Kollywood : ‘ದಾದಾ’ ಗಾಗಿ ಒಂದಾದ ಕವಿನ್ – ಅಪರ್ಣಾ ದಾಸ್
ಕವಿನ್ ಮತ್ತು Beast ನಟಿ ಅಪರ್ಣಾ ದಾಸ್ ಅವರು ಹೊಸ ನಿರ್ದೇಶಕ ಗಣೇಶ್ ಕೆ ಬಾಬು ಅವರ ಚೊಚ್ಚಲ ನಿರ್ದೇಶನದ ರೊಮ್ಯಾಂಟಿಕ್ ಸಿನಿಮಾದಲ್ಲಿ ಒಟ್ಟಾಗಿ ಸ್ಕ್ರೀನ್ ಶೇರ್ ಮಾಡಲು ಸಜ್ಜಾಗ್ತಿದ್ದಾರೆ..
ಸಿನಿಮಾದ ನಿರ್ಮಾಪಕರು ಚಿತ್ರದ ಫಸ್ಟ್ ಲುಕ್ ಅನ್ನು ಬಹಿರಂಗಪಡಿಸಿದ್ದಾರೆ.. ಜೊತೆಗೆ ಟೈಟಲ್ ಅನೌನ್ಸ್ ಮಾಡಿದ್ದು ಸಿನಿಮಾಗೆ ದಾದಾ ಎಂದು ಹೆಸರಿಟ್ಟಿದ್ದಾರೆ..
ದಾದಾ… ಈ ಪದವನ್ನ ಪ್ರತಿಯೊಬ್ಬರೂ ಬಳಸುತ್ತಾರೆ ಅಥವಾ ಅವರ ಜೀವಿತಾವಧಿಯಲ್ಲಿ ಒಮ್ಮೆಯಾದರೂ ಅದನ್ನು ಬಳಸುತ್ತಾರೆ. ಅಲ್ಲದೆ, ಶೀರ್ಷಿಕೆಯು ಸ್ಕ್ರಿಪ್ಟ್‌ಗೆ ಸಾಕಷ್ಟು ಮಹತ್ವ ಮತ್ತು ಪ್ರಸ್ತುತತೆಯನ್ನು ಹೊಂದಿದೆ ಎಂದು ನಿರ್ದೇಶಕರು ಹೇಳಿದ್ದಾರೆ..
ಚಿತ್ರವು ಮಾರ್ಚ್‌ನಲ್ಲಿ ಸೆಟ್ಟೇರಿದ್ದು ಎರಡನೇ ಶೆಡ್ಯೂಲ್ ಶೂಟಿಂಗ್ ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಇಡೀ ಸಿನಿಮಾವನ್ನು ಚೆನ್ನೈ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿತ್ರೀಕರಣ ಮಾಡಲಾಗುತ್ತದೆ ಎಂದು ಸಿನಿಮಾತಂಡ ಬಹಿರಂಗಪಡಿಸಿದೆ..
ಈ ಚಿತ್ರ ಇಂದಿನ ಪೀಳಿಗೆಗೆ ತಕ್ಕನಾಗಿದೆ.. ಇಂದಿನ ಯುವಕರು ಅಪ್ ಡೇಟ್ ಆಗಿದ್ದಾರೆ.. ಹಾಗೆ ಸಂಬಂಧಗಳ ಬಗ್ಗೆ ವಿಭಿನ್ನ ಮನೋಭಾವವನ್ನು ಹೊಂದಿದ್ದಾರೆ.
ನಾವು ಡೇಟಿಂಗ್ ಮಾಡುವ ಮೊದಲು, ನಮ್ಮ ಕ್ರಶ್‌ನೊಂದಿಗೆ ಮಾತನಾಡಲು ಕನಿಷ್ಠ ಒಂದು ವರ್ಷ ತೆಗೆದುಕೊಳ್ಳುತ್ತಿದ್ದೆವು.. ಆದರೆ ಈ ಪೀಳಿಗೆಯು ಸಂಬಂಧಗಳ ವಿಷಯಕ್ಕೆ ಬಂದಾಗ ಸಾಕಷ್ಟು ಧೈರ್ಯಶಾಲಿ ಮತ್ತು ಫಾಸ್ಟ್ ಇದ್ದಾರೆ.. ಸಂಬಂಧಗಳಷ್ಟೇ ಅಲ್ಲ, ಅವರ ಬದುಕಿನ ದೃಷ್ಟಿಕೋನವೂ ನಮಗಿಂತ ಭಿನ್ನವಾಗಿರುತ್ತದೆ. ಇದು ನನಗೆ ಯಾವಾಗಲೂ ಕುತೂಹಲ ಮೂಡಿಸುತ್ತದೆ ಮತ್ತು ಅವರ ಜೀವನಶೈಲಿಯನ್ನು ಪ್ರತಿಬಿಂಬಿಸುವ ಸಿನಿಮಾವನ್ನ ಮಾಡಲು ನಾನು ಬಯಸುತ್ತೇನೆ ಎಂದು ಅವರು ವಿವರಿಸುತ್ತಾರೆ.