಡಿಂಗ್ ಆಗ್ತಿದೆ. IIFA ಪ್ರಶಸ್ತಿ ಸಮಾರಂಭದಲ್ಲಿ ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಅವರನ್ನು ಅವಮಾನಿಸಿದವರಲ್ಲಿ ಶಾಹಿದ್ ಕಪೂರ್ ಒಬ್ಬರು ಎಂದು ಆರೋಪಿಸುತ್ತಾ ಇದ್ದಾರೆ ನೆಟ್ಟಿಗರು..
ಶಾಹಿದ್ ಕಪೂರ್ IIFA ಪ್ರಶಸ್ತಿಗಳಲ್ಲಿ ಸುಶಾಂತ್ ಸಿಂಗ್ ರಜಪೂತ್ ಅವರನ್ನು ಅವಮಾನಿಸಿದ್ದಾರೆ. ದಯವಿಟ್ಟು ನಮ್ಮ ಒಗ್ಗಟ್ಟು ಪ್ರದರ್ಶಿಸಿ ಅವರ ಸಿನಿಮಾವನ್ನು ಸೂಪರ್ ಫ್ಲಾಪ್ ಮಾಡಿ ಎಂದು ಕೆಲ ನೆಟ್ಟಿಗರು ಟ್ವೀಟ್ ಮಾಡಿದ್ರೆ ಇನ್ನೂ ಕೆಲವರು #BoycottBollywood I am sorry ಸುಶಾಂತ್ ಎಂದು ಹೇಳುತ್ತಿದ್ಧಾರೆ..
#Boycottjersey trending – here is reason why