Rakhi Sawanth : ಡ್ರಾಮಾ ಕ್ವೀನ್ ರಾಖಿ ಸಾವಂತ್ ವಿರುದ್ಧ ಈಗ FIR
ಮುಂಬೈ: ಒಂದಲ್ಲಾ ಒಂದು ವಿಚಾರದಲ್ಲಿ ಸುದ್ದಿಯಾಗುತ್ತಲೇ , ಟ್ರೋಲ್ ಆಗ್ತಲೇ ಪೆದ್ದಿ ಪೆದ್ದಿಯಂತೆ ವರ್ತಿಸುತ್ತಾ , ಕೆಲವೊಮ್ಮೆ ದಡ್ಡರ ರೀತಿ ಹೇಳಿಕೆಗಳನ್ನ ನೀಡುವ ರಾಖಿ ಸಾವಂತ್ ವಿರುದ್ಧ ಈಗ FIR ದಾಖಲಾಗಿದೆ..
ಬುಡಕಟ್ಟು ಸಮುದಾಯದ ವೇಷ ಭೂಷಣ ತೊಟ್ಟು ಅಪಹಾಸ್ಯ ಮಾಡಿದ್ದಾರೆ ಎನ್ನುವ ಕಾರಣಕ್ಕಾಗಿ ರಾಕಿ ಸಾವಂತ್ ವಿರುದ್ಧ ದೂರು ದಾಖಲಾಗಿದೆ.. ಅಜಯ್ ಠಾಕ್ರೆ ಎಂಬುವವರು ದೂರು ನೀಡಿದ್ದು, ದೂರಿನಲ್ಲಿ ರಾಕಿ ಬುಡಕಟ್ಟು ವೇಷಭೂಷಣಕ್ಕೆ ಅಪಮಾನ ಮಾಡಿದ್ದಾರೆ.
ಅದನ್ನೂ ಅವರು ಅರೆನಗ್ನ ರೀತಿಯಲ್ಲಿ ಹಾಕಿಕೊಂಡಿದ್ದಾರೆ. ಇದರಿಂದ ನಮ್ಮ ಸಮುದಾಯದ ಮಹಿಳೆಯರಿಗೆ ಅವಮಾನ ಆಗಿದೆ. ನಾವು ಗೌರವಿಸುವ ಸಂಪ್ರದಾಯಕ್ಕೆ ಧಕ್ಕೆ ತರುವಂತಹ ಕೆಲಸವನ್ನು ರಾಕಿ ಮಾಡಿದ್ದಾರೆ. ಹಾಗಾಗಿ ಸೂಕ್ತ ಕ್ರಮ ತಗೆದುಕೊಳ್ಳಬೇಕೆಂದು ಉಲ್ಲೇಖಿಸಿದ್ದಾರೆ.