KGF 2 ಕ್ರೇಜ್ ಮುಗಿದಿಲ್ಲ.. ಆದ್ರೂ ಜೆರ್ಸಿ ರಿಲೀಸ್ ಆಗಿದೆ… ಸರ್ವೈವ್ ಆಗುತ್ತಾ..??
KGF 2 ಗೆ ಟಕ್ಕರ್ ಕೊಡಬಲ್ಲೇ ಅನ್ನೋ ಭ್ರಮೆಯಿಂದ ಹೊರಬಂದು ಬಿಡುಗೆಡೆಗೆ 2 ದಿನ ಬಾಕಿಯಿದ್ದಾಗಲೇ ಹಿಂದೆ ಸರಿದಿದ್ದ ಬಾಲಿವುಡ್ ನ ಶಾಹೀದ್ ಕಪೂರ್ ನಟನೆಯ ಜೆರ್ಸಿ ಸಿನಿಮಾ ಕಡೆಗೂ ರಿಲೀಸ್ ಆಗಿದೆ…
ಇಂದು ( ಏಪ್ರಿಲ್ 22 ) ರಿಲೀಸ್ ಆಗಿರುವ ಜೆರ್ಸಿ ಸಿನಿಮಾದ ಭವಿಷ್ಯ ಕಷ್ಟ ಅಂತ ಈಗಾಗಲೇ ಸಿನಿಮಾ ಪಂಡಿತರು ಭವಿಷ್ಯ ನುಡಿದಾಗಿದೆ.. ಯಾಕಂದ್ರೆ ರಿಲೀಸ್ ಆಗಿ ವಾರವೇ ಕಳೆದ್ರೂ KGF 2 ಅಬ್ಬರ ಕಡಿಮೆಯಾಗಿಲ್ಲ.. ರಾಕಿ ಭಾಯ್ ಎದುರು ಜೆರ್ಸಿ ಸರ್ವೈವ್ ಆಗೋದು ಕಷ್ಟ ಎಂದೇ ಸಿನಿ ಪಂಡಿತರು ಹೇಳಿದ್ದಾರೆ.. KGF 2 ಇನ್ನೂ ಒಂದೆರೆಡು ವಾರಗಳ ಕಾಲ ಭಾರತದಾದ್ಯಂತ ಇಷ್ಟೇ ಅಬ್ಬರದಲ್ಲೇ ಪ್ರದರ್ಶನ ಕಾಣಲಿದ್ದು , ಈ ಸಿನಿಮಾದ ಮುಂದೆ ಜೆರ್ಸಿ ನೆಲೆ ನಿಲ್ಲೋದಕ್ಕೆ ಸಾಧ್ಯವೆ ಇಲ್ಲ ಎನ್ನುತ್ತಿದ್ದಾರೆ.. ಆದ್ರೂ ಜೆರ್ಸಿ ಟೀಮ್ ಧೈರ್ಯ ಮಾಡಿ ಸಿನಿಮಾ ರಿಲೀಸ್ ಮಾಡಿದೆ..
ತೆಲುಗಿನ ಜೆರ್ಸಿ ಸಿನಿಮಾದ ರಿಮೇಕ್ ಸಿನಿಮಾ ಈ ಜೆರ್ಸಿ.. ರಾಷ್ಟ್ರೀಯ ಪ್ರಶಸ್ತಿ ವಿಜೇತ ತೆಲುಗು ಚಲನಚಿತ್ರದ ರಿಮೇಕ್ ಆಗಿದೆ. ಇದನ್ನು ಗೌತಮ್ ತಿನ್ನನೂರಿ ನಿರ್ದೇಶಿಸಿದ್ದಾರೆ, ಅವರು 2019 ರಲ್ಲಿ ನಾನಿ ಅಭಿನಯದ ಜೆರ್ಸಿ ಚಿತ್ರವನ್ನು ನಿರ್ದೇಶಿಸಿದ್ದರು.
ಟ್ರೇಡ್ ವಿಶ್ಲೇಷಕರ ಪ್ರಕಾರ, ಯಶ್ ಅವರ ಕೆಜಿಎಫ್ ಚಾಪ್ಟರ್ 2 ನ ಬೇಡಿಕೆ , ಕ್ರೇಜ್ ನ ನೋಡಿದ್ರೆ ಜರ್ಸಿ ಉತ್ತಮ ಓಪನಿಂಗ್ ಪಡೆಯೋದರಲ್ಲಿ ಬಹುತೇಕ ಎಡವಲಿದೆ ಎನ್ನಲಾಗ್ತಿದೆ..
ಶಾಹಿದ್ ಕಪೂರ್ ಮೃಣಾಲ್ ಠಾಕೂರ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕಮೊಂಡಿರುವ ತೆಲುಗಿನ ಜೆರ್ಸಿ ಸಿನಿಮಾದಸದ ರೀಮೇಕ್ ಆಗಿರುವ ಈ ಸಿನಿಮಾವಗೆ ಪ್ರೇಕ್ಷಕರು ಯಾವ ರೀತಿ ಪ್ರತಿಕ್ರಿಯಿಸುತ್ತಾರೆ.. ಯಾವ ರೀತಿ ರೆಸ್ಪಾನ್ಸ್ ಸಿಗಲಿದೆ ಎನ್ನೋದನ್ನ ಕಾದುನೋಡ್ಬೇಕಿದೆ..