Keerthi Suresh : ಸ್ವೀಟ್ ನೇಚರ್ ಕೀರ್ತಿಯ ಬಗ್ಗೆ ಇಂಟ್ರೆಸ್ಟಿಂಗ್ ವಿಚಾರಗಳು..!!!
‘ಮಹಾನಟಿ’ ಖ್ಯಾತಿಯ ಕೀರ್ತಿ ಸುರೇಶ್ ಬಗ್ಗೆ ಪರಿಚಯದ ಅವಶ್ಯಕತೆ ಇಲ್ಲ.. ಕ್ಯೂಟ್ ಲುಕ್ಸ್ ,,,, ಸ್ವೀಟ್ ನೇಚರ್ …. ಫ್ಯಾನ್ಸ್ ಗಳ ಸ್ವೀಟ್ ಹಾರ್ಟ್ ಕೀರ್ತಿ…
ಮಾಲಿವುಡ್ , ಕಾಲಿವುಡ್ ಈಗ ಟಾಲಿವುಡ್ ನಲ್ಲೂ ಮಿಂಚುತ್ತಿರುವ ಕೀರ್ತಿ ಸಾಕಷ್ಟು ಸಿನಿಮಾಗಳಲ್ಲಿ ಮಾಡಿದ್ದಾರೆ.. ಪ್ರಸ್ತುತ ಅವರ ಅಭಿನಯದ ತೆಲುಗಿನ ಸೂಪರ್ ಸ್ಟಾರ್ ಮಹೇಶ್ ಬಾಬು ಅಭಿನಯದ ಸರ್ಕಾರಿ ವಾರು ಪಾಟ ಸಿನಿಮಾದಲ್ಲಿ ಕಾಣಿಸಿಕೊಳ್ತಿದ್ದಾರೆ.. ಈಗಾಗಲೇ ಈ ಸಿನಿಮಾದ ಕಲಾವತಿ ಹಾಡಿನ ಮೂಲಕ ಮಿಂಚುತ್ತಿದ್ದಾರೆ..
ಪಾತ್ರಗಳ ಆಯ್ಕೆ ವಿಚಾರದಲ್ಲಿ ಕೀರ್ತಿ ತುಂಬಾ ಚೂಸಿ.. ಡೀಸೆಮಟ್ ಪಾತ್ರಗಳು ಡೀಸೆಂಟ್ ಡ್ರೆಸ್ಸಿಂಗ್ ಸೆನ್ಸ್ ಮೂಲಕವೇ ಅಭಿಮಾನಿಗಳ ಹಾರ್ಟ್ ಬೀಟ್ ಆಗಿದ್ದಾರೆ.. ಅಕ್ಟೋಬರ್ 17 ರಂದು ಮಲಯಾಳಂ ನಿರ್ಮಾಪಕ ಸುರೇಶ್ ಕುಮಾರ್ ಮತ್ತು ತಮಿಳು ನಟಿ ಮೇನಕಾ ದಂಪತಿಯ ಪುತ್ರಿ ಕೀರ್ತಿ ಹಾಫ್ ತಮಿಳು ಮತ್ತು ಹಾಫ್ ಮಲಯಾಳಿಯಾಗಿದ್ದಾರೆ.
ಕೀರ್ತಿ ತನ್ನ ಹದಿಹರೆಯದ ವಯಸ್ಸಿನಲ್ಲಿ ವೃತ್ತಿ ಜೀವನ ಆರಂಭಿಸಿದರು.. ಮಾಲಿವುಡ್‌ನಲ್ಲಿ ಬಾಲ ನಟಿಯಾಗಿ “ಪೈಲಟ್” ಮತ್ತು “ಅಚನೇಯನೆನಕ್ಕಿಷ್ಟಂ” ಚಿತ್ರಗಳಲ್ಲಿ ಕಾಣಿಸಿಕೊಂಡರು. ಆಕೆಯ ತಂದೆ ನಿರ್ದೇಶಿಸಿದ ‘ಕುಬೇರನ್’ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ಕೀರ್ತಿಯ ಸಹೋದರಿ ರೇವತಿ ಈ ಹಿಂದೆ ಶಾರುಖ್ ಖಾನ್ ಅವರ ‘ರೆಡ್ ಚಿಲ್ಲಿಸ್’ ನಿರ್ಮಾಣ ಕಂಪನಿಯಲ್ಲಿ VFX ಸ್ಪೆಷಲಿಸ್ಟ್ ಆಗಿ ಕೆಲಸ ಮಾಡಿದ್ದಾರೆ.
ಪೂರ್ಣ ನಟಿಯಾಗಿ ಕೀರ್ತಿ 2013 ರಲ್ಲಿ ಬಿಡುಗಡೆಯಾದ ಪ್ರಿಯದರ್ಶನ್ ಅವರ ಹಾರರ್-ಕಾಮಿಡಿ ಸಿನಿಮಾ ‘ಗೀತಾಂಜಲಿ’ ಮೂಲಕ ಕಾಣಿಸಿಕೊಂಡರು. ಇದರಲ್ಲಿ ಅವರು ದ್ವಿಪಾತ್ರವನ್ನು ಮಾಡಿದ್ದಾರೆ.
ಅವರ ಕನಸಿನ ಪಾತ್ರಗಳೆಂದರೆ ‘ಮರಿಯನ್’ ಚಿತ್ರದಲ್ಲಿ ಪಾರ್ವತಿ ಮೆನನ್ ಪಾತ್ರ ಮತ್ತು ‘ಕ್ವೀನ್’ ನಲ್ಲಿ ಕಂಗನಾ ರಣಾವತ್ ಪಾತ್ರ.
ಆಕೆಯ ಮೊದಲ ತೆಲುಗು ಚಿತ್ರ ‘ನೇನು ಸೈಲಜಾ’
ಪ್ರೌಢಶಾಲೆಯಲ್ಲಿ ಕೀರ್ತಿ ಸ್ವಿಮ್ಮಿಂಗ್ ಚಾಂಪಿಯನ್ ಆಗಿದ್ದರು.
ಅವರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನ ಪಡೆದುಕೊಂಡಿದ್ದಾರೆ..