KGF 2 : “ಪಕ್ಕಾ ಫ್ಯಾಮಿಲಿ ಮೆನ್” ಯಶ್ ಎಂದ ನೆಟ್ಟಿಇಗರು : ಗೋವಾದಲ್ಲಿ ಯಶ್ ಫ್ಯಾಮಿಲಿ
ಇಡೀ ದೇಶಾದ್ಯಂತ ಬಾಕ್ಸ್ ಆಫೀಸ್ ನಲ್ಲಿ ತೂಫಾನ್ ಎಬ್ಬಿಸಿರುವ KGF 2 ಸಕ್ಸಸ್ ನಲ್ಲಿರುವ ಯಶ್ ಸದ್ಯ ಪತ್ನಿ ಸ್ಯಾಂಡಲ್ ವುಡ್ ನಟಿ ರಾಧಿಕಾ ಪಂಡಿತ್ ಹಾಗೂ ತಮ್ಮ ಮಕ್ಕಳ ಜೊತೆಗೆ ಗೋವಾದಲ್ಲಿ ಜಾಲಿ ಟ್ರಿಪ್ ಎಂಜಾಯ್ ಮಾಡಿದ್ದಾರೆ.. ಅವರನ್ನ ನೆಟ್ಟಿಗರು ಪಕ್ಕಾ ಫ್ಯಾಮಿಲಿ ಮೆನ್ ಎಂದು ಕರೆದು ಕೊಂಡಾಡುತ್ತಿದ್ದಾರೆ..
ಯಶ್, ರಾಧಿಕಾ ಹಾಗೂ ಮಕ್ಕಳು ಗೋವಾದ ಖಾಸಗಿ ಬೀಚ್‌ನಲ್ಲಿ ಕ್ವಾಲಿಟಿ ಟೈಮ್ ಸ್ಪೆಂಡ್ ಮಾಡಿದ್ದಾರೆ. ಗೋವಾದ ವಿಮಾನ ನಿಲ್ದಾಣದಲ್ಲಿ ಮಕ್ಕಳೊಂದಿಗೆ ಯಶ್-ರಾಧಿಕಾ ಕಾಣಿಸಿಕೊಂಡಿದ್ದಾರೆ.
ಅಂದ್ಹಾಗೆ ಯಶ್ ಫ್ಯಾಮಿಲಿ ಎಲ್ಲರಿಗೂ ತುಂಬಾ ಇಷ್ಟ.. ಯಶ್ ರಾಧಿಕಾ ಪಂಡಿತ್ ಕ್ಯೂಟ್ ಕಪಲ್.. ಅವರ ಮಕ್ಕಳು ಸಹ ಸಿಕ್ಕಾಪಟ್ಟೆ ಕ್ಯೂಟ್ ಜೊತೆಗೆ ಫೇಮಸ್ ಕೂಡ.. ಯಶ್ ರಾಧಿಕಾ ಪಂಡಿತ್ ಮಕ್ಕಳ ಜೊತೆಗಿನ ಮುದ್ದು ಮುದ್ದಾದ ಫೋಟೋ ವಿಡಿಯೋಗಳನ್ನ ಆಗಾಗ ಹಂಚಿಕೊಳ್ಳುತ್ತಾರೆ.. KGF 2 ಸದ್ಯ ಬಾಕ್ಸ್ ಆಫೀಸ್ ನಲ್ಲಿ 9 ದಿನಗಳಿಗೆ 800 ಕೋಟಿ ಕಲೆಕ್ಷನ್ ದಾಟಿದೆ..