KGF 2 : ಗಾಡ್ ಫಾದರ್ ಇಲ್ಲದೇ ಇಂಡಸ್ಟ್ರಿಗೆ ಬಂದ ಯಶ್ ಇಂದು ಭಾರತದ ಬಿಗ್ ಸ್ಟಾರ್..!!
ಎಲ್ಲದಕ್ಕೂ ಸಮಯ ಬರಬೇಕು… ಆ ಸಮಯ ಬರೋವರೆಗೂ ಕಾಯುವ ತಾಳ್ಮೆ ಇರಬೇಕು.. ಜೊತೆಗೆ ಕನಸು ಕಾಣೋದಷ್ಟೇ ಅಲ್ಲ ನನಸಾಗಿಸಿಕೊಳ್ಳುವ ಛಲದ ಜೊತೆಗೆ ಪರಿಶ್ರಮ ಬೇಕು…
ಇದೆಲ್ಲವೂ ಯಶ್ ಅವರ ಬಳಿಯಿತ್ತು… ಹೀಗಾಗಿಯೇ ಇಂದು ಅವರು ಭಾರತದ ಬಿಗ್ ಸ್ಟಾರ್ ಆದ್ರು.. ಇಂಡಿಯನ್ ಬಾಕ್ಸ್ ಆಫೀಸ್ ಗೆ ಕಿಂಗ್ ಆದ್ರು..
ಗಾಡ್ ಪಾದರ್ ಇಲ್ದೇ ,,, ಯಾವುದೇ ಸ್ಟಾರ್ ಡಮ್ ಸಪೋರ್ಟ್ ಇಲ್ದೇ ಇಂಡಸ್ಟ್ರಿಗೆ ಬಂದವರು ಯಶ್… ನವೀನನಿಂದ ಯಶ್ ಆಗಿ ಬದಲಾಗಿ ಯಶಸ್ಸಿನ ಹಾದಿಯಲ್ಲಿ ಏಳು ಬೀಳುಗಳನ್ನೂ ಕಂಡು ‘ಮೊಗ್ಗಿನ ಮನಸಸ್ಸಿ’ನಲ್ಲಿ ಮಿಂಚಿ ‘ರಾಜಧಾನಿ’ಯಲ್ಲಿ ನೆಲೆಯೂರಲು ಸಾಕಷ್ಟು ಪರಿಶ್ರಮ ವಹಿಸಿ ‘ರಾಜಾಹುಲಿ’ಯಾಗಿ ಅಬ್ಬರಿಸಿ , ‘ಕಿರಾತಕ’ನಾಗಿ ಫೇಮಸ್ ಆಗಿ , ಅಭಿಮಾನಿಗಳ ಪಾಲಿನ ‘ಅಣ್ತಮ್ಮ’ನಾಗಿ , ‘ಮಾಸ್ಟರ್ ಪೀಸ್’ ಎಂದು ತೋರಿಸಿಕೊಟ್ಟ ‘ಮಿ.ರಾಮಾಚಾರಿ’ ಇಂದು ಇಡೀ ದೇಶದ ಅಭಿಮಾನಿಗಳ ರಾಕಿ ಬಾಯ್ ಆಗಿ ಇಂಡಿಯನ್ ಬಾಕ್ಸ್ ಆಫೀಸ್ ಗೆ ಬಾಸ್ ಆಗಿದ್ದಾರೆ..
ಸಾಧಿಸುವ ಛಲ , ಕನಸಿನ ಬೆನ್ನಟ್ಟುವ ಹಠದ ಜೊತೆಗೆ ಗೆಲ್ಲುವ ಆತ್ಮವಿಶ್ವಾವಿರಬೇಕು , ಇವೆಲ್ಲವೂ ಒಟ್ಟಾದ್ರೆ ಗೆಲುವು ನಮ್ಮದೇ ಅನ್ನೋದನ್ನ ತೋರಿಸಿಕೊಟ್ಟ ಯಶ್ ಯುವಕರಿಗೆ ಮಾದರಿ…
ಅಂದ್ಹಾಗೆ KGF 2 ಸಕ್ಸಸ್ ನಲ್ಲಿರುವ ಯಶ್ ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳಿಗೊಂದು ಮನಮುಟ್ಟುವ ಸ್ಪೂರ್ತಿದಾಯಕ ಕಥೆ ಹೇಳಿದ್ದಾರೆ.. ಬರ ಪೀಡಿತ ಗ್ರಾಮದಲ್ಲಿ ಸದಾ ಛತ್ರಿ ಹಿಡಿದು ಓಡಾಡುವ ಹುಡುಗನೊಬ್ಬನ ಕಥೆಯನ್ನು ವಿಡಿಯೋದಲ್ಲಿ ಹೇಳಿದ್ದಾನೆ.
“ಜನರು ಇದನ್ನು ಮೂರ್ಖತನ ಎಂದು ಕರೆದರು ಮತ್ತು ಕೆಲವರು ಅದನ್ನು ಅತಿಯಾದ ಆತ್ಮವಿಶ್ವಾಸ ಎಂದೂ ಕರೆಯುತ್ತಾರೆ. ಆದ್ರೆ ಅದು ನಂಬಿಕೆಯಾಗಿತ್ತು. ನನ್ನ ಮೇಲೆ ತುಂಬಾ ಪ್ರೀತಿ ತೋರಿಸುತ್ತಾ ನನ್ನ ಆಶೀರ್ವದಿಸುತ್ತಿರುವ ಜನರಿಗೆ ನಾನು ಹೃದಯದಿಂದ ನಿಮಗೆ ಧನ್ಯವಾದಗಳನ್ನ ಹೇಳಲು ಬಯಸುತ್ತೇನೆ. ನನ್ನ ಸಂಪೂರ್ಣ ಕೆಜಿಎಫ್ ತಂಡದ ಪರವಾಗಿ, ಧನ್ಯವಾದಗಳು.. ನಿಮಗೆಲ್ಲರಿಗೂ ಉತ್ತಮವಾದ ಸಿನಿಮೀಯ ಅನುಭವವನ್ನು ನೀಡಲು ನಾವು ಬಯಸಿದ್ದೆವು.. ನೀವು ಸಿನಿಮಾವನ್ನ ಆನಂದಿಸುತ್ತಿರುವಿರಿ , ಮುಂದೆಯೂ ಇಷ್ಟಪಡುತ್ತೀರಿ ಎಂದು ನಾನು ಭಾವಿಸುತ್ತೇನೆ” ಎಂದಿದ್ಧಾರೆ..
ಯಶ್ ತುಂಬಾ ವಿನಮ್ರ ಹಿನ್ನೆಲೆಯಿಂದ ಬಂದವರು. ಅವರು ತಮ್ಮ ಸಂದರ್ಶನಗಳಲ್ಲಿ ಕೆಳ ಮಧ್ಯಮ ವರ್ಗದ ಕುಟುಂಬದಲ್ಲಿ ಬೆಳೆದವರು ಎಂದು ಬಹಿರಂಗಪಡಿಸುತ್ತಾ ಇರುತ್ತಾರೆ. ಅವರ ತಂದೆ ಬಸ್ ಚಾಲಕರಾಗಿದ್ದರು.. ಚಿತ್ರರಂಗದಲ್ಲಿ ಗಾಡ್ ಫಾದರ್ ಇಲ್ಲದೇ ಬಂದವರು. ದ್ವಿತೀಯ PUC ಮುಗಿಸಿದ ನಂತರ, ಯಶ್ ತನ್ನ ತಂದೆತಾಯಿ ಸಲಹೆಗೆ ವಿರುದ್ಧವಾಗಿ ನಟನೆಯ ಕಡೆಗಿನ ತಮ್ಮ ಆಸಕ್ತಿಯನ್ನ ಬೆನ್ನಟ್ಟಿದರು.
ಕೆಜಿಎಫ್ 2 ವಿಶ್ವಾದ್ಯಂತ 8 ದಿನಗಳಲ್ಲಿ 800 ಕೋಟಿಗೂ ಅಧಿಕ ಬಾಕ್ಸ್ ಆಫೀಸ್ ಕೆಲಕ್ಷನ್ ಮಾಡಿದೆ.. ಇದು ಈಗಾಗಲೇ ಜಾಗತಿಕವಾಗಿ ಅತಿ ಹೆಚ್ಚು ಗಳಿಕೆ ಮಾಡಿದ ಭಾರತೀಯ ಸಿನಿಮಾಗಳ ಅಗ್ರಸ್ಥಾನ ತಲುಪಿದೆ..