RRR ಸಿನಿಮಾದ ಮೂಲಕ ದೇಶಾದ್ಯಂತ ಸಂಚಲನ ಸೃಷ್ಟಿ ಮಾಡಿದ ಬಾಹುಬಲಿ ಸಾರಥಿ , ಸ್ಟಾರ್ ನಿರ್ದೇಶಕ SS ರಾಜಮೌಳಿ ಅವರು ದುಬಾರಿ ವೋಲ್ವೋ ಎಕ್ಸ್‌ಸಿ 40 ಕಾರು ಖರೀದಿಸಿದ್ದಾರೆ.
ಈ ಸಂದರ್ಭದಲ್ಲಿ ವೋಲ್ವೋ ಕಾರ್ಸ್ ಇಂಡಿಯಾ ವಕ್ತಾರ ರಾಜಮೌಳಿ ಅವರಿಗೆ ಕಾರ್ ಲಾಕ್ ಗಳನ್ನು ನೀಡಿದ್ದು ಫೋಟೋಗಳನ್ನು Instagram ನಲ್ಲಿ ಹಂಚಿಕೊಂಡಿದೆ.
ರಾಜಮೌಳಿ ಖರೀದಿಸಿರುವ ಫ್ಯೂಷನ್ ರೆಡ್ ಕಾರಿನ ಬೆಲೆ ಸುಮಾರು ರೂ. 44.50 ಲಕ್ಷ.
ಇದು ಪನೋರಮಿಕ್ ಸನ್‌ರೂಫ್, ವೈರ್‌ಲೆಸ್ ಚಾರ್ಜಿಂಗ್, ಡ್ಯುಯಲ್ ಝೋನ್ ಕ್ಲೈಮೇಟ್ ಕಂಟ್ರೋಲ್‌ನಂತಹ ಹಲವು ಪ್ರಮುಖ ವೈಶಿಷ್ಟ್ಯಗಳನ್ನು ಹೊಂದಿದೆ.
ಇನ್ನು ಸಿನಿಮಾಗಳ ವಿಚಾರಕ್ಕೆ ಬಂದರೆ, ಸದ್ಯ RRR ಯಶಸ್ಸಿನ ಖುಷಿಯಲ್ಲಿರುವ ರಾಜಮೌಳಿ ಶೀಘ್ರದಲ್ಲೇ ಮಹೇಶ್ ಬಾಬು ಜೊತೆ ಸಿನಿಮಾ ಮಾಡಲಿದ್ದಾರೆ.