Vishnu Vishal : ಸಡನ್ ಆಗಿ ವಿಷ್ಣು ವಿಶಾಲ್ ತೆಗೆದುಕೊಂಡ ಈ ನಿರ್ಧಾರದಿಂದ ಫ್ಯಾನ್ಸ್ ಶಾಕ್
ಕಾಲಿವುಡ್ ನ ಅತ್ಯಂತ ಪ್ರತಿಭಾವಂತ ನಟರಲ್ಲಿ ಒಬ್ಬರಾದ ವಿಷ್ಣು ವಿಶಾಲ್ ಅವರು ಅವರು ವಿಶಿಷ್ಟವಾದ ಕಥಾಹಂದರಹಗಳ ಸಿನಿಮಾಗಳ ಮೂಲಕವೇ ಗಮನ ಸೆಳೆದವರು.. FIR ಸಿನಿಮಾ ಅವರಿಗೆ ಹೆಚ್ಚು ಖ್ಯಾತಿ ಗಳಿಸಿಕೊಟ್ಟಿತ್ತು..
ಇದೀಗ ಈ ನಟ ಒಂದು ಹಠಾತ್ ನಿರ್ಧಾರ ತೆಗೆದುಕೊಂಡು ಅಭಿಮಾನಿಗಳುಗೆ ಶಾಕ್ ನೀಡಿದ್ದಾರೆ.. ಅಂದ್ಹಾಗೆ ಸೋಷಿಯಲ್ ಮೀಡಿಯಾದಿಂದ ಕೆಲ ಸಮಯದವರೆಗೂ ದೂರವಿರಲು ವಿಷ್ಣು ವಿಶಾಲ್ ನಿರ್ಧಾರ ಮಾಡಿದ್ದಾರೆ.
ವಿಷ್ಣು ವಿಶಾಲ್ ತಮ್ಮ ಟ್ವಿಟ್ಟರ್ ಪೋಸ್ಟ್‌ನಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದು “ಹಲೋ ಗೆಳೆಯರೇ… ಜೀವನದಲ್ಲಿ ವಿರಾಮ ತೆಗೆದುಕೊಳ್ಳುವುದು ಬಹಳ ಮುಖ್ಯ… ಸಾಮಾಜಿಕ ಜಾಲತಾಣಗಳಿಂದ ಸ್ವಲ್ಪ ಸಮಯ ವಿರಾಮ ತೆಗೆದುಕೊಳ್ಳುವೆ. ಶೀಘ್ರದಲ್ಲೇ ನಿಮ್ಮನ್ನು ಭೇಟಿ ಮಾಡುತ್ತೇವೆ ” “ಡಿಟಾಕ್ಸ್ ಮೋಡ್ ಆನ್” ಎಂದು ಬರೆದುಕೊಂಡಿದ್ಧಾರೆ.. ಆದ್ರೆ ಈ ನಿರ್ಧಾರದ ಹಿಂದಿನ ಕಾರಣ ತಿಳಿಸಿಲ್ಲ.. ಇದ್ರಿಂದಾಗಿ ಅಭಿಮಾನಿಗಳು ಗೊಂದಲದಲ್ಲಿದ್ದಾರೆ.. ತಮ್ಮ ನೆಚ್ಚಿನ ನಟನಿಗೆ ಏನಾಗಿದೆ ಎಂಬ ಆತಂಕದಲ್ಲೂ ಇದ್ದಾರೆ,.
ಅಂದ್ಹಾಗೆ ವಿಷ್ಣು ದ್ವಿಭಾಷಾ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಿದ್ದಾರೆ.. ಜೊತೆಗೆ ಅವರ ಅಭಿನಯದ ‘ಮೋಹನದಾಸ್’ ಚಿತ್ರದ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಒಂದೆರಡು ವಾರಗಳ ಹಿಂದಷ್ಟೇ ಈ ಸಿನಿಮಾದ ಟೀಸರ್ ಬಿಡುಗಡೆಯಾಗಿತ್ತು. ‘ಮೋಹನದಾಸ್’ ಚಿತ್ರದಲ್ಲಿ ವಿಷ್ಣು ವಿಶಾಲ್, ಐಶ್ವರ್ಯ ರಾಜೇಶ್, ಇಂದ್ರಜಿತ್ ಸುಕುಮಾರನ್, ಕರುಣಾಕರನ್, ಲಲ್ಲು ಇದ್ದಾರೆ.
Vishnu Vishal : sudden decision leaves fans in shock