Jercy Review : ಪ್ರತಿಭಾವಂತ ಕ್ರಿಕೆಟಿಗನ ಜೀವನದ ಏಳುಬೀಳಿನ ಕಥೆ
‘ಕಬೀರ್ ಸಿಂಗ್’ ಸಿನಿಮಾದ ನಂತರ ಸುಮಾರು 3 ವರ್ಷಷಗಳಾದ ಮೇಲೆ ಶಾಹಿದ್ ಕಪೂರ್ ನಟನೆಯ ಸಿನಿಮಾ ರಿಲೀಸ್ ಆಗಿದೆ.. ಅಂದ್ರೆ ಜೆರ್ಸಿ ಸಿನಿಮಾ ಬಿಡುಗಡೆಯಾಗಿದ್ದು ವಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್ ಪಡೆದುಕೊಳ್ತಿದೆ..
ಜರ್ಸಿಯಲ್ಲಿ ಶಾಹಿದ್ ಪ್ರತಿಭಾವಂತ ಆದರೆ ವಿಫಲ ಕ್ರಿಕೆಟಿಗನ ಪಾತ್ರದದಲ್ಲಿ ಕಾಣಿಸಿಕೊಂಡಿದ್ದಾರೆ.. ತಂದೆಯಾಗಿ ಮತ್ತು ತನ್ನ ಮದುವೆಯನ್ನು ಮುರಿದು ಬೀಳದಂತೆ ರಕ್ಷಿಸಲು ಶ್ರಮಿಸುವ ಪತಿಯಾಗಿ ಕಾಣಿಸಿಕೊಂಡಿದ್ದಾರೆ.. ಸಿನಿಮಾ ಉತ್ತಮವಾಗಿ ಶುರುವಾದ್ರೂ ಮಧ್ಯ ಮಧ್ಯ ಡಲ್ ಹೊಡೆಯುತ್ತೆ.. ಈ ಸಿನಿಮಾ ತೆಲುಗಿನ ರೀಮೇಕ್.. ತೆಲುಗಿನಲ್ಲಿ ನಾನಿ ನಟಿಸಿದ್ದ ಜೆರ್ಸಿ ಸಿನಿಮಾದ ರೀಮೇಕ್.. 2019 ರಲ್ಲಿ ಆ ಸಿನಿಮಾ ರಿಲೀಸ್ ಆಗಿ ಉತ್ತಮ ರೆಸ್ಪಾನ್ಸ್ ಪಡೆದುಕೊಂಡಿತ್ತು. ತೆಲುಗು ಸಿನಿಮಾ ನಿರ್ದೇಶಿಸಿದ್ದ ಗೌತಮ್ ಅವರೇ ಈ ಸಿನಿಮಾಗೂ ಆಕ್ಷನ್ ಕಟ್ ಹೇಳಿರುವುದು ವಿಶೇಷ..
ಅಸಾಧಾರಣ ಪ್ರತಿಭಾವಂತ ರಣಜಿ ಆಟಗಾರ ಅರ್ಜುನ್ ತಲ್ವಾರ್ (ಶಾಹಿದ್ ಕಪೂರ್) ಅವರ ಕಥೆಯನ್ನು ಜರ್ಸಿ ಸಿನಿಮಾದಲ್ಲಿ ಅನಾವರಣ ಮಾಡಲಾಗಿದೆ.. 26 ನೇ ವಯಸ್ಸಿನಲ್ಲಿ ಕ್ರಿಕೆಟ್ ತ್ಯಜಿಸಿ 10 ವರ್ಷಗಳ ನಂತರ ತಮ್ಮ ವೃತ್ತಿಜೀವನವನ್ನು ಮತ್ತೆ ಶುರು ಮಾಡಲು ಮರಳಿ ಮೈದಾನಕ್ಕೆ ಮರಳಲು ನಿರ್ಧರಿಸುತ್ತಾರೆ. ಈ ಪ್ರಕ್ರಿಯೆಯಲ್ಲಿ, ಅರ್ಜುನ್ ತನ್ನ ಮಗ ಕಿಟುವಿನ (ರೋನಿತ್ ಕಾಮ್ರಾ) ಜೆರ್ಸಿಯ ಆಸೆಯನ್ನು ಪೂರೈಸಲು ಬಯಸುತ್ತಾರೆ.. ಅವನ ತಂದೆ ಕ್ರಿಕೆಟ್ ಆಡುವುದನ್ನು ನೋಡುವ ಕನಸನ್ನು ಪೂರೈಸಲು ಬಯಸುತ್ತಾರೆ. ಈ ಪ್ರಯಾಣದ ಉದ್ದಕ್ಕೂ, ಅರ್ಜುನ್ ತನ್ನ ಹೆಂಡತಿ ವಿದ್ಯಾ ತಲ್ವಾರ್ (ಮೃಣಾಲ್ ಠಾಕೂರ್) ಜೊತೆಗೆ ಮಾಡಿಕೊಳ್ಳುವ ಗಲಾಟೆ , ಅವರ ನಡುವೆ ಆಗುವ ಮನಸ್ಥಾಪಗಳನ್ನ ತೋರಿಸುತ್ತಾ,, ಅದನ್ನ ಹೇಗೆ ಸರಿಪಡಿಸಿಕೊಳ್ತಾರೆರ ಎಂಬುದನ್ನ ತೋರಿಸಲಾಗಿದ್ದು , ಇದೊಂದು ಪಕ್ಕಾ ಕಂಟೆಂಟ್ ಬೇಸ್ಡ್ ಸಿನಿಮಾವಾಗಿದೆ..