Hombale Films – ಸುಧಾ ಕೊಂಗರ ಸಿನಿಮಾಗೆ ಸೂರ್ಯ ನಾಯಕ ಅಲ್ಲ..!!!
ನಿರ್ದೇಶಕಿ ಸುಧಾ ಕೊಂಗರ ಅವರು ತಮಿಳು ಸಿನಿಮಾರಂಗದಲ್ಲಿ ಕಂಟೆಂಟ್ ಬೇಸ್ಡ್ , ಹಾಗೂ ವಿಭಿನ್ನ ಸಿನಿಮಾಗಳನ್ನ ಮಾಡುವ ನಿರ್ದೇಶಕರ ಪೈಕಿ ಒಬ್ಬರು.. ಈ ಹಿಂದೆ ಸೂರ್ಯ ನಟನೆಯ `ಸೂರರೈ ಪೋಟ್ರು’ ನಿರ್ದೇಶನ ಮಾಡಿ ಗಮನ ಸೆಳೆದಿದ್ದರು. ಈ ಸಿನಿಮಾ ಆಸ್ಕರ್ ರೇಸ್ ನಲ್ಲಿಯೂ ಇತ್ತು.. ಅಂದ್ಹಾಗೆ ಇದೀಗ ಸುದಾ ಅವರು ಹೊಂಬಾಳೆ ಫಿಲಮ್ಸ್ ಜೊತೆಗೆ ಕೆಲಸ ಮಾಡುವ ಅವಕಾಶ ಗಿಟ್ಟಿಸಿಕೊಂಡಿದ್ದು ಈ ಸುದ್ದಿ ಸಂಚಲನ ಸೃಷ್ಟಿ ಮಾಡಿದೆ.. ಅಲ್ಲದೇ ಈ ಸಿನಿಮಾಗೆ ನಾಯಕ ಯಾರೆಂಬ ಕುತೂಹಲ ಎಲ್ಲರನ್ನೂ ಕಾಡುತ್ತಿದೆ..
ಆದ್ರೆ ಹಲವರು ಈ ಸಿನಿಮಾಗೆ ತಮಿಳಿನ ಸ್ಟಾರ್ ನಟ ಸೂರರೈ ಪೊಟ್ರು , ಜೈ ಭೀಮ್ ಸಿನಿಮಾಗಳ ಖ್ಯಾತಿಯ ಸೂರ್ಯ ನಾಯಕನಾಗಬಹುದೆಂದೇ ಊಹಿಸುತ್ತಿದ್ಧಾರೆ..
ಆದ್ರೆ ಸೂರ್ಯ ಈ ಸಿನಿಮಾದ ನಾಯಕನಲ್ಲ ಎಂದು ಹೇಳಲಾಗ್ತಿದೆ..
ವರದಿಯ ಪ್ರಕಾರ ಸೂರ್ಯ ಅವರ ಮುಂದಿನ ಚಿತ್ರವು ಅವರ ಸ್ವಂತ ಬ್ಯಾನರ್‌ನಿಂದ ನಿರ್ಮಾಣವಾಗಲಿದೆ ಮತ್ತು ಇದು ಜೀವನಚರಿತ್ರೆಯಾಗಲಿದೆ. ಸುಧಾ ಕೊಂಗರ ಅವರೊಂದಿಗಿನ ಸೂರ್ಯ ಅವರ ಮುಂದಿನ ಪ್ರಾಜೆಕ್ಟ್ ಗೆ ಸಾಕಷ್ಟು ಸಮಯ ಬೇಕು..
ಸುಧಾ ಅವರು ಹೊಂಬಾಳೆ ಜೊತೆಗೆ ಕೈ ಜೋಡಿಸಿದ್ದು ಈ ಹೊಸ ಸಿನಿಮಾಗೆ ಸೂರ್ಯ ನಾಯಕ ಅಲ್ಲ ಎನ್ನುವುದು ಬಹುತೇಕ ಖಚಿತ.. ಯಾಕೆಂದ್ರೆ ಸೂರ್ಯ ಸದ್ಯಕ್ಕೆ ಬೇರೆ ಬೇರೆ ಪ್ರಾಜೆಕ್ಟ್ ಗಳಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಿದ್ಧಾರೆ..
ಸೂರ್ಯ ಪ್ರಸ್ತುತ ಬಾಲಾ ನಿರ್ದೇಶನದ ತಮ್ಮ 41 ನೇ ಚಿತ್ರದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದು, ಚಿತ್ರತಂಡ ಕನ್ಯಾಕುಮಾರಿಯಲ್ಲಿ ಚಿತ್ರೀಕರಣಕ್ಕಾಗಿ ಬೀಡುಬಿಟ್ಟಿದೆ.