KGF 2 ಸಿನಿಮಾವನ್ನು ಕೊಂಡಾಡಿದ ಅಲ್ಲು ಅರ್ಜುನ್..!!
ರಾಕಿಂಗ್ ಸ್ಟಾರ್ ಯಶ್ ಅಭಿನಯದ KGF 2 ಹಿಂದಿ ಆವೃತ್ತಿಯು ಒಟ್ಟಾರೆ 8 ದಿನಗಳಲ್ಲಿ 300 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ.. ಭಾರತೀಯ ಬಾಕ್ಸ್ ಆಫೀಸ್ ನಲ್ಲಿ 800 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ.. ಈ ಮೂಲಕ ಅಮಿರ್ ಖಾನ್ ರ ದಂಗಲ್ ಸಿನಿಮಾದ ಸರ್ವಾಕಾಲೀನ ದಾಖಲೆ ಮುರಿಯಲು ಸಿದ್ಧವಾಗಿದೆ ಸಿನಿಮಾ…
8 ದಿನಗಳಲ್ಲಿ 800 ಕೋಟಿ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿದೆ.. KGF 2 ಕನ್ನಡ ಸಿನಿಮಾರಂಗದ ಗತಿ ಬದಲಾಯಿಸಿದೆ… ಎಲ್ಲರೂ ಕನ್ನಡ ಸಿನಿಮಾರಂಗದತ್ತ ತಿರುಗಿ ನೋಡುವಂತೆ ಮಾಡಿದೆ..
ಆದ್ರೆ ಯಾಕೆ ನಮ್ಮ ಕನ್ನಡದ ಸ್ಟಾರ್ ಗಳು ಮಾತ್ರ ಸಿನಿಮಾ ಬಗ್ಗೆ ಮಾತನಾಡ್ತಿಲ್ಲ.. ಮೌನವಾಗಿದ್ದಾರೆ… ಪ್ರಶಂಸೆ ವ್ಯಕ್ತಪಡಿಸುತ್ತಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.. ಆದ್ರೆ ಇದರ ನಡುವೆಯೇ ನಮ್ಮ ರಿಯಲ್ ಸ್ಟಾರ್ ಉಪೇಂದ್ರ ಅವರು ಸಿನಿಮಾವನ್ನ ಮಾಸ್ಟರ್ ಪೀಸ್ ಎಂದು ಕೊಂಡಾಡಿದ್ದರು..
ಇದೀಗ ತೆಲುಗಿನ ಸೂಪರ್ ಸ್ಟಾರ್ , ಐಕಾನ್ ಸ್ಟಾರ್ ಅಲ್ಲು ಅರ್ಜುನ್ KGF 2 ನೋಡಿ ಕೊಂಡಾಡಿದ್ದಾರೆ.. ಇಡೀ ಟೀಮ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.. ಯಶ್ ನಟನೆಗೆ ಫಿದಾ ಆಗಿದ್ಧಾರೆ..
ಹೌದು KGF ಚಾಪ್ಟರ್ 1 ಕ್ಕೆ ಬಾಕ್ಸ್ ಆಫೀಸ್ ಕಲೆಕ್ಷನ್ ವಿಚಾರದಲ್ಲಿ ಟಕ್ಕರ್ ಕೊಟ್ಟಿದ್ದ “ಪುಷ್ಪರಾಜ” ಈಗ KGF 2 ಬಗ್ಗೆ ಹೊಗಳಿ ಅಭಿಮಾನಿಗಳ ಕ್ರೇಜ್ ನ ಫೈಯರ್ ಹೆಚ್ಚಿಸಿದ್ದಾರೆ..
ಸಿನಿಮಾ ಬಗ್ಗೆ ಅಲ್ಲು ಅರ್ಜುನ್ ಹೊಗಳಿರುವುದಕ್ಕೆ ಯಶ್ ಅಭಿಮಾನಿಗಳು , ಜೊತೆಗೆ ಅಲ್ಲು ಅಭಿಮಾನಿಗಳು ಸಹ ಫುಲ್ ಖುಷ್ ಆಗಿದ್ದಾರೆ..
“ ಕೆಜಿಎಫ್ 2 ತಂಡಕ್ಕೆ ಶುಭಾಶಯಗಳು. ಯಶ್ ನಟನೆ, ಕಾರ್ಯಕ್ಷಮತೆ ಅದ್ಭುತವಾಗಿದೆ. ಸಂಜಯ್ ದತ್, ರವೀನಾ ಟಂಡನ್, ಶ್ರೀನಿಧಿ ಶೆಟ್ಟಿ ಸೇರಿದಂತೆ ಎಲ್ಲರ ಅಭಿನಯ ಸೆಳೆಯುತ್ತಿದೆ. ರವಿ ಬಸ್ರೂರು ಹಿನ್ನೆಲೆ ಸಂಗೀತ ಅದ್ಭುತವಾಗಿದೆ. ಭುವನ್ ಗೌಡ ದೃಶ್ಯ ವೈಭವ ಸಖತ್ತಾಗಿದೆ. ಎಲ್ಲಾ ತಂತ್ರಜ್ಞರನ್ನು ನಾನು ಗೌರವಿಸುತ್ತೇನೆ” ಎಂದು ಟ್ವೀಟ್ ಮಾಡಿ ದೊಡ್ತನ ಪ್ರದರ್ಶಿಸಿದ್ದಾರೆ..
ಅಷ್ಟೇ ಅಲ್ದೇ ಪ್ರಶಾಂತ್ ನೀಲ್ ಅವರ ಅಧ್ಬುತ ಸ್ಕ್ರೀನ್ ಪ್ಲೇ ಗೆ ಮರುಳಾಗಿರುವ ಸ್ಟೈಲೀಶ್ ಸ್ಟಾರ್ “ ಪ್ರಶಾಂತ್ ನೀಲ್ ಅದ್ಭುತವಾಗಿ ನಿರ್ದೇಶನ ಮಾಡಿದ್ದಾರೆ. ಅವರ ಆಲೋಚನೆ ಹಾಗೂ ನಂಬಿಕೆಯನ್ನು ನಾನು ಗೌರವಿಸುತ್ತೇನೆ. ಭಾರತೀಯ ಚಿತ್ರರಂಗವನ್ನು ಮತ್ತೊಂದು ಎತ್ತರಕ್ಕೆ ತೆಗೆದುಕೊಂಡು ಹೋಗಿದ್ದಕ್ಕೆ ಎಲ್ಲರಿಗೂ ಧನ್ಯವಾದಗಳು” ಎಂದಿದ್ದಾರೆ..
ಸದ್ಯ ಅಲ್ಲು ಅರ್ಜುನ್ ಪುಷ್ಪ 2 ನಲ್ಲಿ ಬ್ಯುಸಿಯಾಗಿದ್ದಾರೆ.. ಹಿಂದಿ ಬೆಲ್ಟ್ ನಲ್ಲಿ ಅಸಾದಾರಣ ಸಾಧನೆ ಮಾಡಿರುವ ಪುಷ್ಪ ಸಿನಿಮಾದ ಚಾಪ್ಟರ್ 2 ಗೂ ಸಹ , KGF 2 ಗೂ ಇರುವ ಕ್ರೇಜ್ ಇದೆ.. ಅದೇ ರೇಂಜ್ ಇದೆ.. ಕೆಲ ಸಿನಿಮಾ ಪಂಡಿತರು ಪುಷ್ಪ 2 ಗೆ ಮಾತ್ರವೇ ಸದ್ಯಕ್ಕಿರುವ KGF 2 ರೆಕಾರ್ಡ್ ಗಳನ್ನ ಮುರಿಯೋಕೆ ಸಾಧ್ಯ ಎಂಬ ಮಾತುಗಳು ಕೇಳಿ ಬರುತ್ತಿವೆ..
Jersey : ಹಿಂದಿ ‘ಜೆರ್ಸಿ’ ಹೊಗಳಿದ ಟಾಲಿವುಡ್ ‘ಜೆರ್ಸಿ’ ಹೀರೋ ನಾನಿ
Urfi javed : ಇದೊಂದೇ ಬಾಕಿ ಇದ್ದದ್ದು ಎಂದ್ರು ಉರ್ಫಿ ಡ್ರೆಸ್ ನೋಡಿ ನೆಟ್ಟಿಗರು
KGF 2 : allu arjun reacts to film