Jersey : ರಾಕಿ ಅಬ್ಬರದ ಮುಂದೆ ನಡೆಯಲಿಲ್ಲ ಜೆರ್ಸಿ ಅಬ್ಬರ..!!!
KGF 2 ಗೆ ಟಕ್ಕರ್ ಕೊಡಬಲ್ಲೇ ಅನ್ನೋ ಭ್ರಮೆಯಿಂದ ಹೊರಬಂದು ಬಿಡುಗೆಡೆಗೆ 2 ದಿನ ಬಾಕಿಯಿದ್ದಾಗಲೇ ಹಿಂದೆ ಸರಿದಿದ್ದ ಬಾಲಿವುಡ್ ನ ಶಾಹೀದ್ ಕಪೂರ್ ನಟನೆಯ ಜೆರ್ಸಿ ಸಿನಿಮಾ ಕಡೆಗೂ ರಿಲೀಸ್ ಆಗಿದೆ…
ಇಂದು ( ಏಪ್ರಿಲ್ 22 ) ರಿಲೀಸ್ ಆಗಿರುವ ಜೆರ್ಸಿ ಸಿನಿಮಾದ ಭವಿಷ್ಯ ಕಷ್ಟ ಅಂತ ಈಗಾಗಲೇ ಸಿನಿಮಾ ಪಂಡಿತರು ಭವಿಷ್ಯ ನುಡಿದಾಗಿದೆ.. ಯಾಕಂದ್ರೆ ರಿಲೀಸ್ ಆಗಿ ವಾರವೇ ಕಳೆದ್ರೂ KGF 2 ಅಬ್ಬರ ಕಡಿಮೆಯಾಗಿಲ್ಲ.. ರಾಕಿ ಭಾಯ್ ಎದುರು ಜೆರ್ಸಿ ಸರ್ವೈವ್ ಆಗೋದು ಕಷ್ಟ ಎಂದೇ ಸಿನಿ ಪಂಡಿತರು ಹೇಳಿದ್ದಾರೆ.. KGF 2 ಇನ್ನೂ ಒಂದೆರೆಡು ವಾರಗಳ ಕಾಲ ಭಾರತದಾದ್ಯಂತ ಇಷ್ಟೇ ಅಬ್ಬರದಲ್ಲೇ ಪ್ರದರ್ಶನ ಕಾಣಲಿದ್ದು , ಈ ಸಿನಿಮಾದ ಮುಂದೆ ಜೆರ್ಸಿ ನೆಲೆ ನಿಲ್ಲೋದಕ್ಕೆ ಸಾಧ್ಯವೆ ಇಲ್ಲ ಎನ್ನುತ್ತಿದ್ದಾರೆ.. ಆದ್ರೂ ಜೆರ್ಸಿ ಟೀಮ್ ಧೈರ್ಯ ಮಾಡಿ ಸಿನಿಮಾ ರಿಲೀಸ್ ಮಾಡಿದೆ..
ಶಾಹಿದ್ ಕಪೂರ್ ಜೆರ್ಸಿ ಸಿನಿಮಾ ಕೆಜಿಎಫ್ 2 ಎದುರು ಬಾಕ್ಸ್ ಆಫೀಸ್ ನಲ್ಲಿ ನೆಲೆ ನಿಲ್ಲಲು ಹರಸಾಹಸ ಪಡ್ತಿದೆ.. ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗ್ತಿದೆ..
ಶಾಹಿದ್ ಕಪೂರ್ ಅಭಿನಯದ ಜೆರ್ಸಿಯು ಟಿಕೆಟ್ ಕೌಂಟರ್‌ಗಳಲ್ಲಿ ಡಲ್ ಹೊಡಿತಿದೆ.. ದೇಶಾದ್ಯಂತ KGF 2 ಹೌಸ್ ಫುಲ್ ಆಗಿದೆ..ಬಾಕ್ಸ್ ಆಫೀಸ್ ಇಂಡಿಯಾ ವರದಿಯ ಪ್ರಕಾರ, ಜರ್ಸಿ ತನ್ನ ಆರಂಭಿಕ ದಿನದಲ್ಲಿ 3.75 ಕೋಟಿ ರೂ. ಹಿಂದಿ ಬೆಲ್ಟ್‌ನಲ್ಲಿ 11.56 ಕೋಟಿ ಗಳಿಸಿದೆ.. ಅಂದ್ರೆ KGF 2 ನ 9 ನೇ ದಿನದ ಕಲೆಕ್ಷನ್ ಗಿಂತಲೂ ಅತೀ ಕಡಿಮೆ…