Jersey : ಹಿಂದಿ ‘ಜೆರ್ಸಿ’ ಹೊಗಳಿದ ಟಾಲಿವುಡ್ ‘ಜೆರ್ಸಿ’ ಹೀರೋ ನಾನಿ
ಶಾಹಿದ್ ಕಪೂರ್ ಅವರ ಅಭಿನಯದ ‘ಜೆರ್ಸಿ’ ಸಿನಿಮಾಗೆ ಟಾಲಿವುಡ್ ನ ನ್ಯೂಚುರಲ್ ಸ್ಟಾರ್ ನಟ ನಾನಿ ಹೊಗಳಿದ್ದಾರೆ…. ಅಂದ್ಹಾಗೆ ಶಾಹಿದ್ ಅಭಿನಯದ ಜೆರ್ಸಿ ಸಸಿನಿಮಾ ತೆಲುಗಿನ ಜೆರ್ಸಿ ಸಿನಿಮಾದ್ದೇ ರೀಮೇಕ್.. ತೆಲುಗಿನಲ್ಲಿ ಜೆರ್ಸಿಯಲ್ಲಿ ನಾಯಕನಾಗಿ ನಾನಿ ಮಿಂಚಿದ್ದರು..
ನಿರ್ಮಾಪಕ ಗೌತಮ್ ತಿನ್ನನೌರಿ ಸಾರಥ್ಯದ ಶಾಹಿದ್ ಕಪೂರ್ ನಟನೆಯ “ಜೆರ್ಸಿ” ಹೃದಯ ಮುಟ್ಟುವ ಸುಂದರ ಕಥೆಯಾಗಿದೆ.. ಈ ಸಿನಿಮಾಗೆ ಪ್ರತಿಕ್ರಿಯೆ ನೀಡಿರೋ ನಾನಿ
“ಜೆರ್ಸಿ” ಹೃದಯ ಮುಟ್ಟುವ ಕಥೆ.. ಎಂದು ಮೆಚ್ಚಿಕೊಂಡಿದ್ದಾರೆ.. ಶಾಹಿದ್ ಹೊರತಾಗಿ ನಟ ಪಂಕಜ್ ಕಪೂರ್ ಮತ್ತು ಮೃಣಾಲ್ ಠಾಕೂರ್ ಕೂಡ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
“ಜೆರ್ಸಿ” ಸಿನಿಮಾವನ್ನು ಅಲ್ಲು ಅರವಿಂದ್ ಪ್ರಸ್ತುತಪಡಿಸುತ್ತಿದ್ದಾರೆ, ಅಮನ್ ಗಿಲ್, ದಿಲ್ ರಾಜು ಮತ್ತು ಎಸ್ ನಾಗ ವಂಶಿ ನಿರ್ಮಿಸಿದ್ದಾರೆ.