Voot Select ನಲ್ಲಿ ‘ ರಾಮನ ಸವಾರಿ’ ಆರಂಭ
ಸಾಂಕ್ರಾಮಿಕದ ನಂತರ OTT ಹೆಚ್ಚು ಪ್ರಾಮುಖ್ಯತೆ ಪಡೆದುಕೊಂಡಿದೆ.. ಸಿನಿಮಾಗಳು ಹೆಚ್ಚಾಗಿ ಒಟಿಟಿಯಲ್ಲಿ ರಿಲೀಸ್ ಆಗ್ತಿವೆ.. ಅನೇಕ ಸಿನಿಮಾಗಳು ನೇರವಾಗಿಯೇ ಒಟಿಟಿಯಲ್ಲೇ ರಿಲೀಸ್ ಆಗ್ತಿವೆ.. ಹೊಸ ಸಿನಿಮಾಗಳಿಗೆ ಒಟಿಟಿ ಫ್ಲಾಟ್ ಫಾರ್ಮ್ ಫೇವರೇಟ್ ಆಗಿದೆ.. ಜನ ಹೆಚ್ಚೆಚ್ಚು ಒಟಿಟಿಯಲ್ಲಿ ಹೊಸ ಹೊಸ ಸಿನಿಮಾಗಳನ್ನ ವೀಕ್ಷಿಸುತ್ತಾರೆ..
ಇದೀಗ ‘ರಾಮನ ಸವಾರಿ’ VOOT SELECT ನಲ್ಲಿ ಸ್ಟ್ರೀಮ್ ಆಗ್ತಿದೆ. ಹಾಗಂತ ಈ ಸಿನಿಮಾ ನೇರವಾಗಿ ಒಟಿಟಿಯಲ್ಲಿ ರಿಲೀಸ್ ಆಗಿಲ್ಲ.. 2 ವರ್ಷಗಳ ಹಿಂದೆ ಬಿಡುಗಡೆಯಾಗಿತ್ತು ಈ ಸಿನಿಮಾ. ಇದೀಗ ವೂಟ್ ನಲ್ಲಿ ಪ್ರಸಾರವಾಗ್ತಿದೆ..
ಕೆ. ಶಿವರುದ್ರಯ್ಯ ಅವರು ನಿರ್ದೇಶಿಸಿದ್ದ ಈ ಸಿನಿಮಾದಲ್ಲಿ ರಾಜೇಶ್ ನಟರಂಗ, ಸೋನು ಗೌಡ, ಸುಧಾ ಬೆಳವಾಡಿ, ಭಾರ್ಗವಿ ನಾರಾಯಣ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ..
ಬಾಲನಟ ಮಾಸ್ಟರ್ ಆಯರೆನ್ ರಾಮನಾಗಿ ಅಭಿನಯಿಸಿದ್ದಾರೆ. ಕೆ.ಕಲ್ಯಾಣ್ ಅವರ ಸಾಹಿತ್ಯ ಮತ್ತು ಸಂಗೀತವಿದೆ. ಗಿರೀಶ್ ಕಾಸರವಳ್ಳಿ ಅವರು ಸಂಭಾಷಣೆ ಮತ್ತು ಚಿತ್ರಕಥೆ ಬರೆದಿದ್ದಾರೆ. ಸ್ಟ್ರೋಯ್ನಿ ಜೋಸೆಫ್ ಪಾಯ್ಸ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ..
‘ಒಂದಂಕೆ ಕಾಡು’ ಮೋಷನ್ ಪೋಸ್ಟರ್ ರಿಲೀಸ್… ಕಿರುತೆರೆಯಿಂದ ಬೆಳ್ಳಿತೆರೆಗೆ ಬಂದ ನಿರ್ದೇಶಕ ರಾಮಚಂದ್ರ ವೈದ್ಯ
Devadas Kapikad : ತುಳು ಸಿನಿಮಾರಂಗದ ಆಲ್ ರೌಂಡರ್ ದೇವದಾಸ್ ಕಾಪಿಕಾಡ್ ರಿಗೆ ಗೌರವ ಡಾಕ್ಟರೇಟ್